ಬೆಂಗಳೂರು, ನ.4: ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಮೀಟಿಂಗ್ ಹಾಲ್ ಅನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D.K.Shivakumar) ಅವರು ಉದ್ಘಾನೆ ಮಾಡಿದರು. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರೇ ಟೇಪ್ ಕತ್ತರಿಸಲು ಕತ್ತರಿ ಕೊಟ್ಟರು. ಈ ವೇಳೆ, ನನ್ನಿಂದಲೇ ಟೇಪ್ ಕಟ್ ಮಾಡಿಸುತ್ತಿದ್ದೀರಾ ಎಂದು ನಗುತ್ತಾ ಕೇಳಿದರು.
ಮೀಟಿಂಗ್ ಹಾಲ್ ಅನ್ನು ಸಿದ್ದರಾಮಯ್ಯ ಅವರು ಉದ್ಘಾಟಿಸುವ ಬದಲು ಡಿಕೆ ಶಿವಕುಮಾರ್ ಅವರು ಉದ್ಘಾಟನೆ ನೆರವೇರಿಸಿದರು. ಸ್ವತಃ ಸಿದ್ದರಾಮಯ್ಯ ಅವರೇ ಡಿಕೆ ಶಿವಕುಮಾರ್ ಅವರಿಗೆ ಉದ್ಘಾಟಿಸುವ ಅವಕಾಶವನ್ನು ನೀಡಿದರು. ಈ ವೇಳೆ ನನ್ನಿಂದಲೇ ಟೇಪ್ ಕಟ್ ಮಾಡಿಸ್ತಿದ್ದೀರಾ ಎಂದು ನಗುತ್ತಾ ಕೇಳಿದ ಡಿಕೆ ಶಿವಕುಮಾರ್ಗೆ, ಹೌದಪ್ಪಾ ಎಂದು ನಗುತ್ತಾ ಹೇಳಿದ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಮುಂದಿನ 5 ವರ್ಷ ನಾನೇ ಸಿಎಂ ಹೇಳಿಕೆ: ಯೂ ಟರ್ನ್ ಹೊಡೆದ ಸಿದ್ದರಾಮಯ್ಯ
ಈ ವೇಳೆ, ಹೌದಪ್ಪಾ ಅಧ್ಯಕ್ಷರು ಎಂದು ಡಿಕೆ ಶಿವಕುಮಾರ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಈ ವೇಳೆ ಕೆ.ಎನ್.ರಾಜಣ್ಣ ಎಲ್ಲಪ್ಪಾ ಮಿನಿಸ್ಟರ್ ಎಂದು ಕೇಳಿದಾಗ, ಏ ನಮ್ ಮಿನಿಸ್ಟರ್ ಎಲ್ಲಿದ್ದಾರೆ ನೋಡ್ರಿ ಎಂದು ಡಿ.ಕೆ. ಶಿವಕುಮಾರ್ ಕೇಳಿದರು.
ಈ ವೇಳೆ ಪರಮೇಶ್ವರ್ ಅವರನ್ನ ಸಿದ್ದರಾಮಯ್ಯ ಅವರು ಹೆಗಲ ಮೇಲೆ ಕೈ ಹಾಕಿ ಮುಂದಕ್ಕೆ ಕರೆತಂದರು. ನಂತರ ಎಲ್ಲರೂ ಒಂದು ಚಪ್ಪಾಳೆ ಹೊಡೆಯಿರಿ ಎಂದು ಹೇಳಿದ ಡಿಕೆ ಶಿವಕುಮಾರ್ ಟೇಪ್ ಕತ್ತರಿಸಿ ಮೀಟಿಂಗ್ ಹಾಲ್ ಉದ್ಘಾಟಿಸಿದರು. ಈ ವೇಳೆ ಸಚಿವ ಎಂಬಿ ಪಾಟೀಲ್ ಅವರು ಡಿಕೆ ಶಿವಕುಮಾರ್ ಪಕ್ಕದಲ್ಲೇ ಇದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:18 pm, Sat, 4 November 23