ಬೆಂಗಳೂರು: ಚುನಾವಣೆ ಸಮೀಪ ಬಂದರೂ ಸಂಪುಟ ವಿಸ್ತರಣೆ (Karnataka Cabinet expansion) ಮಾತ್ರ ವಿಳಂಬ ಆಗ್ತಿದೆ. ಈ ಹಿನ್ನೆಲೆ ಕೆಲ ಸಚಿವಾಕಾಂಕ್ಷಿಗಳು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ದಿನ ಕಳೆದಂತೆ ಸಚಿವಕಾಂಕ್ಷಿಗಳ ಅಸಮಾಧಾನ ಹೆಚ್ಚಾಗ್ತಿದೆ. ಅದರಲ್ಲೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಬಹಿರಂಗವಾಗಿಯೇ ಹೊರಹಾಕಿತ್ತಿದ್ದಾರೆ. ಆದ್ರೆ, ಸಂಪುಟ ವಿಸ್ತರಣೆ ಪ್ರಕ್ರಿಯೆ ಮತ್ತೆ ಕೋಲ್ಡ್ ಸ್ಟೋರೇಜ್ ಸೇರಿದೆ.
ಹೌದು…ಸಧ್ಯ ಜನಸಂಕಲ್ಪ ಯಾತ್ರೆಯಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂದಿನ ವಾರ ದೆಹಲಿ ಭೇಟಿ ಕೂಡ ರದ್ದಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದರಿಂದ ಸಚಿವ ಸಂಪುಟ ವಿಸ್ತರಣೆ ಅನುಮಾನವಾಗಿದೆ.
ನನಗೆ ರಾಜಕೀಯ ಸಾಕಾಗಿದೆ, ಮಗನಿಗೆ ಟಿಕೆಟ್ ಕೊಡಿಸುತ್ತೇನೆ: ಚುನಾವಣಾ ಕಣದಿಂದ ಹಿಂದೆ ಸರಿದ ಎಂಟಿಬಿ
ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ತೆರಳಬೇಕಿತ್ತು. ಈ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆಗಳಾಗುವ ಸಾಧ್ಯತೆಗಳಿದ್ದವು. ಆದ್ರೆ, ಇದೀಗ ದೆಹಲಿ ಕಾರ್ಯಕ್ರಮವನ್ನು ಬೊಮ್ಮಾಯಿ ಕ್ಯಾನ್ಸಲ್ ಮಾಡಿದ್ದು, ಮುಂದಿನ ವಾರವೂ ಜನ ಸಂಕಲ್ಪ ಯಾತ್ರೆಗೆ ತೆರಳಲಿದ್ದಾರೆ.
ಇನ್ನೇನು ವಿಧಾನಸಭೆ ಚುನಾವಣೆಗೆ ಆರೇಳು ತಿಂಗಳು ಅಷ್ಟೇ ಬಾಕಿ ಇದ್ದು, ಪಕ್ಷ ಸಂಘಟನೆಗೆ ಒತ್ತು ನೀಡಲು ಬಿಜೆಪಿ ನಾಯಕರು ನಿರ್ಧರಿಸಿದಂತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಕೂಡಾ ಸಂಪುಟ ವಿಸ್ತರಣೆ ವಿಚಾರವಾಗಿ ಮೌನ ಆವರಿಸಿದೆ. ಆದ್ರೆ, ಮತ್ತೊಂದೆಡೆ ಈಶ್ವರಪ್ಪ ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಸಚಿವ ಸ್ಥಾನದ ಬಗ್ಗೆ ಈಶ್ವರಪ್ಪ ಅವರು ಮಾಧ್ಯಮಗಳ ಮುಂದೆ ಬಹಿರಂಗವಾಗಿಯೇ ತಮ್ಮ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಅಲ್ಲದೇ ಅಧಿವೇಶನಕ್ಕೆಗೈರಾಗಿದ್ದರು. ಪ್ರತಿ ಅಧಿವೇಶನದಲ್ಲೂ ಈಶ್ವರಪ್ಪ ವಿಪಕ್ಷಗಳ ವಿರುದ್ಧ ಮುಗಿಬಿದ್ದು, ಸರ್ಕಾರದ ಪರ ಮಾತನಾಡುತ್ತಿದ್ದರು. ಆದರೆ ಈಶ್ವರಪ್ಪ ಈ ಬಾರಿ ಅಧಿವೇಶನಕ್ಕೆ ಒಂದು ವಾರದಿಂದ ಗೈರಾಗುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಸಹ ರಾಜ್ಯ ನಾಯಕರು ಹಾಗೂ ಹೈಕಮಾಂಡ್ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಮಾತುಗಳನ್ನಾಡುತ್ತಿಲ್ಲ.
ಮುಂದಿನ ವಿಧಾನಸಭಾ ಚುನಾವಣೆ ಹತ್ತಿರ ಬಂದರೂ ಇನ್ನೂ ಕೂಡ ಸಂಪುಟ ವಿಸ್ತರಣೆ ಮಾಡಿಲ್ಲವೆಂದು ಅಸಮಾಧಾನಗೊಂಡಿರುವ ಈಶ್ವರಪ್ಪ, ಈ ಹಿಂದೆ ನಡೆದ ಜನಸ್ಪಂದನಾ ಕಾರ್ಯಕ್ರಮದಿಂದ ಕೂಡ ದೂರ ಉಳಿದಿದ್ದರು. ಅಲ್ಲದೇ ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂ ಹಾಗೂ ನಾಯಕರ ಮೇಲೆ ಈಶ್ವರಪ್ಪ ಒತ್ತಡ ಹೇರುದ್ದಾರೆ.
ಕೆಲವು ಆಕಾಂಕ್ಷಿಗಳು ಬಹಿರಂಗವಾಗಿ ಹೇಳಿಕೊಂಡರೂ ಪ್ರಕ್ರಿಯೆ ಬಗ್ಗೆ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಯಾವುದೇ ಚಲನಶೀಲತೆ ಕಾಣುತ್ತಿಲ್ಲ.
Published On - 6:16 pm, Thu, 13 October 22