Assembly Polls: ಬಾದಾಮಿಯಲ್ಲಿ ಸಿದ್ದರಾಮಯ್ಯ ಭರ್ಜರಿ ರೋಡ್ ಶೋ, ಉರಿಬಿಸಿಲಲ್ಲೂ ಸಹಸ್ರಾರು ಜನ ಕೇಕೆ ಹಾಕುತ್ತಾ ಕುಣಿದಿದ್ದೇ ಕುಣಿದಿದ್ದು!

Assembly Polls: ಬಾದಾಮಿಯಲ್ಲಿ ಸಿದ್ದರಾಮಯ್ಯ ಭರ್ಜರಿ ರೋಡ್ ಶೋ, ಉರಿಬಿಸಿಲಲ್ಲೂ ಸಹಸ್ರಾರು ಜನ ಕೇಕೆ ಹಾಕುತ್ತಾ ಕುಣಿದಿದ್ದೇ ಕುಣಿದಿದ್ದು!

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 24, 2023 | 5:05 PM

ಜನ ಕೇಕೆ, ಶಿಳ್ಳೆ ಹಾಕುತ್ತಾ, ಕುಣಿಯತ್ತಿದ್ದರೆ, ಸಿದ್ದರಾಮಯ್ಯನವರ ವಾಹನಕ್ಕೆ ಹತ್ತಿರದಲ್ಲಿದ್ದ ಜನ ಅವರ ಮೇಲೆ ಹೂಗಳನ್ನು ಎರಚುತ್ತಿದ್ದರು

ಬಾಗಲಕೋಟೆ: ಅತ್ತ ದೆಹಲಿಯಲ್ಲಿ ರಾಹುಲ್ ಗಾಂಧಿ (Rahul Gandhi) ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದರೆ, ಇತ್ತ ಜಿಲೆಯ ಬಾದಾಮಿಯಲ್ಲಿ ಸಿದ್ದರಾಮಯ್ಯ (Siddaramaiah) ಭರ್ಜರಿ ರೋಡ್ ಶೋ (roadshow) ನಡೆಸಿದರು. ರಸ್ತೆಯುದ್ದಕ್ಕೂ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ರೋಡ್ ಶೋ ನಲ್ಲಿ ಪಾಲ್ಗೊಂಡರು.  ಜನ ಕೇಕೆ, ಶಿಳ್ಳೆ ಹಾಕುತ್ತಾ, ಕುಣಿಯತ್ತಿದ್ದರೆ, ಸಿದ್ದರಾಮಯ್ಯನವರ ವಾಹನಕ್ಕೆ ಹತ್ತಿರದಲ್ಲಿದ್ದ ಜನ ಅವರ ಮೇಲೆ ಹೂಗಳನ್ನು ಎರಚುತ್ತಿದ್ದರು. ಮನೆ, ಕಟ್ಟಡ-ಕಚೇರಿಗಳ ಮೇಲೆ ಸಹ ಜನ ನಿಂತಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 24, 2023 05:04 PM