Rahul Gandhi disqualified: ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹ; ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಒಂದು ವೇಳೆ ಉನ್ನತ ನ್ಯಾಯಾಲಯವು ಶಿಕ್ಷೆಗೆ ತಡೆ ನೀಡಿದರೆ ಅಥವಾ ಅಪರಾಧಿ ಶಾಸಕರ ಪರವಾಗಿ ಮೇಲ್ಮನವಿಯನ್ನು ನಿರ್ಧರಿಸಿದರೆ ಅನರ್ಹತೆಯನ್ನು ಹಿಂಪಡೆಯಬಹುದು

Rahul Gandhi disqualified: ರಾಹುಲ್ ಗಾಂಧಿ ಲೋಕಸಭೆಯಿಂದ ಅನರ್ಹ; ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ರಾಹುಲ್ ಗಾಂಧಿ
Follow us
|

Updated on: Mar 24, 2023 | 5:51 PM

ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಸೂರತ್ ಕೋರ್ಟ್ (Surat Court) ತೀರ್ಪು ನೀಡಿದ ಒಂದು ದಿನದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಲೋಕಸಭೆಯಿಂದ (Loksabha) ಅನರ್ಹಗೊಳಿಸಲಾಗಿದೆ. ಲೋಕಸಭೆಯ ಸೆಕ್ರೆಟರಿಯೇಟ್ ನೀಡಿದ ನೋಟಿಸ್‌ನಲ್ಲಿ ಅವರು ಶಿಕ್ಷೆಯ ದಿನವಾದ ಮಾರ್ಚ್ 23 ರಿಂದ ಸದನದಿಂದ ಅನರ್ಹರಾಗಿದ್ದಾರೆ ಎಂದು ಹೇಳಿದೆ. ಮುಂದಿನ ನಡೆ ಏನೆಂದರೆ ರಾಹುಲ್ ಗಾಂಧಿ ಈಗ ಉನ್ನತ ನ್ಯಾಯಾಲಯದ ಮೊರೆ ಹೋಗಬೇಕು ಮತ್ತು ಅವರ ಅಪರಾಧಕ್ಕೆ ತಡೆ ನೀಡಬೇಕಾಗಿದೆ.

ಸೂರತ್ ಕೋರ್ಟ್ ನೀಡಿದ ತೀರ್ಪು ಏನು?

ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಹೆಚ್.ಹೆಚ್ ವರ್ಮಾ ಅವರು 2019 ರ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ತಪ್ಪಿತಸ್ಥರೆಂದು ಹೇಳಿದ್ದಾರೆ. ‘ಎಲ್ಲಾ ಕಳ್ಳರಿಗೆ ಮೋದಿ ಎಂಬ ಹೆಸರು ಏಕೆ ಇದೆ’ ಎಂದು ರಾಹುಲ್ ನೀಡಿದ ಹೇಳಿಕೆಯ ವಿಚಾರದಲ್ಲಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.2019 ರ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಕರ್ನಾಟಕದ ಕೋಲಾರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್, ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿಯವರೇ ಆಗಿರಲಿ, ಎಲ್ಲ ಕಳ್ಳರು ತಮ್ಮ ಹೆಸರಿನಲ್ಲಿ ಮೋದಿ ಸರ್​​ನೇಮ್ ಇದೆ ಎಂದಿದ್ದರು.

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 500 ಪ್ರಕಾರ, ಮಾನನಷ್ಟಕ್ಕಾಗಿ “ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿ, ಅಥವಾ ದಂಡ ಅಥವಾ ಎರಡೂ -ಹೀಗೆ ಸರಳ ಜೈಲು ಶಿಕ್ಷೆಯನ್ನು ರಾಹುಲ್ ಗಾಂಧಿಗೆ ವಿಧಿಸಲಾಗಿದೆ. ಗುರುವಾರ ನ್ಯಾಯಾಲಯವು 15,000 ರೂಪಾಯಿಗಳ ಶ್ಯೂರಿಟಿಯ ಮೇಲೆ ಗಾಂಧಿಯ ಜಾಮೀನನ್ನು ಅನುಮೋದಿಸಿದ್ದು ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲು ಶಿಕ್ಷೆಯನ್ನು 30 ದಿನಗಳವರೆಗೆ ಅಮಾನತುಗೊಳಿಸಿತು.

