Assembly Polls: ಬಿವೈ ವಿಜಯೇಂದ್ರಗೆ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಬಿಟ್ಟು ಬೇರೆ ಯಾವುದೇ ಕ್ಷೇತ್ರದಿಂದ  ಸ್ಪರ್ಧಿಸುವುದು ಬೇಕಿಲ್ಲ!

Assembly Polls: ಬಿವೈ ವಿಜಯೇಂದ್ರಗೆ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಬಿಟ್ಟು ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದು ಬೇಕಿಲ್ಲ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 24, 2023 | 12:30 PM

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳು ವಿಜಯೇಂದ್ರಗೆ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಅಂತ ಕೇಳಿದಾಗ ಅವರು, ಶಿಕಾರಿಪುರದ ಪ್ರತಿ ಹಳ್ಳಿಗೆ ಭೇಟಿ ನೀಡಿ ಜನರೊಂದಿಗೆ ಮಾತಾಡುತ್ತಿರುವುದಾಗಿ ಹೇಳಿದರು.

ಬೆಂಗಳೂರು: ಬಿಎಸ್ ಯಡಿಯೂರಪ್ಪ (BS Yediyurappa) ಚುನಾವಣಾ ರಾಜಕೀಯದಿಂದ ದೂರವಾಗುತ್ತಿರುವ ಬಗ್ಗೆ ಘೋಷಣೆ ಮಾಡಿದಾಗಲೇ ಪುತ್ರ ಬಿವೈ ವಿಜಯೇಂದ್ರ (BY Vijayendra) ತಮ್ಮ ಉತ್ತರಾಧಿಕಾರಿಯಾಗುವ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದ (Shikaripura) ಸ್ಪರ್ಧಿಸುವ ಸೂಚನೆ ನೀಡಿದ್ದರು. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳು ವಿಜಯೇಂದ್ರಗೆ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಅಂತ ಕೇಳಿದಾಗ ಅವರು, ಶಿಕಾರಿಪುರದ ಪ್ರತಿ ಹಳ್ಳಿಗೆ ಭೇಟಿ ನೀಡಿ ಜನರೊಂದಿಗೆ ಮಾತಾಡುತ್ತಿರುವುದಾಗಿ ಹೇಳಿದರು. ಅವರು ಹೇಳುವ ತಾತ್ಪರ್ಯ ಸ್ಪಷ್ಟವಾಗಿತ್ತು. ಅವರಿಗೆ ಶಿಕಾರಿಪುರ ಬಿಟ್ಟು, ವರುಣಾವಾಲೀ ಅಥವಾ ಬೇರೆ ಯಾವುದೇ ಕ್ಷೇತ್ರದಿಂದಾಗಲೀ ಸ್ಪರ್ಧಿಸುವುದು ಬೇಕಿಲ್ಲ, ಆದರೂ ತೀರ್ಮಾನ ಹೈ ಕಮಾಂಡ್ ವಿವೇಚನೆಗೆ ಬಿಟ್ಟಿದ್ದು ಅಂತ ಕೊನೆಯಲ್ಲಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