ಹಾಸನ: ಅರಸೀಕೆರೆ ಕ್ಷೇತ್ರದ ಹಾಲಿ ಶಾಸಕರಿಂದ ಹಂತಹಂತವಾಗಿ ಜೆಡಿಎಸ್ (JD(S)) ಪಕ್ಷ ಮುಗಿಸಲು ಯತ್ನಿಸಲಾಗುತ್ತಿದೆ ಎಂದು ಶಾಸಕ ಶಿವಲಿಂಗೇಗೌಡ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (Kumaraswamy) ವಾಗ್ದಾಳಿ ಮಾಡಿದರು. ಇಂದಿನ ಸಭೆಗೆ ಹೋಗಬೇಡಿ ಎಂದು ಕ್ಷೇತ್ರದ ಶಾಸಕ ಹಣ ನೀಡಿದ್ದಾರೆ. ಹಣದ ಆಮಿಷವೊಡ್ಡಿದ್ದರೂ ಅರಸೀಕೆರೆ ಕ್ಷೇತ್ರದ ಜನತೆ ಹಣಕ್ಕೆ ಮಹತ್ವ ನೀಡದೆ ಇಲ್ಲಿಗೆ ಬಂದಿದ್ದೀರಿ. ಅರಸೀಕೆರೆ ಟೌನ್ನಲ್ಲಿ ರೋಡ್ಶೋ ವೇಳೆ ಸುಡುಬಿಸಿಲಲ್ಲೇ ಬಂದಿದ್ದೇನೆ. ಪ್ರತಿದಿನವೂ ನಾನು ಇದೇ ರೀತಿ ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇನೆ. ತಂದೆ ದೇವೇಗೌಡರು 91ನೇ ವಯಸ್ಸಿನಲ್ಲಿ ರೈತರು ಎಂದು ಜಪಿಸುತ್ತಿದ್ದಾರೆ. ರಾಜ್ಯದ ರೈತರ ಬದುಕು ಹಸನಾಗಿಸಲು ಅವಕಾಶ ನೀಡಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಇವತ್ತಿನ ಕಾರ್ಯಕ್ರಮ ಜೆಡಿಎಸ್ ಪುನಶ್ಚೇತನ ಕಾರ್ಯಕ್ರಮ. ಕಳೆದ ಮೂರು ವರ್ಷದಿಂದ ಜೆಡಿಎಸ್ ಬಾವುಟ ಹಿಡಿದರೆ ಜನ ಬರಲ್ಲ. ಹಾಗಾಗಿ ನನಗೆ ಎಲ್ಲರನ್ನು ಒಂದು ಗೂಡಿಸಲು ಅವಕಾಶ ಕೊಡಿ ಎಂದು ಇಂದಿನ ಶಾಸಕರು ಹೇಳಿದ್ರು. ನಾವು ಕಾದು ಕಾದು ಜೆಡಿಎಸ್ ಮುಗಿಸಲು ಈ ಮಹಾನುಭಾವ ಹೊರಟಿರೋದು ಗೊತ್ತಾದಾಗ ಜನರೇ ಸಮಯ ಕೇಳಿದ್ರು. ನಾನು ಉತ್ತರ ಕರ್ನಾಟಕದಲ್ಲಿ ಯಾತ್ರೆಯಲ್ಲಿದ್ದಾಗ ಅಲ್ಲಿಗೂ ಬಂದು ಭೇಟಿ ಮಾಡಿ ಅನುಮತಿ ಪಡೆದು ಈ ಬೃಹತ್ ಸಮಾವೇಶ ಮಾಡಿದಾರೆ.
