2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಯವರಿಗೆ (Rahul Gandhi) ಸೂರತ್ ನ್ಯಾಯಾಲಯವು ಗುರುವಾರ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ನಂತರ ಅವರನ್ನು ಸಂಸದ (Member of Parliament) ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ತೀರ್ಪು ಪ್ರಕಟಿಸಿದ ನಂತರ ವಯನಾಡ್ ಸಂಸದ ರಾಹುಲ್ಗೆ ಜಾಮೀನು ನೀಡಲಾಗಿದ್ದು, ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯವು 30 ದಿನಗಳ ಕಾಲ ಶಿಕ್ಷೆಯನ್ನು ಅಮಾನತುಗೊಳಿಸಿದೆ. 2019 ರ ಏಪ್ರಿಲ್‌ನಲ್ಲಿ ಸೂರತ್ ಪಶ್ಚಿಮದ ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ನೀಡಿದ ದೂರಿನ ಮೇರೆಗೆ 2019 ರ ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರದಲ್ಲಿ ರಾಹುಲ್ ಗಾಂಧಿಯವರ ಹೇಳಿಕೆಗಾಗಿ ಐಪಿಸಿ 499 ಮತ್ತು 500 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಜನಪ್ರತಿನಿಧಿ ಕಾಯಿದೆಯ ಪ್ರಕಾರ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ‘ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ’ ಅನರ್ಹಗೊಳಿಸಲಾಗುತ್ತದೆ. ಇದಾದ ನಂತರ ಆರು ವರ್ಷಗಳವರೆಗೆ ಅನರ್ಹರಾಗಿಯೇ ಇರುತ್ತಾರೆ.
‘ಚೌಕಿದಾರ್ ಚೋರ್ ಹೈ‘: ‘ಚೌಕಿದಾರ್ (ಪಿಎಂ ಮೋದಿ) ಕಳ್ಳ’ ಎಂದು ಸುಪ್ರೀಂಕೋರ್ಟ್ ಹೇಳಿತ್ತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದು ಗದ್ದಲಕ್ಕೆ ಕಾರಣವಾಯಿತು. ಸುಪ್ರೀಂಕೋರ್ಟ್ ನೀಡಿದ ರಫೇಲ್ ತೀರ್ಪಿನ ಬಗ್ಗೆ ರಾಹುಲ್ ಈ ರೀತಿ ಪ್ರತಿಕ್ರಿಯಿಸಿದ್ದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
‘ಚೌಕಿದಾರ್ ಚೋರ್ ಹೈ’ ಎಂಬ ರಾಜಕೀಯ ಘೋಷಣೆಯನ್ನು ಸುಪ್ರೀಂಕೋರ್ಟ್ ಹೇಳಿದ್ದು ಎಂದು ಆರೋಪಿಸಿದ್ದಕ್ಕಾಗಿ ರಾಹುಲ್ ಗಾಂಧಿ ಅವರು ಸುಪ್ರೀಂಕೋರ್ಟ್‌ನಲ್ಲಿ ಬೇಷರತ್ ಕ್ಷಮೆಯಾಚಿಸಿದರು.
ರಫೇಲ್ ಒಪ್ಪಂದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರನ್ನು ‘ಕಮಾಂಡರ್ ಇನ್ ಥೀಫ್’ ಎಂದು ಕರೆದಿದ್ದಕ್ಕಾಗಿ ಮುಂಬೈ ನ್ಯಾಯಾಲಯವೊಂದು ಅವರಿಗೆ ಸಮನ್ಸ್ ನೀಡಿದೆ. ನಂತರ ಅವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದರು, ಅಲ್ಲಿ ಅವರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದರು.
2019ರಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಚೋರ್ ಎಂದಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಭಾರತದ ಸುಪ್ರೀಂಕೋರ್ಟ್ ಕೈಬಿಟ್ಟಿತು. ಪ್ರಮುಖ ರಾಜಕೀಯ ವ್ಯಕ್ತಿಯಾಗಿರುವ ಗಾಂಧಿ ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿರಲು ಸುಪ್ರೀಂಕೋರ್ಟ್ ಹೇಳಿತ್ತು. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ, ರಾಹುಲ್ ಗಾಂಧಿ ಅವರು ರಾಜಕೀಯ ಪ್ರಚಾರದ ಬಿಸಿಯಲ್ಲಿ ತಮ್ಮ ನಾನು ಈ ರೀತಿ ಹೇಳಿಜ್ಜು ಅದನ್ನು ತಮ್ಮ ವಿರೋಧಿಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂದಿದ್ದರು.
