Sign In

By signing in or creating an account, you agree with Associated Broadcasting Company's Terms & Conditions and Privacy Policy.

Congress party briefing: ಸಂಸತ್ತಿನ ಒಳಗೆ ಮತ್ತು ಹೊರಗೆ ನಿರ್ಭೀತಿಯಿಂದ ಮಾತನಾಡಿದ್ದಕ್ಕೆ ರಾಹುಲ್ ಗಾಂಧಿ ಬೆಲೆ ತೆರುತ್ತಿದ್ದಾರೆ: ಕಾಂಗ್ರೆಸ್

Rahul Gandhi: ಸರ್ಕಾರ ತಬ್ಬಿಬ್ಬಾಗಿದೆ. ರಾಹುಲ್ ಧ್ವನಿಯನ್ನು ಕುಗ್ಗಿಸಲು ಈ ಸರ್ಕಾರ ಹೊಸ ತಂತ್ರಗಳನ್ನು ಕಂಡುಕೊಳ್ಳುತ್ತಿದೆ ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.

Congress party briefing: ಸಂಸತ್ತಿನ ಒಳಗೆ ಮತ್ತು ಹೊರಗೆ ನಿರ್ಭೀತಿಯಿಂದ ಮಾತನಾಡಿದ್ದಕ್ಕೆ ರಾಹುಲ್ ಗಾಂಧಿ ಬೆಲೆ ತೆರುತ್ತಿದ್ದಾರೆ: ಕಾಂಗ್ರೆಸ್
ಅಭಿಷೇಕ್ ಮನು ಸಿಂಘ್ವಿ
Follow us
ರಶ್ಮಿ ಕಲ್ಲಕಟ್ಟ
|

Updated on:Mar 24, 2023 | 4:40 PM

ರಾಹುಲ್ ಗಾಂಧಿ (Rahul Gandhi) ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವ (Rahul Gandhi Disqualified) ಅಧಿಸೂಚನೆ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್, ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದೆ. ಡಾ. ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ಮತ್ತು ಜೈರಾಮ್ ರಮೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಸಂಸತ್ತಿನ ಒಳಗೆ ಮತ್ತು ಹೊರಗೆ ನಿರ್ಭೀತಿಯಿಂದ ಮಾತನಾಡಿದ್ದಕ್ಕೆ ರಾಹುಲ್ ಗಾಂಧಿ ಬೆಲೆ ತೆರುತ್ತಿದ್ದಾರೆ. ಸರ್ಕಾರ ತಬ್ಬಿಬ್ಬಾಗಿದೆ. ಅವರ ಧ್ವನಿಯನ್ನು ಕುಗ್ಗಿಸಲು ಈ ಸರ್ಕಾರ ಹೊಸ ತಂತ್ರಗಳನ್ನು ಕಂಡುಕೊಳ್ಳುತ್ತಿದೆ ಎಂದು ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ. ಪ್ರಕರಣ ಕರ್ನಾಟಕದಲ್ಲಿ ನಡೆದಿದ್ದು, ಕಾನೂನಿನ ಪ್ರಕಾರ ಮ್ಯಾಜಿಸ್ಟ್ರೇಟ್ ಅವರ ಅಧಿಕಾರ ವ್ಯಾಪ್ತಿಗೆ ಬಂದಿದ್ದರೆ ಅದನ್ನು ಪರಿಶೀಲಿಸಲು ತನಿಖೆ ನಡೆಸಬೇಕಾಗಿತ್ತು, ಆದರೆ ಅಂತಹ ಯಾವುದೇ ವಿಚಾರಣೆಯ ಅಡಿಯಲ್ಲಿ ಅಂತಹ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸಿಂಘ್ವಿ ಆರೋಪಿಸಿದ್ದಾರೆ. ದೋಷಾರೋಪಣೆಗೆ ತಡೆ ಸಿಗುತ್ತದೆ. ಹಾಗಾಗಿ ಅನರ್ಹತೆ ನಿರ್ಧಾರವೂ ರದ್ದಾಗಲಿದೆ ಎಂಬ ವಿಶ್ವಾಸ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಅವರು ಹೇಳಿದ್ದಾರೆ.

ಹೈಕೋರ್ಟ್ ನಿಂದ ತಮ್ಮದೇ ಪ್ರಕರಣದಲ್ಲಿ ತಡೆಯಾಜ್ಞೆ ಪಡೆದಿದ್ದಕ್ಕಾಗಿ ದೂರುದಾರರನ್ನು ಗುರಿಯಾಗಿಸಿದ್ದಾರೆ. ಈ ವಿಷಯವನ್ನು ಕೆದಕಲು ಅವರು ಈ ವರ್ಷದ ಫೆಬ್ರವರಿಯಲ್ಲಿ ಎಚ್ಚರಗೊಂಡರು ಎಂದ ಸಿಂಘ್ವಿ, ಮ್ಯಾಜಿಸ್ಟ್ರೇಟ್ ಅನ್ನು ಸಹ ಬದಲಾಯಿಸಲಾಗಿದೆ ಎಂದಿದ್ದಾರೆ.

ಭಾರತ್ ಜೋಡೋ ಯಾತ್ರೆಯ ನಂತರ ಬಿಜೆಪಿಗೆ ಭಯವಾಗಿದೆ ಎಂದು ಜೈರಾಮ್ ರಮೇಶ್ ಹೇಳಿದರು.

ಇದನ್ನೂ ಓದಿ: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ರಾಹುಲ್ ಗಾಂಧಿ; ಚುನಾವಣಾ ಅಯೋಗ ವಯ್ನಾಡ್ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸುವ ಸಾಧ್ಯತೆ!

ಈ ಪ್ರಕರಣದಲ್ಲಿ ಹಲವು ಗೊಂದಲದ ಲಕ್ಷಣಗಳಿವೆ. ನ್ಯಾಯಾಲಯದಿಂದ ದೋಷಾರೋಪಣೆಯಾಗಿದ್ದರೂ, ಅನರ್ಹಗೊಳಿಸುವುದಕ್ಕೆ ಮುನ್ನ ಚುನಾವಣಾ ಆಯೋಗದ ಒಪ್ಪಿಗೆಯನ್ನು ತೆಗೆದುಕೊಂಡಿಲ್ಲ. ಯಾವುದೇ ಅಭಿಪ್ರಾಯವನ್ನು ಚುನಾವಣಾ ಆಯೋಗವು ರಾಷ್ಟ್ರಪತಿಗಳಿಗೆ ಕಳುಹಿಸಿಲ್ಲ. ಶಿಕ್ಷೆಯ ಸಂದರ್ಭದಲ್ಲಿ ರಾಷ್ಟ್ರಪತಿಯನ್ನು ಸಂಪರ್ಕಿಸುವ ಅಗತ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಇದನ್ನು ಸುಪ್ರೀಂ ದೃಢಪಡಿಸಿಲ್ಲ. ಕಾನೂನಿನ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ ಎಂದು ಸಿಂಘ್ವಿ ಹೇಳಿದ್ದಾರೆ.

ಅದಾನಿ ಹಗರಣದ ಬಗ್ಗೆ ಸತ್ಯ ಹೇಳಿದ್ದಕ್ಕೆ ರಾಹುಲ್ ಗಾಂಧಿ ಬೆಲೆ ತೆರುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Fri, 24 March 23