ಮೈಸೂರು: ಇಂದು ಹಠಾತ್ತನೆ ನಿಧನಹೊಂದಿದ ಮಾಜಿ ಸಂಸದ ಆರ್ ಧೃವನಾರಾಯಣ್ (R Dhruvanarayana) ಅವರನ್ನು ಕುರಿತು ಅತ್ಯಂತ ಭಾವುಕರಾಗಿ, ಕಣ್ಣೀರಿಡುತ್ತಾ ಮಾತಾಡಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha) ತಮ್ಮಿಬ್ಬರ ನಡುವೆಯಿದ್ದ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರತಾಪ್ ಸಿಂಹರ ಮಾತನ್ನು ಆಲಿಸಿ. ಅವರು ಅಗಲಿದ ನಾಯಕನ ಹೆಸರು ಹೇಳುವಾಗೆಲ್ಲ ಧ್ರುವನಾರಾಯಣ ಸಾಹೇಬ್ರು ಅನ್ನುತ್ತಾರೆ. ರಾಜಕೀಯ ಬದುಕಿನಲ್ಲಿ ಅವರಿಬ್ಬರು ಬೇರೆ ಬೇರೆ ಪಕ್ಷದವರಾದರೂ ಎಲ್ಲ ಹಂತಗಳಲ್ಲಿ ಮಾರ್ಗದರ್ಶನ ನೀಡಿದ್ದನ್ನು ಪ್ರತಾಪ್ ಸಿಂಹ ಗದ್ಗರಿತರಾಗಿ ಜ್ಞಾಪಿಸಿಕೊಳ್ಳುತ್ತಾರೆ. ಲೋಕಸಭಾ ಸದಸ್ಯರಾಗಿ ಚಾಮರಾಜನಗರದಲ್ಲಿ (Chamarajanagar) ಧ್ರುವನಾರಾಯಣ ಮಾಡಿದ ಎಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರತಾಪ್ ಸಿಂಹ ಅಭಿಮಾನದಿಂದ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