ಕೃಷ್ಣಜನ್ಮಾಷ್ಟಮಿ: ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನೆಯಲ್ಲಿ ಹಬ್ಬದೂಟ ಸವಿದ ಡಿಕೆ ಶಿವಕುಮಾರ್
ಕೇವಲ ಭೇಟಿ ಮಾತ್ರ ಅಲ್ಲ, ಶಾಸಕಿಯ ಮನೆಯಲ್ಲಿ ಹಬ್ಬದೂಟವನ್ನೂ ಸವಿದರು. ಶಿವಕುಮಾರ್ ಬಾಯಿ ಚಪ್ಪರಿಸುತ್ತಾ ಊಟ ಮಾಡೋದ್ರಲ್ಲಿ ಮಗ್ನರಾಗಿದ್ದಾಗ ಪೂರ್ಣಿಮಾ ಉಪ ಮುಖ್ಯಮಂತ್ರಿಯ ಪಕ್ಕದಲ್ಲೇ ಕೂತಿದ್ದರು. ಶಿವಕುಮಾರ್ ಸುತ್ತ ನೆರೆದಿರುವ ಪೂರ್ಣಿಮಾ ಕುಟುಂಬದ ಸದಸ್ಯರು ಅವರು ಈಟ ಮಾಡುವುದನ್ನು ನೋಡುತ್ತಿದ್ದರು
ಬೆಂಗಳೂರು: ಡಿಕೆ ಶಿವಕುಮಾರ್ (DK Shivakumar) ಬಿಜೆಪಿ ನಾಯಕರನ್ನು ಅವರ ಮನೆಗಳಿಗೆ ಹೋಗಿ ಭೇಟಿಯಾಗುವುದು ಇಲ್ಲವೇ ತಮ್ಮ ನಿವಾಸಕ್ಕೆ ಬರಮಾಡಿಕೊಳ್ಳಿವುದನ್ನು ಯಾಕೆ ಮಾಡುತ್ತಿದ್ದಾರೆ ಅಂತ ಕನ್ನಡಿಗರಿಗೆ ಅರ್ಥವಾಗೋದು ಸ್ವಲ್ಪ ಕಷ್ಟವಾದರೂ ರಾಜ್ಯದ ಹಿರಿಯ ಬಿಜೆಪಿ ನಾಯಕರಿಗೆ ಚೆನ್ನಾಗಿ ಅರ್ಥವಾಗುತ್ತಿದೆ. ಕೃಷ್ಣಜನ್ಮಾಷ್ಟಮಿಯಾಗಿರುವ (Krishna Janmashtami) ಇವತ್ತು ಅವರು ಹಿರಿಯೂರು ಕ್ಷೇತ್ರದ ಮಾಜಿ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರನ್ನು (Poornima Srinivas) ನಗರದ ಕೆಆರ್ ಪುರಂನ ದೇವಸಂದ್ರದಲ್ಲಿರುವ ಅವರ ಪೂರ್ಣಿಮಾ ನಿವಾಸದಲ್ಲಿ ಭೇಟಿಯಾದರು. ಕೇವಲ ಭೇಟಿ ಮಾತ್ರ ಅಲ್ಲ, ಶಾಸಕಿಯ ಮನೆಯಲ್ಲಿ ಹಬ್ಬದೂಟವನ್ನೂ ಸವಿದರು. ಶಿವಕುಮಾರ್ ಬಾಯಿ ಚಪ್ಪರಿಸುತ್ತಾ ಊಟ ಮಾಡೋದ್ರಲ್ಲಿ ಮಗ್ನರಾಗಿದ್ದಾಗ ಪೂರ್ಣಿಮಾ ಉಪ ಮುಖ್ಯಮಂತ್ರಿಯ ಪಕ್ಕದಲ್ಲೇ ಕೂತಿದ್ದರು. ಶಿವಕುಮಾರ್ ಸುತ್ತ ನೆರೆದಿರುವ ಪೂರ್ಣಿಮಾ ಕುಟುಂಬದ ಸದಸ್ಯರು ಅವರು ಈಟ ಮಾಡುವುದನ್ನು ನೋಡುತ್ತಿದ್ದರು. ಕಾಂಗ್ರೆಸ್ ನಾಯಕ ಮಾತ್ರ ಯಾವುದೇ ಸಂಕೋಚವಿಲ್ಲದೆ ಆರಾಮವಾಗಿ ಊಟ ಮಾಡಿದರು. ಭೇಟಿಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್ ಕಾರಿಡಾರ್: ಡಿಕೆ ಶಿವಕುಮಾರ್ ಘೋಷಣೆ