ಇದನ್ನೂ ಓದಿ: ನ್ಯಾಯಾಧೀಶರ ಹಿನ್ನೆಲೆ ಪರಿಶೀಲಬೇಕು: ರಾಹುಲ್ ಗಾಂಧಿ ಆರೋಪಿ ಎಂದು ತೀರ್ಪು ನೀಡಿದ ಜಡ್ಜ್​ ಮೇಲೆ ದಿನೇಶ್ ಗುಂಡೂರಾವ್ ಅನುಮಾನ

ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿದ್ದೇಕೆ?

ಶಾಸಕರ ಅನರ್ಹತೆಯನ್ನು ಮೂರು ಸಂದರ್ಭಗಳಲ್ಲಿ ಸೂಚಿಸಲಾಗುತ್ತದೆ. ಮೊದಲನೆಯದು ಆರ್ಟಿಕಲ್102 (1) ಮತ್ತು 191 (1) ಅನುಚ್ಛೇದಗಳ ಮೂಲಕ ಸಂಸತ್ತಿನ ಸದಸ್ಯರು ಮತ್ತು ಶಾಸಕಾಂಗ ಸಭೆಯ ಸದಸ್ಯರನ್ನು ಅನರ್ಹಗೊಳಿಸುವುದು. ಲಾಭದ ಪಡೆಯುವುದು, ದಿವಾಳಿತನ ಅಥವಾ ಮಾನ್ಯ ಪೌರತ್ವವನ್ನು ಹೊಂದಿರದಿರುವುದಕ್ಕೆ ಇದು ಅನ್ವಯವಾಗುತ್ತದೆ. ಅನರ್ಹತೆಯ ಎರಡನೇ ಸೂಚನೆಯು ಸಂವಿಧಾನದ ಹತ್ತನೇ ಶೆಡ್ಯೂಲ್‌ನಲ್ಲಿದೆ, ಇದು ಪಕ್ಷಾಂತರದ ಆಧಾರದ ಮೇಲೆ ಸದಸ್ಯರನ್ನು ಅನರ್ಹಗೊಳಿಸುವುದಕ್ಕೆ ಅವಕಾಶ ನೀಡುತ್ತದೆ. ಮೂರನೆಯ ಸೂಚನೆ ಜನ ಪ್ರತಿನಿಧಿ ಕಾಯಿದೆ (RPA), 1951 ರ ಅಡಿಯಲ್ಲಿದೆ. ಈ ಕಾನೂನು ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಅನರ್ಹತೆ ಮಾಡುತ್ತದೆ.

ಜನ ಪ್ರತಿನಿಧಿ ಕಾಯಿದೆ ಏನು ಹೇಳುತ್ತದೆ?

ಜನ ಪ್ರತಿನಿಧಿ ಕಾಯಿದೆ ಅಡಿಯಲ್ಲಿ ಅನರ್ಹತೆ ಮಾಡುವುದಕ್ಕೆ ಹಲವಾರು ನಿಬಂಧನೆಗಳಿವೆ. ಸೆಕ್ಷನ್ 9 ಭ್ರಷ್ಟಾಚಾರ ಅಥವಾ ವಿಶ್ವಾಸದ್ರೋಹಕ್ಕಾಗಿ ವಜಾಗೊಳಿಸಲು ಮತ್ತು ಶಾಸಕರಾಗಿದ್ದಾಗ ಸರ್ಕಾರಿ ಒಪ್ಪಂದಗಳಿಗೆ ಪ್ರವೇಶಿಸಿದ್ದಕ್ಕೆ ಅನರ್ಹತೆ ಮಾಡಲಾಗುತ್ತದೆ.ಸೆಕ್ಷನ್ 10 ಚುನಾವಣಾ ವೆಚ್ಚದ ಖಾತೆಯನ್ನು ಸಲ್ಲಿಸಲು ವಿಫಲವಾದರೆ ಮತ್ತು ಸೆಕ್ಷನ್ 11, ಭ್ರಷ್ಟ ಕೆಲಸ ಮಾಡಿದರೆ ಅಂಥವರನ್ನು ಅನರ್ಹ ಮಾಡಬಹುದೆಂದು ಹೇಳುತ್ತದೆ. ಆರ್​​ಪಿಎಯ ಸೆಕ್ಷನ್ 8 ಅಪರಾಧವೆಸಗಿದ್ದಕ್ಕೆ ಅನರ್ಹತೆ ಮಾಡುವಂತದ್ದು. ಈ ನಿಬಂಧನೆಯು ರಾಜಕೀಯದ ಅಪರಾಧ ತಡೆಗಟ್ಟುವುದು ಮತ್ತು ಕಳಂಕಿತ ಶಾಸಕರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯುವ ಗುರಿಯನ್ನು ಹೊಂದಿದೆ.

