ಪಕ್ಷಕ್ಕೆ ದ್ರೋಹ ಬಗೆದವರನ್ನು ವೇದಿಕೆಯಿಂದ ಕೆಳಗಿಳಿಸಿ: ಸಚಿವ ರಾಜಣ್ಣ ಎದುರು ಹಾಸನ ಕೈ ಕಾರ್ಯಕರ್ತರ ಗಲಾಟೆ

|

Updated on: Jun 11, 2023 | 4:43 PM

ಹಾಸನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರು ಹೈಡ್ರಾಮ ನಡೆಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣರಾದವರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ಸಚಿವ ರಾಜಣ್ಣ ಎದುರೇ ಗಲಾಟೆ ನಡೆಸಿದ್ದಾರೆ.

ಪಕ್ಷಕ್ಕೆ ದ್ರೋಹ ಬಗೆದವರನ್ನು ವೇದಿಕೆಯಿಂದ ಕೆಳಗಿಳಿಸಿ: ಸಚಿವ ರಾಜಣ್ಣ ಎದುರು ಹಾಸನ ಕೈ ಕಾರ್ಯಕರ್ತರ ಗಲಾಟೆ
ಗಲಾಟೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ
Follow us on

ಹಾಸನ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮ ನಡೆದಿದೆ. ಕಾಂಗ್ರೆಸ್ (Congress) ಅಭ್ಯರ್ಥಿಗಳ ಸೋಲಿಗೆ ಕಾರಣರಾದವರನ್ನು ವೇದಿಕೆಯಿಂದ ಕೆಳಗಿಳಿಸುವಂತೆ ತನ್ನ ಎದುರೇ ಗಲಾಟೆ ನಡೆಸಿರುವುದು ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ (KN Rajanna) ಅವರ ಕಣ್ಣನ್ನು ಕೆಂಪಗಾಗಿಸಿದವು. ನಾನು ಈ ರೀತಿ ಗಲಾಟೆ ಮಾಡಿಯೇ ರಾಜಕಾರಣ ಮಾಡಿ ಇಲ್ಲಿ ಬಂದು ನಿಂತಿದ್ದೇನೆ. ನನ್ನ ಹತ್ತಿರ ಇದೆಲ್ಲ ಇಟ್ಟುಕೊಳ್ಳಬೇಡಿ, ನನ್ನ ಬಳಿ ಇದೆಲ್ಲಾ ನಡೆಯಲ್ಲ ಅಂತ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ನೂತನ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ವಾಗತ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಚುನಾವಣೆಯಲ್ಲಿ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಕೆಲ ಮುಖಂಡರು ಸೋಲಿಸಿದ್ದಾರೆ ಅಂತ ಚಕಾರ ಎತ್ತಿದ ಕಾರ್ಯಕರ್ತರು, ಅಂತಹವರನ್ನು ವೇದಿಕೆ ಮೇಲೆ ಕೂರಿಸಿದ್ದೀರಾ, ಮೊದಲು ಅವರನ್ನು ವೇದಿಕೆಯಿಂದ ಕೆಳಗಿಳಿಸಿ ನಂತರ ಸಭೆಯನ್ನು ಮುಂದುವರಿಸಿ ಅಂತ ಸಚಿವರ ಎದುರೇ ಗಲಾಟೆ ನಡೆಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನವರು ಸುಳ್ಳು ಹೇಳುತ್ತಿದ್ದಾರೆ; ದಿನೇಶ್ ಗುಂಡೂರಾವ್ ವಿರುದ್ಧ ರಾಜೀವ್ ಚಂದ್ರಶೇಖರ್ ಕಿಡಿ

ಕಾರ್ಯಕರ್ತರ ಹೈಡ್ರಾಮದಿಂದಾಗಿ ಸಿಡಿಮಿಡಿಗೊಂಡ ಸಚಿವ ಕೆ.ಎನ್.ರಾಜಣ್ಣ ಅವರು ಕೂಡಲೇ ಎದ್ದು ಕಾರ್ಯಕರ್ತರಿಗೆ ವಾರ್ನ್ ಮಾಡಿದ್ದಾರೆ. ನಾನು ಈ ರೀತಿ ಗಲಾಟೆ ಮಾಡಿಯೇ ರಾಜಕಾರಣ ಮಾಡಿ ಇಲ್ಲಿ ಬಂದು ನಿಂತಿದ್ದೇನೆ. ನನ್ನ ಹತ್ತಿರ ಇದೆಲ್ಲ ಇಟ್ಟುಕೊಳ್ಳಬೇಡಿ, ನನ್ನ ಬಳಿ ಇದೆಲ್ಲಾ ನಡೆಯಲ್ಲ. ಏನೇ ಇದ್ದರು ಇಲ್ಲಿ ಬಂದು ಹೇಳಿ, ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುತ್ತದೆ. ಸಭೆಯಲ್ಲಿ ಈ ರೀತಿಯ ವರ್ತನೆ ತೋರಬಾರದು, ಇದೇ ಕೊನೆ ಎಂದು ಹೇಳಿ ಸಮಾಧಾನ ಮಾಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Sun, 11 June 23