ಕಾಡುಗೊಲ್ಲ ಸಮಾಜವನ್ನು ಎಸ್​ಟಿ ಪಟ್ಟಿಗೆ ಸೇರಿಸುವಂತೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಒತ್ತಾಯ

ಕಾಡುಗೊಲ್ಲ ಸಮಾಜವನ್ನು ಎಸ್​ಟಿ ಪಟ್ಟಿಗೆ ಸೇರಿಸುವಂತೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಒತ್ತಾಯ

TV9 Web
| Updated By: ವಿವೇಕ ಬಿರಾದಾರ

Updated on: Dec 12, 2022 | 10:08 PM

ಕಾಡುಗೊಲ್ಲ ಸಮಾಜವನ್ನು ಎಸ್​ಟಿ ಪಟ್ಟಿಗೆ ಸೇರಿಸುವಂತೆ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಒತ್ತಾಯಿಸಿದ್ದಾರೆ.

ನವದೆಹಲಿ: ಕಾಡುಗೊಲ್ಲ ಸಮಾಜವನ್ನು ಎಸ್​ಟಿ ಪಟ್ಟಿಗೆ ಸೇರಿಸುವಂತೆ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ (Poornima Srinivas) ಒತ್ತಾಯಿಸಿದ್ದಾರೆ. 2008ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ (BS Yadiyurappa) ಕಮಿಟಿ ರಚನೆ ಮಾಡಿದ್ದರು. ಎಸ್​ಟಿ ಮೀಸಲಾತಿ ನೀಡಲು ಕುಲಶಾಸ್ತ್ರ ಅಧ್ಯಯನ ಮಾಡಿಸಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲೂ ಇದನ್ನು ಕ್ಯಾಬಿನೆಟ್​ನಲ್ಲಿ ಇಡಲಾಗಿತ್ತು. ಮತ್ತು ಕಾಡುಗೊಲ್ಲ ಸಮುದಾಯಕ್ಕೆ ಎಸ್​ಟಿ ಮೀಸಲಾತಿ ಅಗತ್ಯವಿದೆ ಎಂದು ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು. ಕೆಲವು ಸಣ್ಣ ಗೊಂದಲಗಳಿಗೆ ಈಗಾಗಲೇ ಕೇಂದ್ರಕ್ಕೆ ಉತ್ತರಿಸಲಾಗಿದೆ. ಈಗಾಗಲೇ ತಳವಾರ, ಬೆಟ್ಟ ಕುರುಬ ಸಮುದಾಯವನ್ನು ಪರಿಗಣಿಸಿದೆ. ಅದೇ ಮಾದರಿಯಲ್ಲಿ ಕಾಡುಗೊಲ್ಲರಿಗೆ ಮೀಸಲಾತಿ ನೀಡಿ ಎಂದು ಆಗ್ರಹಿಸಿದ್ದಾರೆ.