ಜೆಡಿಎಸ್​ ಶಾಸಕರ ಕಚೇರಿ ಉದ್ಘಾಟಿಸಿದ ಸಚಿವ, ಆಪರೇಷನ್ ಹಸ್ತಕ್ಕೆ ಒಳಗಾದರೇ ಶರಣಗೌಡ ಕಂದಕೂರು?

|

Updated on: Sep 18, 2023 | 7:10 PM

ಈಗಾಗಲೇ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಅವರು ವಿರೋಧಿಸಿದ್ದು, ದೇವೇಗೌಡ-ಕುಮಾರಸ್ವಾಮಿಗೆ ನಡೆಗೆ ಬಹಿರಂಗವಾಗಿಯೇ ಅಸಮಧಾನ ಹೊರಹಾಕಿದ್ದಾರೆ. ಇದರ ಮಧ್ಯೆ ತಮ್ಮ ಕಚೇರಿ ಉದ್ಘಾಟನೆಯನ್ನು ಕಾಂಗ್ರೆಸ್ ಸರ್ಕಾರದ ಸಚಿವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿಸಿದ್ದು, ಹಲವು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇನ್ನು ಈ ಬಗ್ಗೆ ಸಚಿವ ದರ್ಶನಾಪುರ ಸ್ಪಷ್ಟನೆ ನೀಡಿದ್ದು, ಅದು ಈ ಕೆಳಗಿನಂತಿದೆ.

ಜೆಡಿಎಸ್​ ಶಾಸಕರ ಕಚೇರಿ ಉದ್ಘಾಟಿಸಿದ ಸಚಿವ, ಆಪರೇಷನ್ ಹಸ್ತಕ್ಕೆ ಒಳಗಾದರೇ ಶರಣಗೌಡ ಕಂದಕೂರು?
ಶರಣಬಸಪ್ಪ ದರ್ಶನಾಪುರ, ಶರಣಗೌಡ ಕಂದಕೂರು
Follow us on

ಯಾದಗಿರಿ, (ಸೆಪ್ಟೆಂಬರ್ 18): ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಹಸ್ತ (Congress Operation Hasta) ಜೋರಾಗಿದೆ. ಕಾಂಗ್ರೆಸ್​ ಸದ್ದಿಲ್ಲದೇ ಕೆಲ ಬಿಜೆಪಿ ಹಾಗೂ ಜೆಡಿಎಸ್​ ಹಾಲಿ ಶಾಸಕರಿಗೆ ಗಾಳ ಹಾಕಿದೆ. ಈಗಾಗಲೇ ಆ ಶಾಸಕರ ಬೆಂಬಲಿಗರನ್ನು ಕಾಂಗ್ರೆಸ್ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇನ್ನೂ ಕೆಲವರನ್ನು ಪಕ್ಷಕ್ಕೆ ಸೆಳೆಯಲು ಕಸರತ್ತು ನಡೆಸಿದೆ. ಇದರ ಮಧ್ಯೆ ಇದೀಗ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಸಹ ಕಾಂಗ್ರೆಸ್​​ನ ಆಪರೇಷನ್ ಹಸ್ತ ಗಾಳಕ್ಕೆ ಸಿಲುಕಿದರೆ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಹೌದು…ಗುರುಮಿಠಕಲ್​​ನಲ್ಲಿ ಜೆಡಿಎಸ್​ ಶಾಸಕ ಶರಣಗೌಡ ಕಂದಕೂರು ಅವರ ಜನ ಸಂಪರ್ಕ ಕಚೇರಿಯನ್ನು ಕಾಂಗ್ರೆಸ್​ ಸರ್ಕಾರದ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದ್ದು, ಅಚ್ಚರಿಕೆ ಕಾರಣವಾಗಿದೆ. ಅಲ್ಲದೇ ಇದು ಭಾರೀ ಚರ್ಚೆ ಹುಟ್ಟುಹಾಕಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗಿನ ಮೈತ್ರಿಗೆ ಜೆಡಿಎಸ್​ ಶಾಸಕ ಶರಣಗೌಡ ಕಂದಕೂರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಈ ಮೈತ್ರಿ ತಮ್ಮ ಒಪ್ಪಿಗೆ ಇಲ್ಲ. ಒಂದು ವೇಳೆ ನಮ್ಮ ವರಿಷ್ಠರು ಬಿಜೆಪಿಯಿಂದಿಗೆ ಮೈತ್ರಿ ಮಾಡಿಕೊಂಡರೇ ಕ್ಷೇತ್ರದ ಜನಾಭಿಪ್ರಾಯ ಕೇಳಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ಮೂಲಕ ಜೆಡಿಎಸ್​ ನಾಯಕ ಏಕ ತೀರ್ಮಾನಕ್ಕೆ ಮಾಧ್ಯಮಗಳ ಮುಂದೆ ಅಸಮಾಧಾನ ತೋಡಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ತಮ್ಮ ತಮ್ಮ ಜನ ಸಂಪರ್ಕ ಕಚೇರಿಯನ್ನು ಸಚಿವ ಶರಣಪ್ಪ ದರ್ಶನಾಪುರ ಅವರ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿಸಿದ್ದು ಅಚ್ಚರಿಕೆ ಕಾರಣವಾಗಿದೆ. ಈ ಬೆಳವಣಿಗೆಗಳು ನಡೆದ ಬೆನ್ನಲ್ಲೇ ಇದೀಗ ಶರಣಗೌಡ ಕಂದಕೂರು ಅವರು ಜೆಡಿಎಸ್ ತೊರೆದು ಕಾಂಗ್ರೆಸ್​ಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಕ್ಷೇತ್ರದಲ್ಲಿ ಭಾರೀ ಸದ್ದು ಮಾಡತೊಡಗಿದೆ.

