ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಪ್ರದರ್ಶನದಲ್ಲಿ ಟೇಬಲ್ ಮೇಲೇ ಸಿಡಿದ ರಾಕೆಟ್; 11 ಜನರಿಗೆ ಗಾಯ

ಜಾರ್ಖಂಡ್​​ನಲ್ಲಿ ವಿದ್ಯಾರ್ಥಿಗಳ ವಿಜ್ಞಾನ ಪ್ರದರ್ಶನದಲ್ಲಿ ಟೇಬಲ್ ಮೇಲೇ ಸಿಡಿದ ರಾಕೆಟ್; 11 ಜನರಿಗೆ ಗಾಯ

TV9 Web
| Updated By: ಸುಷ್ಮಾ ಚಕ್ರೆ

Updated on: Dec 13, 2022 | 9:17 AM

ವಿಜ್ಞಾನ ಪ್ರದರ್ಶನದ ವೇಳೆ ಟೇಬಲ್ ಮೇಲೇ ರಾಕೆಟ್ ಸ್ಫೋಟಗೊಂಡಿದೆ. ಇಲ್ಲಿನ ಘಟಶಿಲಾ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಇದನ್ನು ಪ್ರದರ್ಶಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಜಾರ್ಖಂಡ್‌ನ (Jharkhand) ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಘಾಟ್‌ಶಿಲಾ ಕಾಲೇಜಿನಲ್ಲಿ ಸೋಮವಾರ ನಡೆದ ವಿಜ್ಞಾನ ಪ್ರದರ್ಶನದ (science exhibition) ವೇಳೆ ವಿಜ್ಞಾನದ ಪ್ರಾಜೆಕ್ಟ್ ಸ್ಫೋಟಗೊಂಡು ಕನಿಷ್ಠ 11 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ (Video Viral) ಆಗಿದ್ದು, ವಿಜ್ಞಾನ ಪ್ರದರ್ಶನದ ವೇಳೆ ಟೇಬಲ್ ಮೇಲೇ ರಾಕೆಟ್ ಸ್ಫೋಟಗೊಂಡಿದೆ. ಇಲ್ಲಿನ ಘಟಶಿಲಾ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಇದನ್ನು ಪ್ರದರ್ಶಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಗಾಯಗೊಂಡ ಯಾವುದೇ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿಲ್ಲ.