ಸಂಪುಟ ಸಭೆಯಲ್ಲಿ ರಾಜೀನಾಮೆ ಪ್ರಸ್ತಾಪವಿಟ್ಟ ಸಚಿವ ಮಾಧುಸ್ವಾಮಿ; ಹೇ, ಸುಮ್ಮನಿರಪ್ಪ ನೀನು ಎಂದ ಸಿಎಂ

|

Updated on: May 27, 2021 | 5:53 PM

ಆಗ ಮಾತಿಗಿಳಿದ ಕಂದಾಯ ಸಚಿವ ಆರ್.ಅಶೋಕ್, ಅವರಾದ್ರೂ ಏನ್ಮಾಡೋದು.. ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಓದಿದ್ದಾರೆ. ನಾವು ರಾಜಕಾರಣಿಗಳು ಐದು ವರ್ಷ ಇರುತ್ತೇವೆ..ಆಮೇಲೆ ಹೋಗುತ್ತೇವೆ. ಅಧಿಕಾರಿಗಳು ತಾನೇ ಕಾಯಂ ಇರೋದು? ಎಂದು ಸಚಿವ ಮಾಧುಸ್ವಾಮಿಯವರಿಗೆ ಹೇಳಿದರು.

ಸಂಪುಟ ಸಭೆಯಲ್ಲಿ ರಾಜೀನಾಮೆ ಪ್ರಸ್ತಾಪವಿಟ್ಟ ಸಚಿವ ಮಾಧುಸ್ವಾಮಿ; ಹೇ, ಸುಮ್ಮನಿರಪ್ಪ ನೀನು ಎಂದ ಸಿಎಂ
ಸಚಿವ ಜೆ.ಸಿ ಮಾಧುಸ್ವಾಮಿ ಮತ್ತು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ
Follow us on

ಬೆಂಗಳೂರು: ಕರ್ನಾಟಕದಲ್ಲಿ ಕೊವಿಡ್ ನಿರ್ವಹಣೆ ಬಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆಯ ಪ್ರಸ್ತಾಪವಿಟ್ಟ ಅಚ್ಚರಿಯ ಬೆಳವಣಿಗೆ ನಡೆಯಿತು.

ಸಚಿವ ಸಂಪುಟ ಸಭೆಯಲ್ಲಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸಂಬಂಧಿಸಿದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಸ್ಪತ್ರೆಯಲ್ಲಿ ಕೈಗೊಂಡ ವ್ಯವಸ್ಥೆ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ ವಿವರಿಸುತ್ತಿದ್ದರು. ಈ ವೇಳೆ ‘ನೀವು ಬರೀ ರೆಕಾರ್ಡ್​​​ನಲ್ಲಿ ಇರೋದು ಹೇಳ್ತಿದ್ದೀರಾ..ನೀವು ಹೇಳುತ್ತಿರುವುದು ಯಾವುದೂ ಅನುಷ್ಠಾನ ಆಗಿಲ್ಲ’ ಎಂದು ಸಚಿವ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಮುಂದುವರೆದ ಅವರು, ‘ನೀವು ಹೇಳಿದ್ದೆಲ್ಲಾ ಅನುಷ್ಠಾನ ಆಗಿದ್ದರೆ ನಾನು ರಾಜೀನಾಮೆ ಕೊಡುತ್ತೇನೆ’ ಎಂದು ಲಘು ಧಾಟಿಯಲ್ಲಿ ಹೇಳಿದರು.

ಸಚಿವ ಮಾಧುಸ್ವಾಮಿಯವರ ರಾಜೀನಾಮೆಯ ಪ್ರಸ್ತಾಪದ ಮಾತನ್ನು ಕೇಳಿಸಿಕೊಂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಹೇ ಸುಮ್ಮನಿರಪ್ಪ ನೀನು..’ ಎಂದು ಸಚಿವ ಮಾಧುಸ್ವಾಮಿಯವರನ್ನು ತಣ್ಣಗಾಗಿಸಿದರು. ಆಗ ಮಾತಿಗಿಳಿದ ಕಂದಾಯ ಸಚಿವ ಆರ್.ಅಶೋಕ್, ಅವರಾದ್ರೂ ಏನ್ಮಾಡೋದು.. ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಓದಿದ್ದಾರೆ. ನಾವು ರಾಜಕಾರಣಿಗಳು ಐದು ವರ್ಷ ಇರುತ್ತೇವೆ..ಆಮೇಲೆ ಹೋಗುತ್ತೇವೆ. ಅಧಿಕಾರಿಗಳು ತಾನೇ ಕಾಯಂ ಇರೋದು? ಎಂದು ಸಚಿವ ಮಾಧುಸ್ವಾಮಿಯವರಿಗೆ ಹೇಳಿದರು.

ಇದನ್ನೂ ಓದಿ: ಸೋಮವಾರದೊಳಗೆ ಕಟ್ಟಡ ಕಾರ್ಮಿಕರಿಗೆ ತಲುಪಲಿದೆ ಕೊವಿಡ್ ಪ್ಯಾಕೇಜ್: ಸಚಿವ ಶಿವರಾಮ್ ಹೆಬ್ಬಾರ್

ಕೊವಿಡ್​ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ; ನೇಮಕಾತಿ ಪತ್ರ ನೀಡಿದ ಸಚಿವ ಸುರೇಶ್ ಕುಮಾರ್

( Karnataka law minister JC Madhuswamy says about resignation cabinet meeting but CM Yediyurappa stopped him)