ಮೊದಲನೆಯದಾಗಿ, ದಿ ಪ್ರೆಸೆಂಟೇಶನ್ ಆಫ್ ದಿ ಪೀಪಲ್ ಆಕ್ಟ್‌ನ ಸೆಕ್ಷನ್ 8(1) ರಲ್ಲಿ ಪಟ್ಟಿ ಮಾಡಲಾದ ಕೆಲವು ಅಪರಾಧಗಳ ಅಡಿಯಲ್ಲಿ ಶಿಕ್ಷೆಗಾಗಿ ಅನರ್ಹತೆ ಮಾಡಲಾಗುತ್ತದೆ. ಇದು ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಲಂಚ, ಮತ್ತು ಚುನಾವಣೆಯಲ್ಲಿ ಅನಗತ್ಯ ಪ್ರಭಾವ ಅಥವಾ ವ್ಯಕ್ತಿತ್ವದಂತಹ ನಿರ್ದಿಷ್ಟ ಅಪರಾಧಗಳನ್ನು ಒಳಗೊಂಡಿದೆ. ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಜಂ ಖಾನ್ ಅವರು ದ್ವೇಷ ಭಾಷಣದ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಅಕ್ಟೋಬರ್ 2022 ರಲ್ಲಿ ಉತ್ತರ ಪ್ರದೇಶ ಅಸೆಂಬ್ಲಿ ಸದಸ್ಯತ್ವವನ್ನು ಕಳೆದುಕೊಂಡರು. ಮಾನನಷ್ಟ ಪ್ರಕರಣ ಈ ಪಟ್ಟಿಯಲ್ಲಿ ಬರುವುದಿಲ್ಲ.

ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಲೋಕಸಭಾ​ ಸದಸ್ಯತ್ವ ಅನರ್ಹ; ಬಿಜೆಪಿ ಸರ್ಕಾರದ ವಿರುದ್ಧ ಮುಗಿಬೀಳುತ್ತಿರುವ ಕಾಂಗ್ರೆಸ್

ಸೆಕ್ಷನ್ 8(2) – ವರದಕ್ಷಿಣೆ ನಿಷೇಧ ಕಾಯಿದೆಯ ಯಾವುದೇ ನಿಬಂಧನೆಗಳ ಅಡಿಯಲ್ಲಿ ಸಂಗ್ರಹಣೆ ಅಥವಾ ಲಾಭ, ಆಹಾರ ಅಥವಾ ಔಷಧಗಳ ಕಲಬೆರಕೆ ಮತ್ತು ಅಪರಾಧಕ್ಕಾಗಿ ಕನಿಷ್ಠ ಆರು ತಿಂಗಳ ಶಿಕ್ಷೆ ಮತ್ತು ಶಿಕ್ಷೆಗೆ ಸಂಬಂಧಿಸಿದ ಅಪರಾಧಗಳನ್ನು ಪಟ್ಟಿ ಮಾಡುತ್ತದೆ. ಸೆಕ್ಷನ್ 8(3)-ಯಾವುದೇ ಅಪರಾಧದಲ್ಲಿ ಶಿಕ್ಷೆಗೊಳಗಾದ ಮತ್ತು ಎರಡು ವರ್ಷಕ್ಕಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಅಂತಹ ಅಪರಾಧ ನಿರ್ಣಯದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ. ಅವರು ಬಿಡುಗಡೆಯಾದ ನಂತರ ಮುಂದಿನ ಆರು ವರ್ಷಗಳ ಅವಧಿಗೆ ಅನರ್ಹರಾಗಿರುತ್ತಾರೆ.

ಅನರ್ಹ ಆಗುವುದು ಯಾವಾಗ?

