ಮುಖ್ಯಮಂತ್ರಿ ಸ್ಥಾನ; ಪಟ್ಟುಬಿಡದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬೆಂಬಲಿಗರು ಹೇಳೋದೇನು ನೋಡಿ

|

Updated on: May 16, 2023 | 3:47 PM

ಕಾಂಗ್ರೆಸ್​​ ನೂತನ ಸರ್ಕಾರ ರಚನೆಗೂ ಮುನ್ನ ಮುಖ್ಯಮಂತ್ರಿ ಆಯ್ಕೆಯ ಗೊಂದಲ ಮುಂದುವರಿದಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬೆಂಬಲಿಗರು ಪಟ್ಟು ಸಡಿಲಿಸುವ ಲಕ್ಷಣ ಗೋಚರಿಸುತ್ತಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದು ಉಭಯ ನಾಯಕರ ಬಣದ ನಾಯಕರು, ಶಾಸಕರು ಪಟ್ಟು ಹಿಡಿದಿದ್ದಾರೆ.

ಮುಖ್ಯಮಂತ್ರಿ ಸ್ಥಾನ; ಪಟ್ಟುಬಿಡದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬೆಂಬಲಿಗರು ಹೇಳೋದೇನು ನೋಡಿ
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
Follow us on

ಬೆಂಗಳೂರು: ಕಾಂಗ್ರೆಸ್​​ ನೂತನ ಸರ್ಕಾರ ರಚನೆಗೂ ಮುನ್ನ ಮುಖ್ಯಮಂತ್ರಿ ಆಯ್ಕೆಯ ಗೊಂದಲ ಮುಂದುವರಿದಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬೆಂಬಲಿಗರು ಪಟ್ಟು ಸಡಿಲಿಸುವ ಲಕ್ಷಣ ಗೋಚರಿಸುತ್ತಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದು ಉಭಯ ನಾಯಕರ ಬಣದ ನಾಯಕರು, ಶಾಸಕರು ಪಟ್ಟು ಹಿಡಿದಿದ್ದಾರೆ. ಡಿಕೆಶಿ ಹಗಲು ರಾತ್ರಿ ನಿದ್ದೆ ಮಾಡದೆ ಪಕ್ಷ ಸಂಘಟನೆ ಮಾಡಿದ್ದಾರೆ‌. ಡಿಕೆಶಿ ಸಿದ್ದಮಾಡಿದ ವೇದಿಕೆಯ ಮೇಲಿ ಬಂದು ಭಾಷಣ ಮಾಡಿದವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಕಷ್ಟಪಟ್ಟವರಿಗೆ ಸಿಎಂ ಸ್ಥಾನ ಕೊಡಬೇಕು ಎಂದು ಡಿಕೆಶಿ ಆಪ್ತ ಜಿಸಿ ರಾಜು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.

ಫಲಿತಾಂಶ ಪ್ರಕಟವಾದಂದಿನಿಂದಲೂ ಮಠಾಧದೀಶರು, ಬೆಂಬಲಿಗರೂ ಡಿಕೆಶಿಗೆ ಸಿಎಂ ಹುದ್ದೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಈ ಮಧ್ಯೆ, ಸಿದ್ದರಾಮಯ್ಯರ ಶ್ರಮವೂ ಇದೆ ಎಂದು ಅವರ ಬೆಂಬಲಿಗರು ಪ್ರತಿಪಾದನೆ ಮಾಡುತ್ತಿದ್ದಾರೆ. ಇದರ ಜತೆ ಪ್ರಚಾರದ ಸಂದರ್ಭದಲ್ಲಿ ಹೆಲಿಕಾಪ್ಟರ್​​​ನಲ್ಲೇ ಭೋಜನ ಸೇವನೆ ಮಾಡುತ್ತಿರುವ ವಿಡಿಯೋ ವೈರಲ್ ಮಾಡಲಾಗಿದೆ.

ಇದನ್ನೂ ಓದಿ: ಡಿಸಿಎಂ ಹುದ್ದೆ ಸೃಷ್ಟಿಸಿದರೆ ಕಾನೂನು ಹೋರಾಟ; ಕಾಂಗ್ರೆಸ್​ಗೆ ಎಚ್ಚರಿಕೆ ನೀಡಿದ ಆರ್​ಟಿಐ ಕಾರ್ಯಕರ್ತ ಹೇಳಿದ್ದೇನು?

ಡಿಕೆಶಿ ಪರ ಶಾಸಕ ರಂಗನಾಥ್ ಬ್ಯಾಟಿಂಗ್

ದೆಹಲಿಯಲ್ಲಿ ಟಿವಿ9ಗೆ ಶಾಸಕ ರಂಗನಾಥ್ ಹೇಳಿಕೆ ನೀಡಿದ್ದು, ಡಿಕೆಶಿ ಪರ ವಹಿಸಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಕಷ್ಟ ಕಾಲದಲ್ಲಿ ಶ್ರಮ ಹಾಕಿದ್ದಾರೆ. ಸಮಸ್ಯೆಗಳನ್ನ ಎದುರಿಸಿ ಪಕ್ಷವನ್ನ ಅಧಿಕಾರಕ್ಕೆ ತಂದಿದ್ದಾರೆ. ಹೀಗಾಗಿ ಅವರು ಸಿಎಂ ಹುದ್ದೆ ಕೇಳೋದರಲ್ಲಿ ತಪ್ಪಿಲ್ಲ. ಅಮಿತ್ ಶಾ ಮೇಲೆ ಕೇಸ್‌ ಇಲ್ವಾ, ಬಿಎಸ್‌ವೈ ಮೇಲೆ ಕೇಸ್ ಇಲ್ವಾ? ದುರುದ್ದೇಶದಿಂದ ಕೇಸ್ ಹಾಕ್ತಾರೆ ಅಂತ ಹುದ್ದೆಯನ್ನು ತಡೆ ಹಿಡಿಯಲು ಸಾಧ್ಯವೇ? ಎಲ್ಲಾರನ್ನ ಎದುರಿಸ್ತಾರೆ. ಎಲ್ಲಾರ ಮೇಲೆ ಕೇಸ್ ಹಾಕ್ತರೆ. 7 ವರ್ಷ ಆಯ್ತು ಅದ್ರೆ ಯಾವ ವಿಚಾರವು ಸಾಬೀತು ಆಗಿಲ್ಲ. ಡಿಕೆಶಿ ಮೇಲೆ ಯಾವ ಆರೋಪವು ಇನ್ನೂ ಸಾಬೀತಾಗಿಲ್ಲ ಎಂದು ರಂಗನಾಥ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Tue, 16 May 23