ಇದನ್ನೂ ಓದಿ: Rahul Gandhi: ಇದು ದೇಶಕ್ಕಾಗಿ ಹೋರಾಟ, ಯಾವುದೇ ಬೆಲೆ ತೆರಲು ಸಿದ್ಧ: ರಾಹುಲ್ ಗಾಂಧಿ
ಮಹಾತ್ಮಾ ಗಾಂಧಿಯನ್ನು ಕೊಂದದ್ದು ಆರ್‌ಎಸ್‌ಎಸ್: 2014 ರಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸ್ಥಳೀಯ ಪದಾಧಿಕಾರಿ ರಾಜೇಶ್ ಕುಂಟೆ ಅವರು ಥಾಣೆಯ ಭಿವಂಡಿ ಟೌನ್‌ಶಿಪ್‌ನಲ್ಲಿ ರಾಹುಲ್ ಗಾಂಧಿ ಅವರ ಭಾಷಣ ವಿರುದ್ಧ ಪ್ರಕರಣ ದಾಖಲಿಸಿದ್ದರು.ಅಲ್ಲಿ ರಾಹುಲ್, ಮಹಾತ್ಮ ಗಾಂಧಿ ಹತ್ಯೆಯ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಖುದ್ದು ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡುವಂತೆ ರಾಹುಲ್ ಗಾಂಧಿ ಮನವಿ ಮಾಡಿದ್ದರು.2018 ರಲ್ಲಿ, ನ್ಯಾಯಾಲಯವು ಈ ಪ್ರಕರಣದಲ್ಲಿ ಗಾಂಧಿ ವಿರುದ್ಧ ಆರೋಪಗಳ ವಿಚಾರಣೆ ನಡೆಸಿ ನಿರ್ದೋಷಿ ಎಂದು ಹೇಳಿತು. ಮಹಾರಾಷ್ಟ್ರದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಎದುರಿಸುತ್ತಿರುವ ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿಯವರ ಹತ್ಯೆಗೆ ಆರ್‌ಎಸ್‌ಎಸ್ ಅನ್ನು ಎಂದಿಗೂ ದೂಷಿಸಲಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದರು.
ಆರೆಸ್ಸೆಸ್ ಸ್ವಯಂಸೇವಕ ಅಂಜನ್ ಬೋರಾ ಅವರು ಸಂಘಟನೆಯ ಪ್ರತಿಷ್ಠೆಯನ್ನು ಹಾಳುಮಾಡಲು ಸುಳ್ಳು ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ ನಂತರ ಗುವಾಹಟಿ ನ್ಯಾಯಾಲಯವು ಅವರಿಗೆ ಸಮನ್ಸ್ ನೀಡಿತು.
ರೇಪ್ ಇನ್ ಇಂಡಿಯಾ: ಜಾರ್ಖಂಡ್‌ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್ ಇನ್ ಇಂಡಿಯಾ’ ಎಂದು ಹೇಳಿದ್ದಾರೆ. ಆದರೆ ಇಂದು ನಾವು ನೋಡುತ್ತಿರುವುದು “ರೇಪ್ ಇನ್ ಇಂಡಿಯಾ” ಎಂದಿದ್ದರು. ಮೋದಿ ಸರ್ಕಾರ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, “ಜಾರ್ಖಂಡ್‌ನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ, ಉತ್ತರ ಪ್ರದೇಶದಲ್ಲಿ, ಬಿಜೆಪಿ ಶಾಸಕ (ಕುಲದೀಪ್ ಸೆಂಗರ್) ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆ, ಪ್ರತಿ ರಾಜ್ಯದಲ್ಲೂ ಪ್ರತಿದಿನ ಅತ್ಯಾಚಾರಗಳು ನಡೆಯುತ್ತಿವೆ. ಪ್ರಧಾನಿ ಮೋದಿ ಕೂಡ ಹೇಳಿದ್ದಾರೆ. ‘ಬೇಟಿ ಬಚಾವೋ, ಬೇಟಿ ಪಢಾವೋ’ (ಹೆಣ್ಣುಮಕ್ಕಳನ್ನು ರಕ್ಷಿಸಿ ಮತ್ತು ಅವರಿಗೆ ಶಿಕ್ಷಣ ನೀಡಿ), ಆದರೆ ಹೆಣ್ಣು ಮಕ್ಕಳನ್ನು ಯಾರಿಂದ ರಕ್ಷಿಸಬೇಕು ಎಂದು ಮೋದಿ ಹೇಳಲಿಲ್ಲ. ಅವರನ್ನು ಬಿಜೆಪಿ ಶಾಸಕರಿಂದ ರಕ್ಷಿಸಬೇಕೇ? ಎಂದು ಕೇಳಿದ್ದರು.