ಒಂದು ವೇಳೆ ಉನ್ನತ ನ್ಯಾಯಾಲಯವು ಶಿಕ್ಷೆಗೆ ತಡೆ ನೀಡಿದರೆ ಅಥವಾ ಅಪರಾಧಿ ಶಾಸಕರ ಪರವಾಗಿ ಮೇಲ್ಮನವಿಯನ್ನು ನಿರ್ಧರಿಸಿದರೆ ಅನರ್ಹತೆಯನ್ನು ಹಿಂಪಡೆಯಬಹುದು.2018 ರ ‘ಲೋಕ ಪ್ರಹರಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ನಲ್ಲಿನ ತೀರ್ಪಿನಲ್ಲಿ, ಅನರ್ಹಗೊಳಿಸುವಿಕೆಯು ಮೇಲ್ಮನವಿ ಸಲ್ಲಿಸಿದ ನ್ಯಾಯಾಲಯದಿಂದ ಅಪರಾಧ ನಿರ್ಣಯದ ತಡೆ ದಿನಾಂಕದಿಂದ ಕಾರ್ಯನಿರ್ವಹಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

ಈ ತಡೆಯು ಕೇವಲ ಕೋಡ್ ಆಫ್  ಕ್ರಿಮಿನಲ್ ಪ್ರೊಸೀಜರ್  (CrPC) ಸೆಕ್ಷನ್ 389 ರ ಅಡಿಯಲ್ಲಿ ಶಿಕ್ಷೆಯ ಅಮಾನತುಗೊಳಿಸುವಂತಿಲ್ಲ, ಆದರೆ ಅಪರಾಧದ ತಡೆಯಾಗಿದೆ. CrPC ಯ ಸೆಕ್ಷನ್ 389 ರ ಅಡಿಯಲ್ಲಿ, ಮೇಲ್ಮನವಿ ನ್ಯಾಯಾಲಯವು ಮೇಲ್ಮನವಿ ಬಾಕಿ ಇರುವಾಗ ಅಪರಾಧಿಯ ಶಿಕ್ಷೆಯನ್ನು ಅಮಾನತುಗೊಳಿಸಬಹುದು. ಇದು ಮೇಲ್ಮನವಿದಾರನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದಕ್ಕೆ ಅವಕಾಶ ನೀಡುತ್ತದೆ.

ಇದರರ್ಥ ರಾಹುಲ್ ಗಾಂಧಿಯವರ ಮೊದಲ ಮೇಲ್ಮನವಿ ಸೂರತ್ ಸೆಷನ್ಸ್ ನ್ಯಾಯಾಲಯದ ಮುಂದೆ ಮತ್ತು ನಂತರ ಗುಜರಾತ್ ಹೈಕೋರ್ಟ್ ಮುಂದೆ ಇರುತ್ತದೆ.

ಇದನ್ನೂ ಓದಿ: Congress party briefing: ಸಂಸತ್ತಿನ ಒಳಗೆ ಮತ್ತು ಹೊರಗೆ ನಿರ್ಭೀತಿಯಿಂದ ಮಾತನಾಡಿದ್ದಕ್ಕೆ ರಾಹುಲ್ ಗಾಂಧಿ ಬೆಲೆ ತೆರುತ್ತಿದ್ದಾರೆ: ಕಾಂಗ್ರೆಸ್

ಈ ಕಾನೂನು ಬದಲಾಗಿದ್ದು ಹೇಗೆ?

RPA ಅಡಿಯಲ್ಲಿ, ಸೆಕ್ಷನ್ 8(4) ಅನರ್ಹತೆಯು ಶಿಕ್ಷೆಯ ದಿನಾಂಕದಿಂದ ಮೂರು ತಿಂಗಳುಗಳು ಕಳೆದ ನಂತರ ಮಾತ್ರ ಜಾರಿಗೆ ಬರುತ್ತದೆ ಎಂದು ಹೇಳಿದೆ. ಆ ಅವಧಿಯೊಳಗೆ, ಶಾಸಕರು ಹೈಕೋರ್ಟ್‌ನಲ್ಲಿ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು. ಆದಾಗ್ಯೂ, ‘ಲಿಲಿ ಥಾಮಸ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ದಲ್ಲಿ 2013 ರ ಮಹತ್ವದ ತೀರ್ಪಿನಲ್ಲಿ, ಸುಪ್ರೀಂಕೋರ್ಟ್ RPA ಯ ಸೆಕ್ಷನ್ 8 (4) ಅನ್ನು ಅಸಂವಿಧಾನಿಕ ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!