AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಕಾಂಗ್ರೆಸ್ ಸೇರ್ಪಡೆಗೆ ಮುಂದಾದ ಬಿಜೆಪಿ ಮಾಜಿ ಶಾಸಕಿ

ಬಹುತೇಕ ಅಕ್ಟೋಬರ್ 20ಕ್ಕೆ ಕಾಂಗ್ರೆಸ್ ಸೇರ್ಪಡೆಗೆ ನಿರ್ಧಾರ ಮಾಡಿದ್ದಾರೆ ಎಂದು ಅಂದಕೊಂಡಿದ್ದಾರೆ. ಈವರೆಗೂ ಕಾಂಗ್ರೆಸ್ ಸೇರ್ಪಡೆ ದಿನಾಂಕ ಖಚಿತವಾಗಿಲ್ಲ. ಅದು ನಿಗದಿಯಾದ ಬಳಿಕ‌ ನಾನೇ ತಿಳಿಸುತ್ತೇನೆ. ನಮ್ಮ ಸಮಾಜದ ಮುಖಂಡರ ಆಲೋಚನೆಯಂತೆ ಪಕ್ಷ ಬದಲಾವಣೆ ಮಾಡಲಾಗುತ್ತಿದ್ದೇನೆ ಎಂದರು.

ಪತಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ಕಾಂಗ್ರೆಸ್ ಸೇರ್ಪಡೆಗೆ ಮುಂದಾದ ಬಿಜೆಪಿ ಮಾಜಿ ಶಾಸಕಿ
ಬಿಜೆಪಿ ಮಾಜಿ ಶಾಸಕಿ ಪೂರ್ಣೀಮಾ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on:Oct 11, 2023 | 3:54 PM

Share

ಚಿತ್ರದುರ್ಗ, ಅ.11: ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆ ಹಿರಿಯೂರು(Hiriyuru)ಕ್ಷೇತ್ರದ ಮಾಜಿ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್(Poornima srinivas)ಅವರ ಪತಿ ಡಿ.ಟಿ.ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿ, ಬಳಿಕ ಆ ಆದೇಶವನ್ನು ಹಿಂಪಡೆಯಲಾಗಿತ್ತು. ಇದೀಗ ಪತಿಗೆ ಹೇಗಾದರೂ ಮಾಡಿ ಎಂಎಲ್​ಸಿ ಟಿಕೆಟ್​ ಕೊಡಿಸಲು ಪಣ ತೊಟ್ಟಿರುವ ಅವರು ‘ ಕಾಂಗ್ರೆಸ್​(Congress) ಕಡೆ ಮುಖ ಮಾಡಿದ್ದಾರೆ. ಹೌದು, ಇಂದು(ಅ.11) ಚಿತ್ರದುರ್ಗದ ಕೃಷ್ಣ ಯಾದವಾನಂದ ಮಠಕ್ಕೆ ಬಿಜೆಪಿ ಮಾಜಿ ಶಾಸಕಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭೇಟಿ ನೀಡಿದ್ದರು. ಇದಕ್ಕೆ ಅವರ ಪತಿ ಡಿ.ಟಿ.ಶ್ರೀನಿವಾಸ್ ಕೂಡ ಸಾಥ್ ಕೊಟ್ಟಿದ್ದಾರೆ. ಇನ್ನು ನಿನ್ನೆ ಸಂಜೆ ಕೃಷ್ಣ ಯಾದವ ಮಠಕ್ಕೆ‌ ಭೇಟಿ ನೀಡಿ, ಕೃಷ್ಣ ಯಾದವಾನಂದ ಶ್ರೀ ಸಮ್ಮುಖದಲ್ಲಿಯೇ ಸಮಾಜದ ಮುಖಂಡರ ಜೊತೆ ಸಭೆ ನಡೆಸಿದ್ದರು.

ಪತಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಲು ‘ಕೈ’ ಹಿಡಿದ ಪೂರ್ಣಿಮಾ?

ಚಿತ್ರದುರ್ಗದ ಶ್ರೀಕೃಷ್ಣ ಯಾದವಾನಂದ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು  ‘ಬಹುತೇಕ ಅಕ್ಟೋಬರ್ 20ಕ್ಕೆ ಕಾಂಗ್ರೆಸ್ ಸೇರ್ಪಡೆಗೆ ನಿರ್ಧಾರ ಮಾಡಿದ್ದಾರೆ ಎಂದು ಅಂದಕೊಂಡಿದ್ದಾರೆ. ಈವರೆಗೂ ಕಾಂಗ್ರೆಸ್ ಸೇರ್ಪಡೆ ದಿನಾಂಕ ಖಚಿತವಾಗಿಲ್ಲ. ಅದು ನಿಗದಿಯಾದ ಬಳಿಕ‌ ನಾನೇ ತಿಳಿಸುತ್ತೇನೆ. ನಮ್ಮ ಸಮಾಜದ ಮುಖಂಡರ ಆಲೋಚನೆಯಂತೆ ಪಕ್ಷ ಬದಲಾವಣೆ ಮಾಡಲಾಗುತ್ತಿದ್ದೇನೆ. ಜೊತೆಗೆ ಪತಿ ಡಿ.ಟಿ.ಶ್ರೀನಿವಾಸ್​ಗೆ MLC ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದರು.

