ಕರ್ನಾಟಕ ಕಾಂಗ್ರೆಸ್​ನವರಿಗೆ ಉಗ್ರರ ಜತೆ ಅವಿನಾಭಾವ ಸ್ನೇಹ ಸಂಬಂಧ; ಬಿಜೆಪಿ ಆಕ್ರೋಶ

|

Updated on: Jul 21, 2023 | 9:26 PM

ಸಚಿವ ಭೈರತಿ ಸುರೇಶ್ ಆಪ್ತ, ಕಾಂಗ್ರೆಸ್ ಮುಖಂಡ ರಾಘವೇಂದ್ರಗೆ ಉಗ್ರ ಉಮರ್ ಜತೆ ನಂಟಿರುವುದಾಗಿ ಬಿಜೆಪಿ ಆರೋಪಿಸಿಗಿದ್ದು, ಆ ಕುರಿತ ಚಿತ್ರ ಸಹಿತ ಟ್ವೀಟ್ ಮಾಡಿದೆ.

ಕರ್ನಾಟಕ ಕಾಂಗ್ರೆಸ್​ನವರಿಗೆ ಉಗ್ರರ ಜತೆ ಅವಿನಾಭಾವ ಸ್ನೇಹ ಸಂಬಂಧ; ಬಿಜೆಪಿ ಆಕ್ರೋಶ
ಬಿಜೆಪಿ ಟ್ವೀಟ್​ ಮಾಡಿರುವ ಫೋಟೊ
Follow us on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ (CCB Police) ಬಂಧನಕ್ಕೊಳಗಾಗಿರುವ ಐವರು ಶಂಕಿತ ಉಗ್ರರ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ ನೀಡಿರುವ ಹೇಳಿಕೆಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿರುವ ಬೆನ್ನಲ್ಲೇ, ಕಾಂಗ್ರೆಸ್ (Congress) ನಾಯಕರಿಗೆ ಉಗ್ರರ ಜತೆ ನಂಟಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ಸಚಿವ ಭೈರತಿ ಸುರೇಶ್ ಆಪ್ತ, ಕಾಂಗ್ರೆಸ್ ಮುಖಂಡ ರಾಘವೇಂದ್ರಗೆ ಉಗ್ರ ಉಮರ್ ಜತೆ ನಂಟಿರುವುದಾಗಿ ಬಿಜೆಪಿ ಆರೋಪಿಸಿಗಿದ್ದು, ಆ ಕುರಿತ ಚಿತ್ರ ಸಹಿತ ಟ್ವೀಟ್ ಮಾಡಿದೆ.

‘ರಾಜ್ಯದಲ್ಲಿ ಉಗ್ರರು ಕಾಂಗ್ರೆಸ್ ಪಕ್ಷದ ಜತೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಸಂಚುಕೋರ ಶಾರೀಕ್ ಕುಟುಂಬದ ಜತೆ ಕಿಮ್ಮನೆ ರತ್ನಕರ್ ವ್ಯವಹಾರ ಮಾಡಿದ್ದರು. ಇದೀಗ ಪಿಎಫ್‌ಐ ಗೂಂಡಾಗಳಿಗೆ ರೆಡ್ ಕಾರ್ಪೆಟ್ ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅತ್ಯಾಪ್ತರಾಗಿರುವ ಸಚಿವರೂ ಆದ ಭೈರತಿ ಸುರೇಶ್‌ರ ಆಪ್ತ, ಕಾಂಗ್ರೆಸ್ ಮುಖಂಡ ರಾಘವೇಂದ್ರ, ಉಗ್ರ ಉಮರ್ ಜತೆಗೆ ಅವಿನಾಭಾವ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಕಾಂಗ್ರೆಸ್ಸಿನ ಸದಸ್ಯರ ಸಂಖ್ಯೆಯಲ್ಲಿ ಭಯೋತ್ಪಾದಕ ಬ್ರದರ್ಸ್‌ಗಳೇ ಹೆಚ್ಚಿರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರವಾದ ತನಿಖೆ ಆಗಲೇಬೇಕಿದೆ’ ಎಂದು ಟ್ವೀಟ್​​ ಮೂಲಕ ಬಿಜೆಪಿ ಆಗ್ರಹಿಸಿದೆ.


ಇದನ್ನೂ ಓದಿ: ಶಂಕಿತ ಉಗ್ರರಿಂದ ಪೊಲೀಸರು ವಶಪಡಿಸಿದ್ದು ಆಟದ ಸಾಮಗ್ರಿಯೇ; ಪರಮೇಶ್ವರಗೆ ಸಿಟಿ ರವಿ ಪ್ರಶ್ನೆ

ಬಂಧನಕ್ಕೊಳಗಾಗಿರುವ ಐವರು ಶಂಕಿತರನ್ನು ಉಗ್ರರು ಎಂದು ಈಗಲೇ ಹೇಳಲಾಗದು ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದ್ದರು. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಬಂಧಿತ ಶಂಕಿತ ಉಗ್ರರಿಂದ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವುದು ಆಟದ ಸಾಮಗ್ರಿಯೇ? ಹೌದಾಗಿದ್ದರೆ ಆಡುವ ಮಕ್ಕಳು ಎನ್ನಬಹುದಿತ್ತು. ಬಂಧಿತರಿಂದ ಗನ್, ಬುಲೆಟ್, ವಾಕಿಟಾಕಿ, ಸ್ಯಾಟಲೈಟ್ ಫೋನ್ ವಶಕ್ಕೆ ಪಡೆಯಲಾಗಿದೆ. ಇದನ್ನೆಲ್ಲ ನೋಡಿದ ಮೇಲೆ ಅವರನ್ನು ಏನೆಂದು ಕರೆಯಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದರು.