ಹಾಸನ: ಬೆಂಗಳೂರಲ್ಲಿ ಪಾರ್ಕ್ ಜಾಗ ಕಬಳಿಸಿದ್ದಾರೆಂದು ಆರೋಪಿಸಿ ಶಾಸಕ ಪ್ರೀತಂಗೌಡ (Preetham Gowda), ಸತೀಶ್ ರೆಡ್ಡಿ ವಿರುದ್ಧ ಲೋಕಾಯುಕ್ತಕ್ಕೆ (Lokayukta) ಕೆಪಿಸಿಸಿ ಕಾನೂನು ಘಟಕದಿಂದ ದೂರು ನೀಡಲಾಗಿದೆ. 2011-12ರಲ್ಲಿ ಜರಗನಹಳ್ಳಿಯ ಚಂದ್ರಕಾಂತ್ ಎಂಬುವರಿಗೆ ಸೇರಿದ್ದ ಆಸ್ತಿ ಎನ್ನಲಾಗಿದೆ. ಜರಗನಹಳ್ಳಿಯಲ್ಲಿ 1 ಎಕರೆ 6 ಗುಂಟೆ ವಿಸ್ತೀರ್ಣದ ಹೊಂದಿರುವ ಪಾರ್ಕ್ ಇದಾಗಿದೆ. ಬಿಡಿಎಯಿಂದ ಎರಡು ಎಕರೆ ಭೂಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಇದೇ ಆಸ್ತಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿತ್ತು. ನಂತರ ಇದೇ ಆಸ್ತಿ ಶಾಸಕ ಪ್ರೀತಂಗೌಡ ಖರೀದಿಸಿರುವ ಆರೋಪ ಮಾಡಿದ್ದು, ಆಸ್ತಿ ಖರೀದಿಗೆ 20 ಲಕ್ಷ ರೂ. ಕೊಟ್ಟಿದ್ದು ಅಫಿಡವಿಟ್ನಲ್ಲಿ ಉಲ್ಲೇಖವಿಲ್ಲ.
ಪ್ರೀತಂಗೌಡ ಹೆಸರಿನಲ್ಲಿ ಇಸಿ ರಿಪ್ಲೇಕೆಟ್ ಆಗುತ್ತಿದೆ ಎನ್ನಲಾಗಿದೆ. ಇದೀಗ ಸರ್ವೇ ನಂ.73ರಲ್ಲಿ ಸಾರ್ವಜನಿಕರಿಗಾಗಿ ಪಾರ್ಕ್ ನಿರ್ಮಾಣವಾದ್ರೂ ಇಸಿ ಶಾಸಕ ಪ್ರೀತಂಗೌಡ ಹೆಸರಿನಲ್ಲಿದೆ. ಹಾಗಾಗಿ ಇಬ್ಬರು ಶಾಸಕರನ್ನು ಆರೋಪಿಗಳನ್ನಾಗಿ ಮಾಡಿ ದೂರು ಸಲ್ಲಿಕೆ ಮಾಡಲಾಗಿದೆ.
ಆಕ್ಷೇಪಾರ್ಹ ಹೇಳಿಕೆ ನೀಡಿದ ವಿಚಾರವಾಗಿ ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿದೆ. ಇದೀಗ ಇಬ್ಬರೂ ನಾಯಕರು ಆಯೋಗಕ್ಕೆ ಕಾರಣ ನೀಡಬೇಕಿದೆ. ಯತ್ನಾಳ್ ಅವರು ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಪದ ಬಳಸಿ ಟೀಕಿಸಿದ್ದರೆ ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಪದ ಬಳಸಿ ಟೀಕಿಸಿದ್ದರು.
ಇದನ್ನೂ ಓದಿ: ಅವಹೇಳನಕಾರಿ ಹೇಳಿಕೆ; ಬಸನಗೌಡ ಪಾಟೀಲ್ ಯತ್ನಾಳ್, ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್
ಮೇ 4ರ ಸಂಜೆ 5 ಗಂಟೆಯೊಳಗೆ ಉತ್ತರ ನೀಡುವಂತೆ ಇಬ್ಬರಿಗೂ ಆಯೋಗ ಸೂಚಿಸಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ನೀತಿ ಸಂಹಿತೆ ಪ್ರಕಾರ, ರಾಜಕೀಯ ವಿರೋಧಿಗಳ ವೈಯಕ್ತಿಕ ತೇಜೋವಧೆ ಮಾಡುವಂತಿಲ್ಲ. ಹೀಗಾಗಿ ನಿಮ್ಮ ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು ಎಂದು ಇಬ್ಬರೂ ನಾಯಕರನ್ನು ಆಯೋಗ ಪ್ರಶ್ನಿಸಿದೆ.
ಬೆಳಗಾವಿ: ಅನುಮತಿ ಪಡೆಯದೇ ಲಿಂಗಾಯತ ಮುಖಂಡರ ಸಭೆ ಕರೆದು ಊಟದ ವ್ಯವಸ್ಥೆ ಹಿನ್ನೆಲೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಬಿಜೆಪಿ ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಮಲಪ್ರಭಾ ಶುಗರ್ಸ್ ಮಾಜಿ ಅಧ್ಯಕ್ಷ ಮೋಹನ ಸಂಬರಗಿ ವಿರುದ್ಧ ನಂದಗಡ ಠಾಣೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ ಬಿಜೆಪಿ ಅಭ್ಯರ್ಥಿ ಕಡೆಯವರಿಂದ ಕ್ಯೂಆರ್ ಕೋಡ್ ಕೂಪನ್ ವಿತರಣೆ; ಆರೋಪಿಗಳು ಅರೆಸ್ಟ್
ಜಿಲ್ಲೆಯ ಖಾನಾಪುರ ಕ್ಷೇತ್ರದ ವ್ಯಾಪ್ತಿಯ ಹಿರೇಮುನವಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಲಿಂಗಾಯತ ಮುಖಂಡರ ಸಭೆ ಕರೆಯಲಾಗಿದೆ ಎನ್ನಲಾಗಿದೆ. ಖಾನಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಠ್ಠಲ್ ಹಲಗೇಕರ್ ಪರ ಪ್ರಚಾರ ಹಿನ್ನೆಲೆ 500ಕ್ಕೂ ಹೆಚ್ಚು ಜನರ ಸೇರಿಸಿ ಸಭೆ ಮಾಡಿ ಊಟದ ವ್ಯವಸ್ಥೆ ಆರೋಪ ಕೇಳಿಬಂದಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