Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಪಕ್ಷ ಸೇರುವ ಯೋಚನೆ ಬಂದರೆ ಕದ್ದುಮುಚ್ಚಿ ಹೋಗಲ್ಲ, ಎಲ್ಲರಿಗೂ ತಿಳಿಸಿ ಹೋಗುತ್ತೇನೆ: ಪೂರ್ಣಿಮಾ ಶ್ರೀನಿವಾಸ್, ಬಿಜೆಪಿ ನಾಯಕಿ

ಕಾಂಗ್ರೆಸ್ ಪಕ್ಷ ಸೇರುವ ಯೋಚನೆ ಬಂದರೆ ಕದ್ದುಮುಚ್ಚಿ ಹೋಗಲ್ಲ, ಎಲ್ಲರಿಗೂ ತಿಳಿಸಿ ಹೋಗುತ್ತೇನೆ: ಪೂರ್ಣಿಮಾ ಶ್ರೀನಿವಾಸ್, ಬಿಜೆಪಿ ನಾಯಕಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 06, 2023 | 5:52 PM

ಸಂಘದ ಕೆಲಸವೊಂದರ ನಿಮಿತ್ತ ಶಿವಕುಮಾರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಹಬ್ಬಕ್ಕೆ ಮನೆಗೆ ಬರುವಂತೆ ಆಹ್ವಾನ ನೀಡಿದಾಗ ಅವರು ಅದನ್ನು ನೋಟ್ ಮಾಡಿಕೊಂಡು ಇವತ್ತು ಕೃಷ್ಣಜನ್ಮಾಷ್ಟಮಿಯ ದಿನ ಬಂದಿದ್ದರು ಎಂದು ಪೂರ್ಣಿಮಾ ಹೇಳಿದರು.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ತಮ್ಮ ಮನೆಗೆ ಭೇಟಿ ನೀಡಿ ವಾಪಸ್ಸು ಹೋದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹಿರಿಯೂರು ಕ್ಷೇತ್ರದ ಮಾಜಿ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Poornima Srinivas), ತನಗೆ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುವ ಯೋಚನೆಯೇನೂ ಇಲ್ಲ, ಒಂದು ಪಕ್ಷ ಅಂಥ ನಿರ್ಧಾರವೇನಾದರೂ ತೆಎಗದಿಕೊಂಡರೆ ಕದ್ದುಮುಚ್ಚಿಯೇನೂ ಹೋಗೋದಿಲ್ಲ, ಮಾಧ್ಯಮದವರಿಗೆ ತಿಳಿಸಿಯೇ ಹೋಗುವುದಾಗಿ ಹೇಳಿದರು. ತಮ್ಮ ಸಂಘದ ಕೆಲಸವೊಂದರ ನಿಮಿತ್ತ ಶಿವಕುಮಾರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಹಬ್ಬಕ್ಕೆ ಮನೆಗೆ ಬರುವಂತೆ ಆಹ್ವಾನ ನೀಡಿದಾಗ ಅವರು ಅದನ್ನು ನೋಟ್ ಮಾಡಿಕೊಂಡು ಇವತ್ತು ಕೃಷ್ಣಜನ್ಮಾಷ್ಟಮಿಯ (Krishna Janmashtami) ದಿನ ಬಂದಿದ್ದರು ಎಂದು ಪೂರ್ಣಿಮಾ ಹೇಳಿದರು. ಅವರು ಮನೆಯಲ್ಲಿದ್ದಾಗ ರಾಜಕೀಯಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯಲಿಲ್ಲ, ಎಲ್ಲರೂ ಹಬ್ಬದ ವಾತಾವರಣದಲ್ಲಿ ಕಳೆದು ಹೋಗಿದ್ದೆವು ಎಂದು ಮಾಜಿ ಶಾಸಕಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