Ghulam Nabi Azad: ಪ್ರಧಾನಿ ಮೋದಿ ‘ರಾಜ್ಯಾಧಿಕಾರಿ’, ಎಂದಿಗೂ ಸೇಡು ತೀರಿಸಿಕೊಳ್ಳದ ರಾಜಕಾರಣಿ: ಗುಲಾಂ ನಬಿ ಆಜಾದ್

|

Updated on: Apr 04, 2023 | 6:38 PM

ಮೋದಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯನ್ನು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹಾಡಿಹೊಗಳಿದ್ದಾರೆ.

Ghulam Nabi Azad: ಪ್ರಧಾನಿ ಮೋದಿ ರಾಜ್ಯಾಧಿಕಾರಿ, ಎಂದಿಗೂ ಸೇಡು ತೀರಿಸಿಕೊಳ್ಳದ ರಾಜಕಾರಣಿ: ಗುಲಾಂ ನಬಿ ಆಜಾದ್
ಪ್ರಧಾನಿ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿಯನ್ನು (narendra modi) ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಹಾಡಿಹೊಗಳಿದ್ದಾರೆ. ಮೋದಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮೋದಿ ಸರ್ಕಾರ 370ನೇ ವಿಧಿ, ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಹಿಜಾಬ್ ವಿವಾದದಂತಹ ವಿಷಯಗಳಲ್ಲಿ ಮೋದಿ ಅವರನ್ನು ಟೀಕಿಸಿದ ನಮ್ಮನ್ನು ಎಂದಿಗೂ ದ್ವೇಷಿಸಿಲ್ಲ, ಅವರು ಎಂದಿಗೂ ಸೇಡು ತೀರಿಸಿಕೊಳ್ಳದ ರಾಜಕಾರಣಿ ಎಂದು ಕರೆದಿದ್ದಾರೆ. ನಾನು ಮೋದಿಯವರಿಗೆ ಈ ಸಮಯದಲ್ಲಿ ಮನ್ನಣೆ ನೀಡಬೇಕು. ನಾನು ಅವರಿಗೆ ಅನೇಕ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದೆ, ಆದರೆ ಅವರು ತುಂಬಾ ಉದಾರಿಯಾಗಿದ್ದರು. 370ನೇ ವಿಧಿ ಅಥವಾ ಸಿಎಎ ಅಥವಾ ಹಿಜಾಬ್ ವಿಚಾರವಾಗಿರಲಿ. ವಿರೋಧ ಪಕ್ಷದ ನಾಯಕನಾಗಿ ನಾನು ಅವರನ್ನು ಯಾವುದೇ ವಿಷಯದಲ್ಲೂ ಬಿಡಲಿಲ್ಲ. ನನಗೆ ಕೆಲವು ಮಸೂದೆಗಳು ಒಪ್ಪಿಗೆಯಾಗಿಲ್ಲ. ಆದರೆ ಈ ವಿಚಾರದಲ್ಲಿ ಅವರು ಒಬ್ಬ ರಾಜನೀತಿಜ್ಞರಂತೆ ವರ್ತಿಸಿದ್ದಾರೆ. ಈ ಕಾರಣಕ್ಕೆ ಮೋದಿ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ತಮ್ಮ ವಿರೋಧಿಗಳನ್ನು ಬಾಯಿ ಮುಚ್ಚಿಸಲು ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಯಂತಹ ಸಂಸ್ಥೆಗಳನ್ನು ಮೋದಿ ಸರ್ಕಾರವು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿರುವ ವಿರೋಧ ಪಕ್ಷದ ನಾಯಕರ ಹೇಳಿಕೆಯ ಮುಂದೆ ಗುಲಾಂ ನಬಿ ಆಜಾದ್ ಅವರ ಹೇಳಿಕೆಯು ಭಿನ್ನವಾಗಿದೆ. ಗುಲಾಂ ನಬಿ ಆಜಾದ್ ಪ್ರಧಾನಿಯನ್ನು ಹೊಗಳಿದ್ದು ಇದೇ ಮೊದಲಲ್ಲ. 2021ರಲ್ಲಿ ಮೋದಿ ಬಗ್ಗೆ ಅವರು ಬಾರಿ ಅಭಿಮಾನದಿಂದ ಮಾತನಾಡಿದರು. ಮೋದಿ ಹಳ್ಳಿಯಿಂದ ಬಂದವರು ಮತ್ತು ಚಹಾ ಮಾರಾಟ ಮಾಡುತ್ತಿದ್ದ ಬಡಕುಟುಂಬದ ವ್ಯಕ್ತಿ ಎಂಬ ಅಂಶವನ್ನು ಮರೆಮಾಚದಿದ್ದಕ್ಕಾಗಿ ನಾನು ಅವರನ್ನು ಪ್ರಶಂಸಿಸುತ್ತೇನೆ ಎಂದು ಹೇಳಿದ್ದರು.

