BBK9: ಸಡನ್​ ಆಗಿ ಕುಸಿಯಿತು ಬಿಗ್​ ಬಾಸ್​ ಸ್ಪರ್ಧಿಗಳ ಅಂಕ; ಪಾಯಿಂಟ್ಸ್​ ಉಳಿಸಿಕೊಳ್ಳಲು ಸಿಕ್ಕಾಪಟ್ಟೆ ಕಸರತ್ತು

BBK9: ಸಡನ್​ ಆಗಿ ಕುಸಿಯಿತು ಬಿಗ್​ ಬಾಸ್​ ಸ್ಪರ್ಧಿಗಳ ಅಂಕ; ಪಾಯಿಂಟ್ಸ್​ ಉಳಿಸಿಕೊಳ್ಳಲು ಸಿಕ್ಕಾಪಟ್ಟೆ ಕಸರತ್ತು

TV9 Web
| Updated By: Digi Tech Desk

Updated on:Dec 13, 2022 | 1:59 PM

Bigg Boss Kannada Season 9: ‘ಬಿಗ್​ ಬಾಸ್’​ ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಉಳಿದುಕೊಂಡಿವೆ. ಹಾಗಾಗಿ ಬಹಳಷ್ಟು ಎಚ್ಚರಿಕೆಯಿಂದ ಆಟ ಆಡಬೇಕಾದ ಪರಿಸ್ಥಿತಿ ಇದೆ.

‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಪ್ರತಿ ವಾರವೂ ಒಂದೊಂದು ಬಗೆಯ ಟಾಸ್ಕ್​ ನೀಡಲಾಗುತ್ತಿದೆ. ಈವರೆಗೂ ಗಳಿಸಿಕೊಂಡ ಅಂಕಗಳನ್ನು ಉಳಿಸಿಕೊಳ್ಳಲು ಈ ವಾರ ಹೊಸ ಟಾಸ್ಕ್​ ನೀಡಲಾಗಿದೆ. ಅದಕ್ಕಾಗಿ ಸ್ಪರ್ಧಿಗಳು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಬಿಗ್ ಬಾಸ್​ (Bigg Boss Kannada) ಮನೆಯ ನಿಯಮ ಮುರಿದರೆ ಸ್ಪರ್ಧಿಗಳು ಅದಕ್ಕೂ ಅಂಕ ಕಳೆದುಕೊಳ್ಳುತ್ತಾರೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಇರುವುದರಿಂದ ಬಹಳಷ್ಟು ಎಚ್ಚರಿಕೆಯಿಂದ ಆಟ ಆಡಬೇಕಾದ ಪರಿಸ್ಥಿತಿ ಇದೆ. ಕಲರ್ಸ್​ ಕನ್ನಡ (Colors Kannada) ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ಅದರಲ್ಲಿ ಈ ವಾರದ ಟಾಸ್ಕ್​ಗಳ ಝಲಕ್​ ತೋರಿಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published on: Dec 13, 2022 01:47 PM