Karnataka Polls 2023: ಚುನಾವಣೆ ಸಿದ್ದತೆ ಪರಿಶೀಲನೆಗಾಗಿ ಮಾ.9ರಂದು ಕರ್ನಾಟಕಕ್ಕೆ ಕೇಂದ್ರ ಚುನಾವಣಾ ಆಯೋಗ ಭೇಟಿ

|

Updated on: Mar 05, 2023 | 10:54 PM

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಗಳು ಜೋರಾಗಿ ನಡೆಯುತ್ತಿದೆ. ಇವುಗಳ ಅಬ್ಬರದ ಪ್ರಚಾರದ ನಡುವೆ ಮಾರ್ಚ್ 9ರಂದು ಭಾರತದ ಚುನಾವಣಾ ಆಯೋಗವು ರಾಜ್ಯದ ಚುನಾವಣೆ ಸಿದ್ದತೆಗಳ ಪರಿಶೀಲನೆಗಾಗಿ ಕರ್ನಾಟಕಕ್ಕೆ ಭೇಟಿ ನೀಡುತ್ತಿದೆ.

Karnataka Polls 2023: ಚುನಾವಣೆ ಸಿದ್ದತೆ ಪರಿಶೀಲನೆಗಾಗಿ ಮಾ.9ರಂದು ಕರ್ನಾಟಕಕ್ಕೆ ಕೇಂದ್ರ ಚುನಾವಣಾ ಆಯೋಗ ಭೇಟಿ
Follow us on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಗಳು ಜೋರಾಗಿ ನಡೆಯುತ್ತಿದೆ. ಇವುಗಳ ಅಬ್ಬರದ ಪ್ರಚಾರದ ನಡುವೆ ಮಾರ್ಚ್ 9ರಂದು ಭಾರತದ ಚುನಾವಣಾ ಆಯೋಗವು (Election Commission Of India) ರಾಜ್ಯದ ಚುನಾವಣೆ ಸಿದ್ದತೆಗಳ ಪರಿಶೀಲನೆಗಾಗಿ ಕರ್ನಾಟಕಕ್ಕೆ ಭೇಟಿ ನೀಡುತ್ತಿದೆ. ಈ ಬಗ್ಗೆ ಜಂಟಿ ಮುಖ್ಯ ಚುನಾವಣಾಧಿಕಾರಿ ಟಿ.ಯೋಗೇಶ ಅವರು ಸಭಾ ಸೂಚನಾ ಪತ್ರ ಹೊರಡಿಸಿದ್ದು, ಮಾರ್ಚ್ 9ರಂದು ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಸಿದ್ದತೆಯನ್ನು ಪರಿಶೀಲಿಸಲು ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿದೆ ಎಂದು ತಿಳಿಸಿದ್ದಾರೆ.

ಚುನಾವಣಾ ಆಯೋಗದ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡುವ ದಿನದಂದು ವಿವಿಧ ಪಕ್ಷಗಳ ಜೊತೆ ಸಭೆಯೂ ನಡೆಯಲಿದೆ. ಈ ಬಗ್ಗೆ ಸೂಚನಾ ಪತ್ರದಲ್ಲಿ ತಿಳಿಸಲಾಗಿದ್ದು, ಆಯೋಗದೊಂದಿಗೆ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಸಭೆಯನ್ನು ನಿಗದಿತ ಸಮಯಕ್ಕೆ ವಿಕಾಸ ಸೌಧದ ಕೊಠಡಿ ಸಂಖ್ಯೆ 422ರಲ್ಲಿ ಕರೆಯಲಾಗಿದೆ. ಅದರಂತೆ ತಾವು ಅಥವಾ ತಮ್ಮ ಪ್ರತಿನಿಧಿಗಳು ಸದರಿ ಸಭೆಗೆ ಹಾಜರಾಗುವಂತೆ ಕೋರಲಾಗಿದೆ.

ಇದನ್ನೂ ಓದಿ: Amit Shah: ಮಾರ್ಚ್​ 12 ರಂದು ಅಮಿತ್​ ಶಾ ಮಧ್ಯ ಕರ್ನಾಟಕ ದಾವಣಗೆರೆಗೆ ಭೇಟಿ

ಯಾವ ಪಕ್ಷಕ್ಕೆ ಯಾವ ಸಮಯದಲ್ಲಿ ಸಭೆ?

ಕರ್ನಾಟಕ ರಾಜ್ಯದಲ್ಲಿನ ರಾಷ್ಟ್ರೀಯ ಹಾಗೂ ಸ್ಥಳೀಯ ಪಕ್ಷಗಳ ಸಭೆ ಪ್ರತ್ಯೇಕವಾಗಿ ಬೇರೆಬೇರೆ ಸಮಯದಲ್ಲಿ ನಡೆಯಲಿದೆ. ಅಖಿಲ ಭಾರತ ತೃಣಮೂಲ ಕಾಂಗ್ರೆಸ್​ ಪಕ್ಷಕ್ಕೆ ಮಧ್ಯಾಹ್ನ 2.30ರಿಂದ 2.40ರವರೆಗೆ ಸಮಯ ನಿಗದಿ ಮಾಡಲಾಗಿದ್ದು, ಬಹುಜನ ಸಮಾಜ ಪಕ್ಷದ ಜೊತೆ 2.40ರಿಂದ 2.50ರವರೆಗೆ, ಬಿಜೆಪಿ ಜೊತೆ 2.50ರಿಂದ 3 ಗಂಟೆವರೆಗೆ, ಭಾರತೀಯ ಕಮ್ಯುನಿಸ್ಟ್ ಪಕ್ಷದ ಜೊತೆ 3 ಗಂಟೆಯಿಂದ 3.10ರವರೆಗೆ, ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ದ ಜೊತೆ 3.10ರಿಂದ 3.20ರವರೆಗೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಜೊತೆ 3.20ರಿಂದ 3.30ರವರೆಗೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಜೊತೆ 3.30ರಿಂದ 3.40ರವರೆಗೆ, ನ್ಯಾಷನಲ್ ಪೀಪಕ್ಸ್ ಪಾರ್ಟಿ ಜೊತೆ 3.40ರಿಂದ 3.50ರವರೆಗೆ ಹಾಗೂ ಜೆಡಿಎಸ್ ಪಕ್ಷದ ಜೊತೆಗೆ 3.50ರಿಂದ 4 ಗಂಟೆವರೆಗೆ ಸಭೆ ನಡೆಯಲಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:52 pm, Sun, 5 March 23