ಬೆಂಗಳೂರು, ಅಕ್ಟೋಬರ್ 11: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕೈಬಿಟ್ಟಿರುವ ವಿಚಾರವಾಗಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಶಾಸಕ ಮುನಿರತ್ನ (Munirathna) ಪ್ರತಿಭಟನೆ ಮಾಡಿದ್ದಾರೆ. ಬಳಿಕ ಇಂದು ಸದಾಶಿವನಗರದ ಡಿಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಕಚೇರಿಯಿಂದ ಶ್ರೀಧರ್ ಎಂಬುವರು ಕರೆ ಮಾಡಿದ್ದರು. ಹಾಗಾಗಿ ಭೇಟಿ ಮಾಡಿದ್ದು, ಅನುದಾನದ ಬಗ್ಗೆ ಮಾತ್ರ ಅವರೊಂದಿಗೆ ಚರ್ಚೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಆರ್.ಆರ್.ಕ್ಷೇತ್ರದ ಕಾಮಗಾರಿ ಪಟ್ಟಿ ಕೊಡಲು ಹೇಳಿದ್ದಾರೆ. ಯಾವುದೇ ತೊಂದರೆ ಆಗದಂತೆ ನಾನು ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಒಟ್ಟಾರೆ ಅನುದಾನಕ್ಕೆ ಪಟ್ಟಿ ಕೊಡಲು ಹೇಳಿದ್ದಾರೆ. ಪಟ್ಟಿ ಕೊಟ್ಟ ಬಳಿಕ ಎಲ್ಲವನ್ನೂ ಸರಿ ಮಾಡುತ್ತೇನೆ ಅಂತಾ ಹೇಳಿದ್ದಾರೆ. ಈ ವೇಳೆ ಹೊಸ ಕಾಮಗಾರಿ ಬಗ್ಗೆಯೂ ಚರ್ಚೆಯಾಗಿದೆ. 126 ಕೋಟಿ ರೂ. ಅನುದಾನ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೇನೆ. ನನ್ನ ಕ್ಷೇತ್ರದ ಜನರಿಗಾಗಿ ಎಲ್ಲಿಗೆ ಬೇಕಾದರೂ ಹೋಗುತ್ತೇನೆ ಎಂದರು.
ಇದನ್ನೂ ಓದಿ: ಪತಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಕಾಂಗ್ರೆಸ್ ಸೇರ್ಪಡೆಗೆ ಮುಂದಾದ ಬಿಜೆಪಿ ಮಾಜಿ ಶಾಸಕಿ
ಡಿಕೆ ಶಿವಕುಮಾರ್ ಭೇಟಿ ವೇಳೆ ರಾಜಕೀಯ ವಿಚಾರದ ಬಗ್ಗೆ ಮಾತಾಡಿಲ್ಲ. ನನ್ನ ಕ್ಷೇತ್ರದ ವಿಚಾರದ ಬಗ್ಗೆ ಮಾತ್ರ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.
ಶಾಸಕ ಮುನಿರತ್ನ ಭೇಟಿ ಬಳಿಕ ಮಾತನಾಡಿ ಡಿಸಿಎಂ ಡಿಕೆ ಶಿವಕುಮಾರ್ ಮೊದಲೇ ಭೇಟಿಗೆ ಸಮಯ ಕೇಳಿದ್ದರೆ ಕೊಡುತ್ತಿದ್ದೆ. ಕಂಬಳ ಕಾರ್ಯಕ್ರಮದಲ್ಲಿ ಬಂದು ಸೀನ್ ಮಾಡಲು ಪ್ರಯತ್ನಿಸಿದ್ದರು ಎಂದು ಮನಿರತ್ನ ವಿರುದ್ದ ಗರಂ ಆದರು.
ಇದನ್ನೂ ಓದಿ: ಮೈತ್ರಿಗೆ ವಿರೋಧವಿಲ್ಲ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪಕ್ಷ ಬಿಡುವುದಿಲ್ಲ: ಶಾಸಕ ಜಿಟಿ ದೇವೇಗೌಡ
ಕಾಮಗಾರಿ ಬಿಲ್ ಬಿಡುಗಡೆ ಮಾಡಿ ಅಂತಾ ಮನವಿ ಮಾಡಿದ್ದಾರೆ. ಅಸೆಂಬ್ಲಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಕೊಟ್ಟಿದ್ದಾರೆ. ಕ್ಷೇತ್ರದಲ್ಲಿ ಅನ್ಯಾಯ ಆಗಿದೆ ತನಿಖೆ ಆಗಬೇಕೆಂದು ಪತ್ರ ಬರೆದಿದ್ದರು. ಒಳ್ಳೆಯ ಕೆಲಸ ಮಾಡಿದರೆ ಬಿಲ್ ಕೊಡುತ್ತೇವೆ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಕಾಲಿಗೆ ಶಾಸಕ ಮುನಿರತ್ನ ಬಿದ್ದ ವಿಚಾರವಾಗಿ ಮಾತನಾಡಿದ ಅವರು, ಕಾಲಿಗೆ ಬಿದ್ರಾ, ನಾನೇನು ಮಠದ ಸ್ವಾಮೀಜಿನಾ. ಮುನಿರತ್ನ ದ್ವೇಷದ ರಾಜಕಾರಣ ಅಂತಾ ಹೇಳುತ್ತಿದ್ದಾರೆ. ನಮ್ಮ ಕ್ಷೇತ್ರದ ಮೆಡಿಕಲ್ ಕಾಲೇಜನ್ನು ಹೇಗೆ ತೆಗೆದರು ಅಂತಾ ಕೇಳಿ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.