ರಾಮನಗರ: ಇಂದು ಜಿಲ್ಲೆಗೆ ಆಗಮಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಿಸಿ ಕಚೇರಿ ಆವರಣದಲ್ಲಿ ಅಂಬೇಡ್ಕರ್ ಮತ್ತು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದರು. ನಂತರ ಕ್ರೇನ್ನಲ್ಲಿ ತೆರಳಿ ಪ್ರತಿಮಗಳಿಗೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಸಚಿವರಾದ ಡಾ ಕೆ ಸುಧಾಕರ್, ಸಿ ಎನ್ ಅಶ್ವತ್ಥ್ ನಾರಾಯಣ, ಭೈರತಿ ಬಸವರಾಜ್, ಬೆಂಗಳೂರು ಗ್ರಾ. ಸಂಸದ ಡಿ ಕೆ ಸುರೇಶ್, ಶಾಸಕರಾದ ಮಂಜುನಾಥ, ಅನಿತಾ, ಎಂಎಲ್ಸಿ ಯೋಗೇಶ್ವರ್, ಎಸ್ ರವಿ, ಸಿ ಎಂ ಲಿಂಗಪ್ಪ, ಪುಟ್ಟಣ್ಣ, ಆ.ದೇವೇಗೌಡ ಉಪಸ್ಥಿತರಿದ್ದರು.
ಇನ್ನು ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮುಂದೆ ಡಿಕೆ ಡಿಕೆ ಅಂತ ಕೆಲವರು ಘೋಷಣೆ ಕೂಗಿದ್ದಾರೆ. ಜೊತೆಗೆ ದಲಿತ ಮುಖಂಡರು ಕಪ್ಪು ಪಟ್ಟಿ ಪ್ರದರ್ಶನ ಮಾಡಿದ್ದಾರೆ. ಅಲ್ಲದೇ ಕಾರ್ಯಕ್ರಮಕ್ಕೆ ಸರಿಯಾಗಿ ಕರೆದಿಲ್ಲ ಅಂತ ಆಕ್ರೋಶ ಹೊರಹಾಕಿದ್ದು, ಕಾರ್ಯಕ್ರಮದಲ್ಲಿ ಗದ್ದಲ ಉಂಟಾಗಿತ್ತು.
ಸಿಎಂ ಮುಂದೆ ಹೈಡ್ರಾಮಾ
ಸರಿಯಾಗಿ ಆಹ್ವಾನ ನೀಡಿಲ್ಲವೆಂದು ಕಾರ್ಯಕ್ರಮದಲ್ಲಿ ಸಿಎಂ ಮುಂದೆ ಹೈಡ್ರಾಮಾ ಮಾಡಿದ್ದಾರೆ. ಸಂಸದ ಡಿಕೆ ಸುರೇಶ್ ಬೆಂಬಲಿಗರು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಬೊಮ್ಮಾಯಿ ಕಾರ್ಯಕ್ರಮಕ್ಕೆ ದಲಿತ ಮುಖಂಡರು ಅಡ್ಡಿಪಡಿಸಿದ್ದು, ಪೊಲೀಸರು ದಲಿತ ಮುಖಂಡರನ್ನ ಸಮಾಧಾನಪಡಿಸುತ್ತಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್ ರಾಮನಗರ ಜಿಲ್ಲೆಗೆ ಆರೋಗ್ಯ ಸೇವೆ ಒದಗಿಸಲು ಸಿಎಂ ಬೊಮ್ಮಾಯಿ, ಸಚಿವ ಡಾ.ಅಶ್ವತ್ಥ್ ಸಂಕಲ್ಪ ಮಾಡಿದ್ದಾರೆ. ರಾಜೀವ್ ಗಾಂಧಿ ವಿವಿ ಕಾಮಗಾರಿ ಶೀಘ್ರ ಆರಂಭವಾಗಲಿದೆ ಅಂತ ತಿಳಿಸಿದರು.
ಇದೇ ವೇಳೆ ಕೊವಿಡ್‌ಗೆ ಬಲಿಯಾದವರ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ 1 ಲಕ್ಷ ರೂ.ನ ಚೆಕ್ ನೀಡಿದರು.
ಕಾರ್ಯಕ್ರಮದಲ್ಲಿ ಮುಂದುವರಿದು ಮಾತನಾಡಿದ ಅಶ್ವತ್ಥ್ ನಾರಾಯಣ್, ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನ ಅಂಬೇಡ್ಕರ್ ಅವರು ಕೊಟ್ಟಿದ್ದಾರೆ. ಯಾವ ರೀತಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ನಾಡಪ್ರಭು ಕೆಂಪೇಗೌಡರು ತೋರಿಸಿಕೊಟ್ಟಿದ್ದಾರೆ. ರಾಮನಗರಕ್ಕೆ ಸಾಕಷ್ಟು ಕೊಡುಗೆಯನ್ನ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಕೊಟ್ಟಿದ್ದಾರೆ ಎಂದರು. ಇದೇ ವೇಳೆ ಅನಿತಾ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಅವರು, ನೀವು ಟೆಂಡರ್ ಮಾಡಿರಬಹುದು. ಅದನ್ನ ಬಿಡುಗಡೆಗೊಳಿಸಿದ್ದು ನಮ್ಮ ಸರ್ಕಾರ. ನಮ್ಮ ಸಚಿವರು 450 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು. ರಾಮನಗರವನ್ನ ಹೆಲ್ತ್ ಸಿಟಿಯನ್ನ ಮಾಡುತ್ತೇವೆ. ಕೆಲವ ಮಾತಿನಲ್ಲಿ ಅಲ್ಲ, ಕೆಲಸದಲ್ಲಿ ತೋರಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ
15 ವರ್ಷಕ್ಕಿಂತ ಹಳೆಯದಾದ 43 ಲಕ್ಷ ಪೆಟ್ರೋಲ್ ವಾಹನಗಳ ನೋಂದಣಿಯನ್ನು ಶೀಘ್ರದಲ್ಲೇ ರದ್ದುಗೊಳಿಸಲಿದೆ ದೆಹಲಿ ಸರ್ಕಾರ
Published On - 1:14 pm, Mon, 3 January 22