ಇದನ್ನೂ ಓದಿ:ಕಾಂಗ್ರೆಸ್ ಪಕ್ಷ ಸೇರುವ ಯೋಚನೆ ಬಂದರೆ ಕದ್ದುಮುಚ್ಚಿ ಹೋಗಲ್ಲ, ಎಲ್ಲರಿಗೂ ತಿಳಿಸಿ ಹೋಗುತ್ತೇನೆ: ಪೂರ್ಣಿಮಾ ಶ್ರೀನಿವಾಸ್, ಬಿಜೆಪಿ ನಾಯಕಿ

ಹೌದು, ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್​ಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎಂದು ಈಗಾಗಲೇ ಕೆಪಿಸಿಸಿ ಅಧ್ಯಕ್ಷರು ಭರವಸೆ ನೀಡಿದ್ದಾರೆ.  ಆದರೆ, ನಾನು ಇನ್ನೂ ಹಿರಿಯೂರು ಅಥವಾ ಕೆ.ಆರ್.ಪುರಂ ಕ್ಷೇತ್ರ ಎಂದು ತೀರ್ಮಾನ ಮಾಡಿಲ್ಲ. ವಿಧಾನಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದೆ. ಕಾಂಗ್ರೆಸ್ ಪಕ್ಷ ಸೇರಲು ಯಾವುದೇ ಬೇಡಿಕೆಯಿಟ್ಟಿಲ್ಲ. ಹಿರಿಯೂರಲ್ಲಿ ಸೋತಿರುವುದರಿಂದ ಜನರ ಸಮಸ್ಯೆಗೆ ಸ್ಪಂದಿಸುತ್ತೇನೆ. ಬಿಜೆಪಿಯಲ್ಲಿ ಕಡೆಗಣನೆ ಆಯಿತು ಎಂದು ನಾನು ಹೇಳಲ್ಲ. ನನ್ನ ಕ್ಷೇತ್ರಕ್ಕೆ ಬಿಎಸ್ ವೈ, ಬೊಮ್ಮಾಯಿ ಹೆಚ್ಚಿನ ಅನುದಾನ ನೀಡಿದ್ದಾರೆ. ಆದ್ರೆ, ಬಿಜೆಪಿ ಸರ್ಕಾರದಲ್ಲಿ ನಮ್ಮ ಸಮಾಜವನ್ನು ಕಡೆಗಣಿಸಲಾಯಿತು ಎಂದು ಹೇಳಿದರು.

ಅನೇಕ ಯಾದವ ಸಮುದಾಯ ಭವನ, ಹಾಸ್ಟೆಲ್ ಅರ್ಧಕ್ಕೆ ನಿಂತಿವೆ. ನನಗೆ ಕಡೆ ಗಳಿಗೆಯಲ್ಲಿ ಮಂತ್ರಿಸ್ಥಾನ ತಪ್ಪಿಸಲಾಯಿತು. ಕಾಡುಗೊಲ್ಲ ಅಭಿವೃದ್ಧಿ ನಿಗಮ ವೇಳೆ ಗೊಂದಲ ಸೃಷ್ಠಿಸಿದರು. ನಮ್ಮನ್ನು ಗಣನೆಗೆ ತೆಗೆದುಕೊಂಡು ನಿಗಮ ಮಾಡಬೇಕಿತ್ತು ಸಮಾಜದ ಮುಖಂಡರ ನಿರ್ಧಾರದಂತೆ ಪಕ್ಷ ಬದಲಾವಣೆ ಮಾಡುತ್ತಿದ್ದೇವೆ. ಹಿಂದುಳಿದ ಸಮಾಜಗಳಿಗೆ ಬಿಜೆಪಿಯಲ್ಲಿ ಕಷ್ಟವಿದೆ. ಇನ್ನು ಇದೇ ವೇಳೆ ನನಗೆ ಗೊತ್ತಿದ್ದಂತೆ ಜಿಲ್ಲೆಯ ಇತರೆ ಬಿಜೆಪಿ ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆ ಇಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Wed, 11 October 23