AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sonia and Rahul Gandhi speak to family: ಧ್ರುವನಾರಾಯಣ ಕುಟುಂಬಕ್ಕೆ ಸೋನಿಯಾ ಗಾಂಧಿ ಕಳಿಸಿದ ಪತ್ರವನ್ನು ಮಲ್ಲಿಕಾರ್ಜುನ ಖರ್ಗೆ ನೀಡಿದರು

Sonia and Rahul Gandhi speak to family: ಧ್ರುವನಾರಾಯಣ ಕುಟುಂಬಕ್ಕೆ ಸೋನಿಯಾ ಗಾಂಧಿ ಕಳಿಸಿದ ಪತ್ರವನ್ನು ಮಲ್ಲಿಕಾರ್ಜುನ ಖರ್ಗೆ ನೀಡಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on:Mar 11, 2023 | 6:32 PM

Share

ಅಸಲಿಗೆ ಆ ಪತ್ರವನ್ನು ಸೋನಿಯಾ ಗಾಂಧಿಯವರು ಕಳಿಸಿರುವರೆಂದು ಖರ್ಗೆ ಹೇಳಿದರು. ಸೋನಿಯ ಮತ್ತು ರಾಹುಲ್ ಗಾಂಧಿಯವರು ಧ್ರುವನಾರಾಯಣರ ಮಕ್ಕಳ ಜೊತೆ ಮಾತಾಡಿದರು ಅಂತ ಖರ್ಗೆ ಮಾಧ್ಯಮಗಳಿಗೆ ತಿಳಿಸಿದರು

ಮೈಸೂರು: ಬೆಳಗ್ಗೆ ಭಾರೀ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಆರ್ ಧ್ರುವನಾರಾಯಣ (R Dhruvanarayana) ಅವರ ಅಂತಿಮ ದರ್ಶನ ಪಡೆಯಲು ಕಾಂಗ್ರೆಸ್ ಪಕ್ಷದ ಬಹತೇಕ ನಾಯಕರು ಆಗಮಿಸಿದ್ದರು. ಅಗಲಿದ ಅಜಾತಶತ್ರುಗೆ ಕಾಂಗ್ರೆಸ್ ಪಕ್ಷವಲ್ಲದೆ ಬೇರೆ ಪಕ್ಷಗಳ ನಾಯಕರು ಸಹ ಅಂತಿಮ ನಮನ ಸಲ್ಲಿಸಿದರು. ಕಾಂಗ್ರೆಸ್ ರಾಷ್ಟ್ರೀಯ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಧ್ರುವನಾರಾಯಣ ಪುತ್ರನಿಗೆ ಒಂದು ಪತ್ರವನ್ನು ಕೊಟ್ಟಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಅಸಲಿಗೆ ಆ ಪತ್ರವನ್ನು ಸೋನಿಯಾ ಗಾಂಧಿಯವರು (Sonia Gandhi) ಕಳಿಸಿರುವರೆಂದು ಖರ್ಗೆ ಹೇಳಿದರು. ಸೋನಿಯ ಮತ್ತು ರಾಹುಲ್ ಗಾಂಧಿಯವರು (Rahul Gandhi) ಧ್ರುವನಾರಾಯಣರ ಮಕ್ಕಳ ಜೊತೆ ಮಾತಾಡಿದರು ಅಂತ ಖರ್ಗೆ ಮಾಧ್ಯಮಗಳಿಗೆ ತಿಳಿಸಿದರು. ಆದರೆ, ಸೂತಕದ ಮನೆಯಲ್ಲಿ, ಧ್ರುವನಾರಾಯಣರ ಕೆಲ ಬೆಂಬಲಿಗರು ಅವರ ಮಗನಿಗೆ ಟಿಕೆಟ್ ಕೊಡ್ತೀರಾ ಅಂತ ಕೇಳಿದ್ದು ಸರಿಯೆನಿಸಲಿಲ್ಲ. ಆ ವಿಷಯ ಬಗ್ಗೆ ಮಾತಾಡಲು ಬೇರೆ ಸಮಯ ಸಂದರ್ಭಗಳಿವೆ. ಆದರೆ, ಪೂರ್ತಿ ಕಾಂಗ್ರೆಸ್ ಪಕ್ಷ ಧ್ರುವನಾರಾಯಣ ಅವರ ಕುಟುಂಬದೊಂದಿಗಿದೆ ಅನ್ನೋದನ್ನು ಎಲ್ಲ ಕಾಂಗ್ರೆಸ್ ನಾಯಕರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 11, 2023 06:32 PM