BS Yediyurappa Resign: ಬಿ.ಎಸ್.ಯಡಿಯೂರಪ್ಪಗೆ ಆಷಾಢ ಕಂಟಕ ಮತ್ತೆ ಸಾಬೀತು

ಈ ಹಿಂದೆ ಅಂದರೆ 2011ರ ಜುಲೈನಲ್ಲಿ ರಾಜೀನಾಮೆ ನೀಡಲು ಹೈಕಮಾಂಡ್ ಸೂಚನೆ ನೀಡಿತ್ತು. ಲೋಕಾಯುಕ್ತ ವರದಿ ಸಲ್ಲಿಕೆ ಬೆನ್ನಲ್ಲೇ ರಾಜೀನಾಮೆಗೆ ಸೂಚನೆ ನೀಡಲಾಗಿತ್ತು. ಆಗ ಆಷಾಢದ ಬಳಿಕ ರಾಜೀನಾಮೆ ನೀಡುತ್ತೇನೆ ಎಂದು

BS Yediyurappa Resign: ಬಿ.ಎಸ್.ಯಡಿಯೂರಪ್ಪಗೆ ಆಷಾಢ ಕಂಟಕ ಮತ್ತೆ ಸಾಬೀತು
ಬಿ.ಎಸ್.ಯಡಿಯೂರಪ್ಪ
Updated By: sandhya thejappa

Updated on: Jul 26, 2021 | 1:23 PM

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ (BS Yediyurappa) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ (Resign) ನೀಡುವುದಾಗಿ ಘೋಷಿಸಿದ್ದಾರೆ. ಸಾಧನ ಸಮಾವೇಶದಲ್ಲಿ ಮಾತನಾಡಿದ ಅವರು, ಭಾವುಕರಾಗಿ ಘೋಷಿಸಿದ್ದಾರೆ. ಜುಲೈ 22ಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದರು. ಇದನ್ನು ಗಮನಿಸಿದಾಗ ಬಿಎಸ್​ವೈಗೆ ಆಷಾಢ ಕಂಟಕವುಂಟಾ ಎಂಬ ಪ್ರಶ್ನೆ ಉದ್ಭವಿಸಿತ್ತು. ಆದರೆ ಇದೀಗ ಸಾಬೀತಾಗಿದೆ. ಈ ಹಿಂದೆ ಯಡಿಯೂರಪ್ಪ ಆಷಾಢದಲ್ಲೇ ರಾಜೀನಾಮೆ ನೀಡಿದ್ದರು. ಮತ್ತೆ ಇದೀಗ ಆಷಾಢದಲ್ಲೇ ರಾಜೀನಾಮೆ ನೀಡುತ್ತಿದ್ದಾರೆ. ಹೀಗಾಗಿ ಆಷಾಢ ಮಾಸ ಯಡಿಯೂರಪ್ಪಗೆ ಕಾಡಿರುವುದು ಸಾಬೀತಾಗಿದೆ.

ಈ ಹಿಂದೆ ಅಂದರೆ 2011ರ ಜುಲೈನಲ್ಲಿ ರಾಜೀನಾಮೆ ನೀಡಲು ಹೈಕಮಾಂಡ್ ಸೂಚನೆ ನೀಡಿತ್ತು. ಲೋಕಾಯುಕ್ತ ವರದಿ ಸಲ್ಲಿಕೆ ಬೆನ್ನಲ್ಲೇ ರಾಜೀನಾಮೆಗೆ ಸೂಚನೆ ನೀಡಲಾಗಿತ್ತು. ಆಗ ಆಷಾಢದ ಬಳಿಕ ರಾಜೀನಾಮೆ ನೀಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಇದೀಗ ಮತ್ತೆ ಆಷಾಢದಲ್ಲಿಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಅಧಿಕಾರಕ್ಕೆ ಬಂದು ಎರಡನೇ ವರ್ಷದ ದಿನವೇ ರಾಜೀನಾಮೆ
ಅಧಿಕಾರಕ್ಕೆ ಬಂದು ಎರಡನೇ ವರ್ಷದ ದಿನವೇ ಬಿಎಸ್​ವೈ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. 4 ಬಾರಿ ಸಿಎಂ ಆದರೂ 5 ವರ್ಷ ಪೂರ್ಣಾವಧಿಯನ್ನು ಯಡಿಯೂರಪ್ಪ ಪೂರೈಸಿಲ್ಲ. 2007ರಲ್ಲಿ ಮೊದಲ ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದರು. ಜೆಡಿಎಸ್ ಬೆಂಬಲದೊಂದಿಗೆ ಯಡಿಯೂರಪ್ಪ ಸರ್ಕಾರ ರಚಿಸಿದ್ದರು. ಜೆಡಿಎಸ್ ಬೆಂಬಲ ವಾಪಸ್ ಪಡೆದ ಹಿನ್ನೆಲೆ 8 ದಿನಕ್ಕೆ ರಾಜೀನಾಮೆ ನೀಡಿದರು.

2008ರಲ್ಲಿ 2ನೇ ಬಾರಿ ಸಿಎಂ ಆಗಿ ಆಯ್ಕೆಯಾಗಿದ್ದರು. 3 ವರ್ಷ ಪೂರೈಸುವ ಮೊದಲೇ ಬಿಎಸ್​ವೈ ರಾಜೀನಾಮೆ ನೀಡಿದ್ದರು. 2018ರಲ್ಲಿ ಬಿಜೆಪಿಗೆ 104 ಸ್ಥಾನ ಬಂದಿತ್ತು. ಆಗ ಮತ್ತೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಕೇವಲ ಮೂರೇ ದಿನಕ್ಕೆ ರಾಜೀನಾಮೆ ನೀಡಿದ್ದರು. 2019ರಲ್ಲಿ ಮತ್ತೆ ಸಿಎಂ ಆಗಿ ಆಯ್ಕೆಯಾಗಿದ್ದ ಯಡಿಯೂರಪ್ಪ, ಎರಡು ವರ್ಷಕ್ಕೆ ಮತ್ತೆ ರಾಜೀನಾಮೆ ನೀಡುತ್ತಿದ್ದಾರೆ.

ಇದನ್ನೂ ಓದಿ

BS Yediyurapap Resignation: ವಿಧಾನಸೌಧದಿಂದ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲಿರುವ ಬಿ.ಎಸ್. ಯಡಿಯೂರಪ್ಪ

BJP ಸಾಧನಾ ಸಮಾವೇಶದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಕಣ್ಣೀರು

(Karnataka Ex CM BS Yediyurappa is facing Ashadha Masa Crisis in his life here is the examples)