Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒನ್ ಟು ತ್ರಿಬಲ್ ವಿದ್ಯುತ್ ದರ ಹೆಚ್ಚಿಸಿದ್ಯಾರು? ಎಲ್ಲಾ ಗೊಂದಲಗಳಿಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ

ಗೃಹಜ್ಯೋತಿಯ ಲಾಭ ಪಡೆಯೋ ಮುನ್ನವೇ ವಿದ್ಯುತ್​ ಬಿಲ್​ ಡಬಲ್ ಬಂದಿರುವುದರಿಂದ ಗ್ರಾಹಕರು ಆಘಾತಕ್ಕೊಳಗಾಗಿದ್ದಾರೆ. ರಾಜ್ಯಾದ್ಯಂತ ಜನರ ಆಕ್ರೋಶದ ಕಟ್ಟೆ ಒಡೆದಿದೆ. ಹಾಗಾದ್ರೆ, ಇನ್ನು ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ಒನ್ ಟು ತ್ರಿಬಲ್ ವಿದ್ಯುತ್ ದರ ಹೆಚ್ಚಿಸಿದ್ಯಾರು? ಎಲ್ಲಾ ಗೊಂದಲಗಳಿಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us
ರಮೇಶ್ ಬಿ. ಜವಳಗೇರಾ
|

Updated on: Jun 11, 2023 | 3:14 PM

ಬೆಂಗಳೂರು: 200 ಯೂನಿಟ್ ಕರೆಂಟ್ ಫ್ರೀ ಪಡೆಯೋದು ಹೇಗೆ? ಏನೆಲ್ಲಾ ದಾಖಲೆ ಕೊಟ್ಟರೆ ಕರೆಂಟ್ ಫ್ರೀ ಸಿಗುತ್ತೆ? ಫ್ರೀ ಕರೆಂಟ್ (Gruha Jyothi Scheme) ಸಿಕ್ಕರೆ ಎಷ್ಟು ಹಣ ಉಳಿತಾಯವಾಗುತ್ತೆ ಎಂದು ಜನ ಲೆಕ್ಕ ಹಾಕುತ್ತಿದ್ದಾರೆ. ಆದ್ರೆ ಅದಕ್ಕೂ ಮುನ್ನವೇ ವಿದ್ಯುತ್ ದರ(electricity bill) ಏರಿಕೆ ಶಾಕ್ ಜನರನ್ನು ಕಂಗೆಡಿಸಿದೆ. ಜೂನ್ ತಿಂಗಳಲ್ಲಿ ಬಿಲ್ ಕೈ ಸೇರುತ್ತಿದ್ದಂತೆಯೇ ಗ್ರಾಹಕರ ಕೈಗೇ ಶಾಕ್ ಹೊಡೆದಂತಾಗಿದೆ. ಯಾಕಂದ್ರೆ ಕಳೆದ ತಿಂಗಳು ಕಟ್ಟಿದ ಬಿಲ್​ಗೂ, ಈ ತಿಂಗಳು ಬಂದಿರೋ ಬಿಲ್​ಗೂ ಡಬಲ್ ವ್ಯತ್ಯಾಸವಿದೆ. ಮೇ ತಿಂಗಳಲ್ಲಿ 200 ರೂಪಾಯಿ ಕಟ್ಟಿದ ಗ್ರಾಹಕರು, ಈ ತಿಂಗಳು 600 ರೂಪಾಯಿ ಬಿಲ್ ನೋಡಿ ಬೆಚ್ಚಿಬಿದ್ದಿದ್ದಾರೆ. ಅಲ್ಲದೇ ಈ ಬಿಲ್​ ಏರಿಕೆಯಿಂದ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ವಿರೋಧ ಪಕ್ಷಗಳು ಸಹ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಫ್ರೀ ನಡುವೆಯೇ ಜನರಿಗೆ ಕರೆಂಟ್​ ಶಾಕ್: 2023ರ ಏಪ್ರಿಲ್​ನಿಂದ ಡಿಸೆಂಬರ್ ವರೆಗೂ ವಿದ್ಯುತ್ ದರ ಹೆಚ್ಚಳ, ಎಷ್ಟೆಷ್ಟು? ಇಲ್ಲಿದೆ ವಿವರ

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ ಇಂದು(ಜೂನ್ 11) ಅಧಿಕೃತವಾಗಿ ಚಾಲನೆ ನೀಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿದ್ಯುತ್​ ದರ ಹೆಚ್ಚಿಸಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.ವಿದ್ಯುತ್​ ದರ ಹೆಚ್ಚಳ ಮಾಡಿರುವುದು ಹಿಂದಿನ ಸರ್ಕಾರ. ನಮ್ಮ ಸರ್ಕಾರ ವಿದ್ಯುತ್​ ದರವನ್ನು ಹೆಚ್ಚಳ ಮಾಡಿಲ್ಲ. ವಿದ್ಯುತ್​ ದರ ಹೆಚ್ಚಳ ಬಗ್ಗೆ ಏ.1ರಂದು ತೀರ್ಮಾನ ಆಗಿತ್ತು ಎಂದು ಸ್ಪಷ್ಟಪಡಿಸಿದರು.