ಇದನ್ನೂ ಓದಿ: JDS Politics: ಅರಸೀಕೆರೆಯಲ್ಲಿ ಜೆಡಿಎಸ್ ಸಮಾವೇಶ; ಭವಾನಿ ರೇವಣ್ಣ ಟಿಕೆಟ್ ಭವಿಷ್ಯ ಇಂದೇ ನಿರ್ಧಾರ ಸಾಧ್ಯತೆ
ಕಾರ್ಯಕ್ರಮಕ್ಕೆ ಹೊಗದಂತೆ ಹಣ ಹಂಚಿದ್ದು ಈ ರಾಜ್ಯದಲ್ಲಿಯೇ ಮೊದಲು. ನಮ್ಮ ಕೊನೆಯುಸಿರು ಇರುವವರೆಗೆ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ತರಲ್ಲ. ನನಗೆ ಎರಡು ಬಾರಿ ಹೃದಯ ಚಿಕಿತ್ಸೆ ಆಗಿದ್ದರು ನಿತ್ಯ 18 ಗಂಟೆ ಹೋರಾಟ ಮಾಡುತ್ತಿದ್ದೇನೆ. ಇದಕ್ಕೆ ಜನರ ಪ್ರೀತಿ ವಿಶ್ವಾಸ ಕಾರಣ. ನಾನು ಅರಸೀಕೆರೆ ಜನತೆ ಮಾತ್ರ ಅಲ್ಲ ನಾಡಿನ ಜನತೆಗೆ ಹೇಳುತ್ತೇನೆ. ನಮ್ಮ ತಂದೆ ಪಕ್ಷ, ರೈತರು ಎಂದು ಚಿಂತನೆ ಮಾಡುತ್ತಾರೆ. ಅವರ ಭಾವನೆಗಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ನಮ್ನ ತಂದೆಯವರನ್ನ ಗೆಲ್ಲಿಸಿದ್ದಾರೆ, ಸೋಲಿಸಿದ್ದಾರೆ. ಆದರೆ ಪ್ರೀತಿ ವಿಶ್ವಾಸ ಎಂದು ಕೊರತೆ ಮಾಡಿಲ್ಲ ಎಂದರು.
ಅರಸೀಕೆರೆ ಕ್ಷೇತ್ರದ ಶಾಸಕ K.M.ಶಿವಲಿಂಗೇಗೌಡಗೆ ನಿಮ್ಮ ಮುಂದಿನ ನಿರ್ಧಾರ ತಿಳಿಸಿ ಎಂದು ರೇವಣ್ಣ ಅವಕಾಶ ನೀಡಿದ್ದರು. ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ. ಅರಸೀಕೆರೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನ, ಯೋಜನೆಗಳನ್ನು ನೀಡಿದ್ದೆವು. JDSನಿಂದ ಗೆದ್ದು ಶಿವಲಿಂಗೇಗೌಡ ನಮ್ಮ ವಿರುದ್ಧವೇ ಹೇಳಿಕೆ ನೀಡ್ತಿದ್ದಾರೆ. ಹೆಚ್ಡಿಡಿ, ಹೆಚ್ಡಿಕೆ ಮುಖ ನೋಡಿ ವೋಟ್ ಹಾಕ್ತಾರಾ ಎನ್ನುತ್ತಿದ್ದಾರೆ. ಶಿವಲಿಂಗೇಗೌಡ ಕಾಂಗ್ರೆಸ್ ಸೇರುತ್ತಾರೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಶಿವಲಿಂಗೇಗೌಡ ಕಾಂಗ್ರೆಸ್ ಸೇರುವುದು 2-3 ವರ್ಷದ ಹಿಂದೆ ನಿರ್ಧಾರವಾಗಿದೆ.
ಇದನ್ನೂ ಓದಿ: ಕರ್ನಾಟಕದ ಸಂಪತ್ತು, ತೆರಿಗೆ ಹಣವನ್ನು ಲೂಟಿ ಮಾಡಿದ ಅಮಿತ್ ಶಾ: ಕುಮಾರಸ್ವಾಮಿ ವಾಗ್ದಾಳಿ
ಅರಸೀಕೆರೆ ಜೆಡಿಎಸ್ ಅಭ್ಯರ್ಥಿಯಾಗಿ ಬಾಣಾವರ ಅಶೋಕ್ ಕಣಕ್ಕೆ
ಇನ್ನು ಅರಸೀಕೆರೆ ಜೆಡಿಎಸ್ ಅಭ್ಯರ್ಥಿಯನ್ನಾಗಿ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಣಾವರ ಅಶೋಕ್ ಹೆಸರನ್ನು ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದರು. ಕಾಂಗ್ರೆಸ್ ಸೇರಲು ಶಾಸಕ ಶಿವಲಿಂಗೇಗೌಡ ಸಜ್ಜಾಗಿದ್ದು, ಬಾಣಾವರ ಅಶೋಕ್ಗೆ ಟಿಕೆಟ್ ನೀಡುವ ಮೂಲಕ ಶಿವಲಿಂಗೇಗೌಡ ವಿರುದ್ಧ ಹೆಚ್ಡಿಕೆ ಸೆಡ್ಡು ಹೊಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:32 pm, Sun, 12 February 23