ಇದಕ್ಕೆ ಪ್ರತಿಯಾಗಿ ಸಾಮಾಜಿಕ ಕಾರ್ಯಕರ್ತರೊಬ್ಬರು ರಾಹುಲ್ ಗಾಂಧಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದು, ಅವರ ಹೇಳಿಕೆ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Rahul Gandhi disqualified: ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹ; ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ?
‘ಖೂನ್ ಕಿ ದಲಾಲಿ’: ಸೇನೆಯ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ರಾಜಕೀಯ ಲಾಭ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ‘ಖೂನ್ ಕಿ ದಲಾಲಿ’ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ 2016 ರಲ್ಲಿ ಹೇಳಿದ್ದರು. ಹಮಾರೇ ಜವಾನ್ ಹೈ ಜಿನ್ಹೋನೇ ಖೂನ್ ದಿಯಾ ಹೈ, ಜಿನ್ಹೋನೆ ಸರ್ಜಿಕಲ್ ಸ್ಟ್ರೈಕ್ ಕಿಯಾ, ಉನ್ಕೇ ಖೂನ್ ಕೇ ಪೀಚೆ ಆಪ್ (ಪಿಎಂ) ಚುಪೇ ಹುವೇ ಹೋ. (ನೀವು ಸೈನಿಕರ ಹಿಂದೆ ಅಡಗಿದ್ದೀರಿ, ಅವರ ರಕ್ತವನ್ನು ನೀಡಿದವರು ಮತ್ತು ಸರ್ಜಿಕಲ್ ಸ್ಟ್ರೈಕ್ ನಡೆಸಿದವರು)” ಎಂದು ರಾಹುಲ್ ಗಾಂಧಿ ಹೇಳಿದ್ದರು.
ನಂತರ ರಾಹುಲ್ ಟ್ವಿಟರ್‌ನಲ್ಲಿ ಸ್ಪಷ್ಟೀಕರಣವನ್ನು ನೀಡಿದ್ದು, ತಾನು ಭಯೋತ್ಪಾದಕರ ವಿರುದ್ಧದ ಸರ್ಜಿಕಲ್ ಸ್ಟ್ರೈಕ್‌ಗಳನ್ನು ಬೆಂಬಲಿಸುತ್ತೇನೆ, ಆದರೆ ರಾಜಕೀಯ ಪೋಸ್ಟರ್‌ಗಳು ಮತ್ತು ಪ್ರಚಾರದಲ್ಲಿ ಭಾರತೀಯ ಸೇನೆಯ ಬಳಕೆಯನ್ನು ಎಂದಿಗೂ ಅನುಮೋದಿಸುವುದಿಲ್ಲ ಎಂದು ಹೇಳಿದ್ದಾರೆ.
ಅಮಿತ್ ಶಾ ಬಗ್ಗೆ ಟೀಕೆಗಳು: ಜಬಲ್‌ಪುರದಲ್ಲಿ ಲೋಕಸಭೆ ಚುನಾವಣಾ ಪ್ರಚಾರ ಭಾಷಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು “ಕೊಲೆ ಆರೋಪಿ” ಎಂದು ಉಲ್ಲೇಖಿಸಿದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ಮೇ 2019 ರಲ್ಲಿ ಪ್ರಕರಣ ದಾಖಲಿಸಲಾಗಿತ್ತು. 2015 ರಲ್ಲಿ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಶಾ ಅವರನ್ನು ಬಿಡುಡೆಗಗೊಳಿಸಲಾಗಿದೆ ಎಂದಿದ್ದರು ರಾಹುಲ್. ಈ ಹೇಳಿಕೆಯನ್ನು ಅಪಪ್ರಚಾರ ಎಂದ ಶಾ ಮಾನನಷ್ಟ ಮೊಕದ್ದಮೆ ಹೂಡಿದ್ದು, ಗುಜರಾತ್ ನ್ಯಾಯಾಲಯದಿಂದ ರಾಹುಲ್ ಗೆ ಜಾಮೀನು ನೀಡಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