AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷೀರಭಾಗ್ಯ ದಶಮಾನೋತ್ಸವ ಸಮಾರಂಭದ ವೇದಿಕೆಗೆ ಸಿಎಂ ಸಿದ್ದರಾಮಯ್ಯ ಎಂದಿನ ಗತ್ತಿನಲ್ಲಿ ಠೀವಿಯಿಂದ ಆಗಮಿಸಿದರು!

ಕ್ಷೀರಭಾಗ್ಯ ದಶಮಾನೋತ್ಸವ ಸಮಾರಂಭದ ವೇದಿಕೆಗೆ ಸಿಎಂ ಸಿದ್ದರಾಮಯ್ಯ ಎಂದಿನ ಗತ್ತಿನಲ್ಲಿ ಠೀವಿಯಿಂದ ಆಗಮಿಸಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 06, 2023 | 3:05 PM

ಕೆಲವು ಸಲ ಅವರ ನಡಿಗೆ ಜನಪ್ರಿಯತೆಯ ದ್ಯೋತಕ ಅನಿಸುತ್ತದೆ. ನಡಿಗೆಯಲ್ಲಿ ರಾಜಗಾಂಭಿರ್ಯ, ಗತ್ತು, ಗೈರತ್ತು! ತಾನು ನಾಡಿನ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅವರು ಹಾಗೆ ನಡೆಯುತ್ತಾರೆ, ಗತ್ತು-ಠೀವಿ ಪ್ರದರ್ಶಿಸುತ್ತಾರೆ ಅಂದ್ಕೋಬೇಡಿ. ವಿರೋಧ ಪಕ್ಷದ ನಾಯಕ (Leader of Opposition) ಆಥವಾ ಕೇವಲ ಶಾಸಕನಾಗಿದ್ದಾಗಲೂ ಅವರ ನಡಿಗೆ ಹೀಗೆಯೇ ಇತ್ತು.

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜನಪ್ರಿಯತೆ ಬಗ್ಗೆ ಹೇಳಬೇಕಿಲ್ಲ. ಕೆಲವು ಸಲ ಅವರ ನಡಿಗೆ ಜನಪ್ರಿಯತೆಯ ದ್ಯೋತಕ ಅನಿಸುತ್ತದೆ. ನಡಿಗೆಯಲ್ಲಿ ರಾಜಗಾಂಭಿರ್ಯ, ಗತ್ತು, ಗೈರತ್ತು! ತಾನು ನಾಡಿನ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅವರು ಹಾಗೆ ನಡೆಯುತ್ತಾರೆ, ಗತ್ತು-ಠೀವಿ ಪ್ರದರ್ಶಿಸುತ್ತಾರೆ ಅಂದ್ಕೋಬೇಡಿ. ವಿರೋಧ ಪಕ್ಷದ ನಾಯಕ (Leader of Opposition) ಆಥವಾ ಕೇವಲ ಶಾಸಕನಾಗಿದ್ದಾಗಲೂ ಅವರ ನಡಿಗೆ ಹೀಗೆಯೇ ಇತ್ತು. ಜಿಲ್ಲೆಯ ಮಧುಗಿರಿಯಲ್ಲಿ ಇಂದು ಆಯೋಜನೆಗೊಂಡ ಕ್ಷೀರ ಭಾಗ್ಯ ದಶಮಾನೋತ್ಸವ (Ksheera Bhagya 10th year celebration) ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿಯಾಗಿದ್ದರು. ಅವರು ವೇದಿಕೆ ಬಳಿ ನಡೆದು ಬರುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರ ನಡಿಗೆ ಶೈಲಿಯನ್ನು ಗಮನಿಸಿ. ನಾವು ಚರ್ಚಿಸುತ್ತಿರೋದು ಇದೇ ಗತ್ತಿನ ಬಗ್ಗೆ. ಅವರನ್ನು ಕಂಡೊಡನೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರಿಂದ ಚಪ್ಪಾಳೆ, ಶಿಳ್ಳೆ ಮತ್ತು ಕೇಕೆ! ಅವರೊಂದಿಗೆ ಗೃಹ ಸಚಿವ ಜಿ ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ, ಈ ಭಾಗದ ಹಿರಿಯ ಕಾಂಗ್ರೆಸ್ ನಾಯಕ ಟಿಬಿ ಜಯಚಂದ್ರ ಮೊದಲಾದವರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