ಇದನ್ನೂ ಓದಿ: ಬಿಜೆಪಿಯೊಂದಿಗಿನ ಮೈತ್ರಿಗೆ ಜೆಡಿಎಸ್​ನಲ್ಲಿ ಅಸಮಾಧಾನ ಸ್ಫೋಟ, ಕಾಂಗ್ರೆಸ್​ ಬಗ್ಗೆ ಸಾಫ್ಟ್ ಕಾರ್ನರ್ ತೋರಿದ ಶಾಸಕ

ಇನ್ನು ಜೆಡಿಎಸ್​ ಶಾಸಕರ ಜನ ಸಂಪರ್ಕ ಕಚೇರಿ ಉದ್ಘಾಟನೆ ಮಾಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ದರ್ಶನಾಪುರ, ಸರ್ಕಾರದ ಕಚೇರಿ ಇದ್ದು ಯಾವುದೇ ಪಕ್ಷಕ್ಕೆ ಸಿಮಿತವಲ್ಲ.ಈ ಕಾರ್ಯಾಲಯ ಗುರುಮಠಕಲ್ ಕ್ಷೇತ್ರದ ಜನರ ಕಚೇರಿಯಾಗಿದೆ. ಇದು ಒಂದು ಪಕ್ಷದ ಕಚೇರಿ ಅಲ್ಲ‌. ಇದು ಶಾಸಕರ ಕಚೇರಿ ಇದೆ. ಚುನಾವಣೆ ಆಗುವರಗೆ ಪಕ್ಷ-ರಾಜಕೀಯ ಮಾಡಲಿ. ಚುನಾವಣೆ ನಂತರ ನಾವೇಲ್ಲ ಶಾಸಕರು ಒಂದಾಗಿ ಕೆಲಸ ಮಾಡುತ್ತೇವೆ ಎಂದು ಸಮರ್ಥಿಸಿಕೊಂಡರು.

ಯಾದಗಿರಿ ಜಿಲ್ಲೆಯ ಜನರ ಹೀತ ದೃಷ್ಟಿಯಿಂದ ನಾಲ್ಕು ಜನ ಶಾಸಕರು ಸೇರಿ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಬಿಜೆಪಿ- ಜೆಡಿಎಸ್ ನ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ನಮಗೆ ಟಾಸ್ಕ್ ಕೊಟ್ಟಿಲ್ಲ. ನಾವು ಯಾವ ಪಕ್ಷದಲ್ಲಿದ್ದರೂ ಎಲ್ಲರೂ ಸೇರಿ ಅಭಿವೃದ್ಧಿ ಮಾಡುತ್ತೇವೆ. ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರನ್ನು ಕಾಂಗ್ರೆಸ್ ಸೇರಿಸಿಕೊಳ್ಳುವ ಟಾಸ್ಕ್ ಕೊಟ್ಟಿಲ್ಲ. ನಾವು ಆ ತಂಟೆಗೆ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಇಲ್ಲಿ ಕ್ಲಿಕ್ಕಿಸಿ