Kamal Haasan: 'ಕಾಂತಾರ' ಚಿತ್ರ ನೋಡಿ ಕನ್ನಡ ಇಂಡಸ್ಟ್ರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟ ಕಮಲ್​ ಹಾಸನ್    

Kamal Haasan: ‘ಕಾಂತಾರ’ ಚಿತ್ರ ನೋಡಿ ಕನ್ನಡ ಇಂಡಸ್ಟ್ರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟ ಕಮಲ್​ ಹಾಸನ್    

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 12, 2022 | 10:48 PM

ನಟ ಕಮಲ್​ ಹಾಸನ್​ ಅವರು 'ಕಾಂತಾರ' ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಯಾಂಡಲ್​ವುಡ್​ನ ಪಾಲಿಗೆ ‘ಕಾಂತಾರ’ (Kantara) ಚಿತ್ರ ಬಹಳ ದೊಡ್ಡ ಸಾಧನೆ. ಚಿತ್ರಮಂದಿರಗಳಲ್ಲಿ 50ಕ್ಕೂ ಹೆಚ್ಚು ದಿನ ಪೂರೈಸಿ ಓಟಿಟಿಯಲ್ಲಿಯೂ ತನ್ನ ನಾಗಾಲೋಟವನ್ನು ಮುಂದುವರೆಸಿದೆ. ಚಿತ್ರವನ್ನು ವೀಕ್ಷಿಸಿದ ಹಲವು ನಟ, ನಟಿಯರು ತಮ್ಮದೆ ಶೈಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೂಪರ್​ ಸ್ಟಾರ್ ರಜನಿಕಾಂತ್​ ಅವರು ನಟ ರಿಷಬ್​ ಶೆಟ್ಟಿಯವರನ್ನು ಮನೆಗೆ ಕರೆಸಿಕೊಂಡು ಸತ್ಕರಿಸಿದ್ದರು. ಇದೀಗ ಅದೇ ರೀತಿಯಾಗಿ ದಕ್ಷಿಣ ಭಾರತದ ಮತ್ತೊಬ್ಬ ನಟ ಕಮಲ್​ ಹಾಸನ್ (Kamal Haasan)​ ಅವರು ‘ಕಾಂತಾರ’ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಾನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸೇರಿರುವ ನಟ‌. ಹೀಗಾಗಿ ಇಂಥ ಸಿನಿಮಾಗಳ ಬಗ್ಗೆ ಹೇಳುವುದಕ್ಕೆ ನನಗೂ ಹೆಮ್ಮೆ ಇದೆ. ಕನ್ನಡ ಸಿನಿಮಾ ಇಂಡಸ್ಟ್ರಿ ವಿಭಿನ್ನ ಪ್ರಯತ್ನಕ್ಕೆ ಮುಂದಾಗುತ್ತಿರುವುದು ಹೆಮ್ಮೆ ವಿಚಾರ’ವೆಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.