ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ರಾಹುಲ್ ಗಾಂಧಿ; ಚುನಾವಣಾ ಅಯೋಗ ವಯ್ನಾಡ್ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸುವ ಸಾಧ್ಯತೆ!

ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ರಾಹುಲ್ ಗಾಂಧಿ; ಚುನಾವಣಾ ಅಯೋಗ ವಯ್ನಾಡ್ ಕ್ಷೇತ್ರಕ್ಕೆ ಉಪಚುನಾವಣೆ ಘೋಷಿಸುವ ಸಾಧ್ಯತೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Mar 24, 2023 | 3:41 PM

ವಯ್ನಾಡ್ ಲೋಕಸಭಾ ಕ್ಷೇತ್ರವೀಗ ಖಾಲಿಯಾಗಿದೆ, ಅಂತಲೂ ಲೋಕಸಭಾ ಸೆಕ್ರಟರಿಯೇಟ್ ಹೇಳಿರುವುದರಿಂದ ಚುನಾವಣಾ ಅಯೋಗ ಅಲ್ಲಿ ಉಪಚುನಾವಣೆ ನಡೆಸುವ ಸಾಧ್ಯತೆ ಇದೆ.

ನವದೆಹಲಿ: ಕಳೆದಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರ (PM Narendra Modi) ಮನೆತನದ ಹೆಸರಿಗೆ ಸಂಬಂಧಿಸಿದಂತೆ ಕರ್ನಾಟಕದ ಕೋಲಾರದಲ್ಲಿ ಅವಹೇಳನಕಾರಿ ಮಾತುಗಳನ್ನಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಸೂರತ್ ನಗರದ ಕೋರ್ಟೊಂದರಿಂದ ದೋಷಿಯೆಂದು ಘೋಷಿಸಲ್ಪಟ್ಟು 2 ವರ್ಷಗಳ ಸೆರೆವಾಸದ ಶಿಕ್ಷೆಗೊಳಗಾಗಿರುವ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ ಮತ್ತು ವಯ್ನಾಡ್ ಸಂಸದ ರಾಹುಲ್ ಗಾಂಧಿಯವರನ್ನು (Rahul Gandhi) ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ (disqualified). ವಯ್ನಾಡ್ ಲೋಕಸಭಾ ಕ್ಷೇತ್ರವೀಗ ಖಾಲಿಯಾಗಿದೆ, ಅಂತಲೂ ಲೋಕಸಭಾ ಸೆಕ್ರಟರಿಯೇಟ್ ಹೇಳಿರುವುದರಿಂದ ಚುನಾವಣಾ ಅಯೋಗ ಅಲ್ಲಿ ಉಪಚುನಾವಣೆ ನಡೆಸುವ ಸಾಧ್ಯತೆ ಇದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 24, 2023 03:41 PM