ವಿದ್ಯುತ್ ದರ ಏರಿಸಿದ್ದು ನಾವಲ್ಲ. ಮೇ 12ರಿಂದ ವಿದ್ಯುತ್ ದರ ಏರಿಕೆ ಎಂದು ಏಪ್ರಿಲ್ ನಲ್ಲೇ ತೀರ್ಮಾನ ಆಗಿತ್ತು. ಗ್ಯಾರಂಟಿ ಯೋಜನೆಯಿಂದ ವಿಪಕ್ಷಗಳಿಗೆ ನಡುಕ ಶುರುವಾಗಿದೆ. ಬೇಕಾದಷ್ಟು ಟೀಕೆಗಳ ಸುರಿಮಳೇ ಸುರಿಸಿದ್ದಾರೆ. ಅವರು ಗೇಲಿ ಮಾಡಿಕೊಂಡು ಅಲ್ಲಿಯೇ ಇರಲಿ. ನಮ್ಮ ಗ್ಯಾರಂಟಿ ಮುಂದುವರಿಸಿಕೊಂಡು ನಾವು ಮುಂದೆ ಹೋಗುತ್ತೇವೆ. ಜುಲೈ 1ರಿಂದ ಅನ್ನಭಾಗ್ಯ, ಗೃಹಜ್ಯೋತಿ ಯೋಜನೆ ಜಾರಿ ಆಗುತ್ತೆ. 200 ಯೂನಿಟ್​​ಯೊಳಗೆ ವಿದ್ಯುತ್​ ಬಳಸಿದರೆ ಬಿಲ್​ ಬರುವುದಿಲ್ಲ.ಗೊಂದಲ ಸೃಷ್ಟಿ ಮಾಡುವುದೇ ಬಿಜೆಪಿಯರ ಕೆಲಸ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಒನ್ ಟು ತ್ರಿಬಲ್ ವಿದ್ಯುತ್ ಬಿಲ್ ಹೆಚ್ಚಳ: ವಿವಿಧ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಕ್ರೋಶ

ವಿದ್ಯುತ್ ಬಿಲ್​ ಏಕಾಏಕಿ ಡಬಲ್ ಆಗಿದ್ಯಾಕೆ?

ಕಳೆದ ಏಪ್ರಿಲ್ ತಿಂಗಳಿನಲ್ಲೇ ವಿದ್ಯುತ್ ದರವನ್ನ ಕೆಇಆರ್​ಸಿ ಏರಿಕೆ ಮಾಡಿತ್ತು. ಪ್ರತೀ ಯುನಿಟ್​ಗೆ 70 ಪೈಸೆಯಷ್ಟು ಹೆಚ್ಚಳ ಮಾಡಿತ್ತು. ಆದ್ರೆ ಚುನಾವಣೆ ಹಿನ್ನಲೆಯಲ್ಲಿ ಈ ದರ ಏರಿಕೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಲಾಗಿತ್ತು. ಈಗ ಹೊಸ ಸರ್ಕಾರ ಬರುತ್ತಿದ್ದಂತೆಯೇ ಕೆಇಆರ್​ಸಿ ದರ ಏರಿಕೆ ಜಾರಿಮಾಡಿದೆ. ಅಲ್ಲದೇ ಏಪ್ರಿಲ್ ಮತ್ತು ಮೇ ತಿಂಗಳಿನಿಂದಲೇ ದರ ಏರಿಕೆಯನ್ನ ಅನ್ವಯವಾಗುವಂತೆ ಮಾಡಿದೆ. ಹೀಗಾಗಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಬಳಸಿದ ವಿದ್ಯುತ್​ನ ಪ್ರತೀ ಯುನಿಟ್​ಗೆ 70 ಪೈಸೆ ಈ ಜೂನ್ ತಿಂಗಳ ಬಿಲ್​ನಲ್ಲಿ ಹೆಚ್ಚುವರಿ ವಸೂಲಿ ಮಾಡಲಾಗಿದೆ. ಪ್ರತಿಯೊಬ್ಬರ ಮನೆಗೆ ಬಂದ ವಿದ್ಯುತ್ ಬಿಲ್​ನಲ್ಲೂ ಬಾಕಿ ಎಂಬ ಕಾಲಂನಲ್ಲಿ ಈ ಹೆಚ್ಚುವರಿ ಮೊತ್ತ ನಮೂದಿಸಿ ವಸೂಲು ಮಾಡಲಾಗ್ತಿದೆ. ಜೊತೆಗೆ ನಿಗದಿತ ಶುಲ್ಕವೂ ಹೆಚ್ಚಾಗಿರುವುದರಿಂದ ಬಿಲ್ ಏಕಾ ಏಕಿಯಾಗಿ ಡಬಲ್ ಬಂದಿದೆ.

ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
‘ಬ್ಯಾಂಕ್ ಕೆಲಸವನ್ನು ಜನಾರ್ದನ್ ಬಿಡಬಾರದಿತ್ತು’: ಕಣ್ಣೀರು ಹಾಕಿದ ಉಮೇಶ್
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
ವಿಧಾನಸೌಧ ಮುಂದೆ ಹಾಕಿದ್ದ ಪೆಂಡಾಲ್​​​ಗಳ ಕೆಳಗೆ ಆಶ್ರಯ ಪಡೆದ ಜನ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
14 ವರ್ಷದ ಬಳಿಕ ರಾಮಪಾಲ್ ಕಶ್ಯಪ್ ಚಪ್ಪಲಿ ಧರಿಸುವಂತೆ ಮಾಡಿದ ಪಿಎಂ ಮೋದಿ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಹೈದರಾಬಾದ್ ಆಟಗಾರರು ತಂಗಿದ್ದ ಹೋಟೆಲ್‌ನಲ್ಲಿ ಅಗ್ನಿ ಅವಘಡ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಜಾತಿ ಗಣತಿ ಅವೈಜ್ಞಾನಿಕವಾಗಿದೆ, ಮತ್ತೊಮ್ಮೆ ಮಾಡಿಸಬೇಕು: ಸ್ವಾಮೀಜಿ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ
ಬೃಹತ್ ಜಾತಿ ಗಣತಿ ವರದಿಯನ್ನು ಯಾರೂ ಓದಿದಂತಿಲ್ಲ, ಓದಲು ಸಮಯ ಹಿಡಿಯಲಿದೆ