Rahul Gandhi Case; ರಾಜಕೀಯವಾಗಿ ಎಷ್ಟೇ ಬದ್ಧ ವೈರತ್ವವಿದ್ದರೂ, ಕುಟುಂಬ ಮತ್ತು ಮನೆತನಗಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಬಾರದು: ಪ್ರತಾಪ್ ಸಿಂಹ
ಇನ್ನು ಮುಂದೆ ರಾಜಕೀಯ ನಾಯಕರು ತಮ್ಮ ಎದುರಾಳಿಗಳ ವಿರುದ್ದ ಅವಹೇಳನಕಾರಿಯಾಗಿ ಮಾತಾಡುವುದು, ಹೀಯಾಳಿಸುವುದು ನಿಲ್ಲುವಂತಾಗಲೂ ಈ ಪ್ರಕರಣ ನಾಂದಿಯಾಗಲಿದೆ ಎಂದು ಸಂಸದ ಹೇಳಿದರು.
ಬೆಳಗಾವಿ: ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿಯವರನ್ನು (Rahul Gandhi) ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಕುರಿತು ನಗರದಲ್ಲಿಂದು ಪ್ರತಿಕ್ರಿಯೆ ನೀಡಿದ ಸಂಸದ ಪ್ರತಾಪ್ ಸಿಂಹ (Pratap Simha); ಕೋರ್ಟ್ ಅವರನ್ನು ಮಾನಹಾನಿ ಪ್ರಕರಣವೊಂದರಲ್ಲಿ ದೋಷಿಯೆಂದು (guilty) ಪರಿಗಣಿಸಿ ಜೈಲು ಶಿಕ್ಷೆ ವಿಧಿಸಿರುವುದರಿಂದ ಅನರ್ಹಗೊಳಿಸಲಾಗಿದೆ ಎಂದರು. ಇನ್ನು ಮುಂದೆ ರಾಜಕೀಯ ನಾಯಕರು ತಮ್ಮ ಎದುರಾಳಿಗಳ ವಿರುದ್ದ ಅವಹೇಳನಕಾರಿಯಾಗಿ ಮಾತಾಡುವುದು, ಹೀಯಾಳಿಸುವುದು ನಿಲ್ಲುವಂತಾಗಲೂ ಈ ಪ್ರಕರಣ ನಾಂದಿಯಾಗಲಿದೆ ಎಂದು ಸಂಸದ ಹೇಳಿದರು. ರಾಜಕೀಯವಾಗಿ ಎಷ್ಟೇ ವೈರತ್ವವಿದ್ದರೂ ಯಾವುದೇ ಪಕ್ಷದ ನಾಯಕನ ಕುಟುಂಬ, ಮನೆತನದ ಬಗ್ಗೆ ಕಟುವಾಗಿ ಮತ್ತು ಹಗುರವಾಗಿ ಮಾತಾಡಬಾರದು ಎಂದು ಪ್ರತಾಪ್ ಸಿಂಹ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos