
ಬೆಂಗಳೂರು, ಅಕ್ಟೋಬರ್ 16: ತೀವ್ರ ಆಕ್ಷೇಪದ ನಡುವೆಯೂ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ನಿಷೇಧ ಹೇರುವ ವಿಚಾರ ಸಂಬಂಧ ಹೊಸ ವಿಧೇಯಕ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಕಾನೂನು ಇಲಾಖೆಯಿಂದ ಈಗಾಗಲೇ ರೆಗ್ಯುಲೇಷನ್ ಆಫ್ ಯೂಸ್ ಆಫ್ ಗವರ್ನಮೆಂಟ್ ಪ್ರಿಮಿಸಿಸ್ ಆ್ಯಂಡ್ ಪ್ರಾಪರ್ಟೀಸ್ ಬಿಲ್ – 2025ರ ಡ್ರಾಫ್ಟ್ ಸಿದ್ಧವಾಗಿದ್ದು, ನಿಯಮ ಮೀರಿ RSS ಚಟುವಟಿಕೆಗಳನ್ನು ನಡೆಸಿದರೆ ಶಿಕ್ಷೆ ವಿಧಿಸಲು ಚಿಂತನೆ ನಡೆದಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲೂ ಈ ವಿಚಾರ ಚರ್ಚೆಯಾಗಲಿದೆ.
ಇದನ್ನೂ ಓದಿ: ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗುವ ನೌಕರರಿಗೆ ಕಡಿವಾಣ ಹಾಕಿ: ಸಿಎಂಗೆ ಮತ್ತೊಂದು ಪತ್ರ ಬರೆದ ಪ್ರಿಯಾಂಕ್ ಖರ್ಗೆ
RSS ಚಟುವಟಿಕೆಯಲ್ಲಿ ಭಾಗಿಯಾಗುವ ನೌಕರರಿಗೆ ಕಡಿವಾಣ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ. ಈ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆಯನ್ನು ಬಲಿಪಶು ಮಾಡಲಾಗುತ್ತಿದ್ದು, ಇದು ಸಿಎಂ ಸಿದ್ದರಾಮಯ್ಯ ಹೇಳಿ ಮಾಡಿಸಿರುವ ನಾಟಕ. ಪ್ರಿಯಾಂಕ್ ಪತ್ರದ ಆಧಾರದಲ್ಲಿ ನಾನು ಕೂಡ ಸರ್ಕಾರಿ ನೌಕರ. ಮೊನ್ನೆಯಷ್ಟೇ ನಾನು ಗಣವೇಷಧಾರಿಯಾಗಿ ಹೋಗಿದ್ದೇನೆ. ನನ್ನನ್ನು ಯಾವಾಗ ಕಳುಹಿಸುತ್ತೀಯಪ್ಪ, ಆ ತಾಕತ್ ಇದೆಯಾ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಸರ್ಕಾರಿ ಸ್ಥಳಗಳಲ್ಲಿ RSS ಚಟುವಟಿಕೆಗೆ ನಿರ್ಬಂಧ ವಿಧಿಸುವ ಸರ್ಕಾರದ ಚಿಂತನ ವಿರೋಧಿಸಿ ಹಿಂದೂ ಪರ ಕಾರ್ಯಕರ್ತರಿಂದ ಮೈಸೂರಿನ ಚೆಲುವಾಂಬ ಪಾರ್ಕ್ ನಲ್ಲಿ ‘ಐ ಲವ್ RSS’ ಅಭಿಯಾನ ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:58 pm, Thu, 16 October 25