ನಾನು ಅನೇಕ ನಾಯಕರ ಬಗ್ಗೆ ಬಹಳಷ್ಟು ವಿಷಯಗಳನ್ನು ಇಷ್ಟಪಡುತ್ತೇನೆ. ನಾನು ಕೂಡ ಹಳ್ಳಿಯಿಂದ ಬಂದವನು ಮತ್ತು ಹೆಮ್ಮೆಪಡುತ್ತೇನೆ. ನಮ್ಮ ಪ್ರಧಾನಿ (ನರೇಂದ್ರ ಮೋದಿ) ಕೂಡ ಹಳ್ಳಿಯಿಂದ ಬಂದವರು ಮತ್ತು ಚಹಾ ಮಾರುತ್ತಿದ್ದವರು. ನಾವಿಬ್ಬರು ರಾಜಕೀಯ ಪ್ರತಿಸ್ಪರ್ಧಿಗಳು, ಆದರೆ ಅವರು ತಮ್ಮ ನೈಜತೆಯನ್ನು ಮರೆಮಾಡುವುದಿಲ್ಲ ಎಂದು ಹೇಳಿದರು. ಜಮ್ಮು- ಕಾಶ್ಮೀರದ ಈ ನಾಯಕ (ಗುಲಾಂ ನಬಿ ಆಜಾದ್) ನನ್ನ ನಿಜವಾದ ಸ್ನೇಹಿತ ಎಂದು ಮೋದಿ ಸಂಸತ್​​ನಲ್ಲಿ ಹೇಳಿದರು. ಈ ಪ್ರತಿಕ್ರಿಯೆ ಬಂದ ನಂತರ ರಾಷ್ಟ್ರ ರಾಜಕೀಯದಲ್ಲಿ ಒಂದು ಬದಲಾವಣೆಯನ್ನು ಸೃಷ್ಟಿಸಿತ್ತು, ಇದೀಗ ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಪ್ರಧಾನಿ ಮೋದಿ ಅವರನ್ನು ಗುಲಾಂ ನಬಿ ಆಜಾದ್ ಹೊಗಳಿದ್ದಾರೆ. ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಮತ್ತು ಹೋಗುತ್ತದೆ, ಆದರೆ ಕೆಲವರಿಗೆ ಮಾತ್ರ ಅದನ್ನು ಹೇಗೆ ಜೀರ್ಣಿಸಿಕೊಳ್ಳುವುದು ಎಂದು ತಿಳಿದಿದೆ. ಆದ್ದರಿಂದ ಅವರು ಸ್ನೇಹಿತರಾಗಿ ವರ್ಷಗಳಿಂದ ಮಾಡಿದ ಕೆಲಸಕ್ಕಾಗಿ ನಾನು ಅವರನ್ನು ಗೌರವಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಶಸ್ತ್ರಾಸ್ತ್ರ ತ್ಯಜಿಸಲು ಉಗ್ರರಿಗೆ ಗುಲಾಂ ನಬಿ ಆಜಾದ್ ಮನವಿ; ಉಗ್ರರಿಂದ ಕೊಲೆ ಬೆದರಿಕೆ

ಪ್ರಧಾನಿ ಮೋದಿ ಒಬ್ಬ ಒರಟು ಮನುಷ್ಯ ಎಂಬ ಭಾವನೆ ನನ್ನಲ್ಲಿತ್ತು. ಅವರಿಗೆ ಮಕ್ಕಳಿಲ್ಲ, ಆದರೆ ಅವರು ಮಾನವೀಯತೆಯಿಂದ ಬದುಕಿದ್ದಾರೆ. ಒಂದು ಕಾಲದಲ್ಲಿ ನಾನು ಸಂಕಷ್ಟದಲ್ಲಿದ್ದಾಗ ಮೋದಿ ಮುಂದೆ ನಾನು ಕಣ್ಣೀರು ಹಾಕಿದ್ದು ನಿಜ. ಅವತ್ತು ನನಗೆ ಮಾತನಾಡಲು ಸಾಧ್ಯವಿಲ್ಲ ಎಂದು ನನ್ನ ಅಧಿಕಾರಿಗಳಿಗೆ ಹೇಳಿದೆ. ನಾನು ಅಳುವುದನ್ನು ಅಂದು ಅವರು ಕೇಳಿಸಿಕೊಂಡಿದ್ದಾರೆ ಎಂದು ನಾನು ಭಾವಿಸಿದ್ದೇನೆ. ನನ್ನ ಜನರು ಅಂದು ಸಂಕಷ್ಟದಲ್ಲಿದ್ದಾಗ ಒಂದು ರಾಜ್ಯದ ಮುಖ್ಯಮಂತ್ರಿ ಯಾವೆಲ್ಲ ಸಹಾಯ ಮಾಡಬೇಕಾ ಆ ಎಲ್ಲ ಸಹಾಯವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು ಮಾತ್ರ ಅಂದು ಕಾಂಗ್ರೆಸ್​​ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿತ್ತು. ಈ ಬಗ್ಗೆ ಕಾಂಗ್ರೆಸ್​​ಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಅವರನ್ನು ‘ಗಂಭೀರವಲ್ಲದ’ ರಾಜಕಾರಣಿ ಎಂದು ಕರೆದಿದ್ದರು. ಕಳೆದ 8 ವರ್ಷಗಳಲ್ಲಿ ಕಾಂಗ್ರೆಸ್​​ ಪಕ್ಷದಲ್ಲಿ ನಾಯಕತ್ವವು ಗಂಭೀರವಲ್ಲದ ವ್ಯಕ್ತಿಯನ್ನು ಪಕ್ಷದ ಚುಕ್ಕಾಣಿ ಹಿಡಿಯಲು ಪ್ರಯತ್ನಿಸಿದ್ದರಿಂದ ಇದೆಲ್ಲ ಸಂಭವಿಸಿದೆ ಎಂದು ಆಜಾದ್ ಅವರು ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಪ್ರಾದೇಶಿಕ ಪಕ್ಷಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಏಕೆ ಜಾಗವನ್ನು ಬಿಟ್ಟುಕೊಟ್ಟಿತು ಎಂದು ವಿವರಿಸಿದರು.

Published On - 6:27 pm, Tue, 4 April 23