NDA vs INDIA: ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು?

| Updated By: ಗಣಪತಿ ಶರ್ಮ

Updated on: Jul 19, 2023 | 9:51 PM

ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು? ಏನೇನು ತಂತ್ರ ಪ್ರತಿತಂತ್ರ ಹಾಕಿಕೊಂಡಿವೆ ಎಂಬುದರ ಇಣುಕುನೋಟ ಇಲ್ಲಿದೆ.

NDA vs INDIA: ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು?
ಮಲ್ಲಿಕಾರ್ಜುನ ಖರ್ಗೆ ಮತ್ತು ನರೇಂದ್ರ ಮೋದಿ
Image Credit source: PTI
Follow us on

ಬೆಂಗಳೂರು, ಜುಲೈ 19: ಲೋಕಸಭೆ ಚುನಾವಣೆ (Lok Sabha Election 2024) ಸಮೀಪಿಸುತ್ತಿದ್ದಂತೆಯೇ ಆಡಳಿತಾರೂಢ ಎನ್​ಡಿಎ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟ ಭರ್ಜರಿ ಸಿದ್ಧತೆ ಆರಂಭಿಸಿವೆ. ಕಾಂಗ್ರೆಸ್, ಟಿಎಂಸಿ ಸೇರಿದಂತೆ 26 ಪಕ್ಷಗಳ ಮಹಾ ಮೈತ್ರಿಕೂಟ ಬೆಂಗಳೂರಿನಲ್ಲಿ ಎರಡನೇ ಸಭೆ ನಡೆಸಿದ್ದು, ತಮ್ಮ ಮೈತ್ರಿಕೂಟಕ್ಕೆ ‘ಇಂಡಿಯನ್​ ನ್ಯಾಷನಲ್ ಡೆಮಾಕ್ರಟಿಕ್​​ ಇನ್​ಕ್ಲೂಸಿವ್​​​​ ಅಲೈನ್ಸ್ (INDIA / Indian National Developmental Inclusive Alliance) ಎಂದು ನಾಮಕರಣ ಮಾಡಿದೆ. ಈ ಮಧ್ಯೆ ಎನ್​​ಡಿಎ (NDA) ಮಿತ್ರಪಕ್ಷಗಳು ದೆಹಲಿಯಲ್ಲಿ ಸಭೆ ಸೇರಿ ಚುನಾವಣಾ ತಾಲೀಮಿಗೆ ರಣಕಹಳೆ ಮೊಳಗಿಸಿವೆ.

ಲೋಕಸಭೆ ಚುನಾವಣೆ ಜಯಿಸಲು ಉಭಯ ಮೈತ್ರಿಕೂಟಗಳ ತಂತ್ರಗಾರಿಕೆ ಏನು? ಏನೇನು ತಂತ್ರ ಪ್ರತಿತಂತ್ರ ಹಾಕಿಕೊಂಡಿವೆ ಎಂಬುದರ ಇಣುಕುನೋಟ ಇಲ್ಲಿದೆ.

INDIA ಮೈತ್ರಿಕೂಟದ ತಂತ್ರಗಾರಿಕೆ ಏನು?

  • ಎನ್​​ಡಿಎ ರಾಷ್ಟ್ರೀಯವಾದಿ ರಾಜಕಾರಣಕ್ಕೆ ರಾಷ್ಟ್ರೀಯವಾದದಿಂದಲೇ ತಿರುಗೇಟು ನೀಡಲು ಯೋಜನೆ
  • ಇಂಡಿಯಾ ಎಂಬ ಹೆಸರಿನ ಮೂಲಕ ಭಾವನಾತ್ಮಕ, ರಾಷ್ಟ್ರೀಯವಾದಿ ಸ್ಪರ್ಶ ನೀಡಿ ಮೊದಲ ತಂತ್ರ
  • ಭಾರತ್ ಜೋಡೋ ಮಾದರಿಯಲ್ಲೇ ಹೋರಾಟಗಳನ್ನು ರೂಪಿಸಲು ಚಿಂತನೆ
  • ಬಿಜೆಪಿ ವಿರುದ್ದ ಎಲ್ಲ ರಾಜ್ಯಗಳಲ್ಲೂ ಕಾಮನ್ ಮಿನಿಮಮ್ ಪ್ರೋಗ್ರಾಂ ಅಡಿಯಲ್ಲಿ ಹೋರಾಟ
  • ಮಣಿಪುರ ಗಲಭೆ ಸೇರಿದಂತೆ ಹಲವು ಅಂಶಗಳನ್ನು ಇಟ್ಟುಕೊಂಡು ಹೋರಾಟ ನಡೆಸಲು ಪ್ಲ್ಯಾನ್
  • ಆರ್ಥಿಕ ಹಿಂಜರಿತ, ಬೆಲೆ ಏರಿಕೆ ಉಂಟಾಗಲು ಪ್ರಧಾನಿ ಮೋದಿಯೇ ನೇರ ಕಾರಣ ಎಂದು ಬಿಂಬಿಸುವ ಪ್ರಯತ್ನ
  • ಸಾಮಾನ್ಯ ಜನರ ಮನಸ್ಸಿನಲ್ಲಿ ಇಂಡಿಯಾ ಒಕ್ಕೂಟದ ಬಗ್ಗೆ ಭರವಸೆ ಮೂಡಿಸುವುದು
  • ಲೋಕಸಭೆ ಸೀಟು ಹಂಚಿಕೆ ಸಂಬಂಧ ಪ್ರತ್ಯೇಕ ಸಮಿತಿ ರಚನೆ ಮಾಡಿಕೊಂಡು ತೀರ್ಮಾನ
  • ಯಾವ ಯಾವ ರಾಜ್ಯಗಳಲ್ಲಿ ಸೀಟು ಹಂಚಿಕೆಗೆ ಕೈ ಜೋಡಿಸಬೇಕು ಎಂದು ತೀರ್ಮಾನಿಸಲಿರುವ ಸಮಿತಿ
  • ಆಯಾಯ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಸೀಟು ಹಂಚಿಕೆ ಪ್ರಕ್ರಿಯೆ
  • ಇಂಡಿಯಾ ಒಕ್ಕೂಟ ಈಗ ಸರಿಸುಮಾರು 150 ಲೋಕಸಭೆ ಸದಸ್ಯರನ್ನು ಹೊಂದಿದೆ
  • ಈ ಸಂಖ್ಯೆಯನ್ನು ಕನಿಷ್ಟ 260 ಕ್ಕೆ ಹೆಚ್ಚಿಸುವುದು
  • ಚುನಾವಣಾ ಸುಧಾರಣೆಗಳ ಹೆಸರಲ್ಲಿ ಇವಿಎಂ ಮಷಿನ್​​ಗಳ ದುರ್ಬಳಕೆ ವಿರುದ್ದವೂ ಹೋರಾಟ ರೂಪಿಸುವುದು
  • ಎನ್​ಡಿಎ ಮೈತ್ರಿಕೂಟದಿಂದ ಬೇಸರಗೊಂಡಿರುವ ಬೇರೆ ಬೇರೆ ಪಕ್ಷಗಳನ್ನು ತಮ್ಮತ್ತ ಸೆಳೆಯುವುದು

2024ರ ಚುನಾವಣೆ ಗೆಲ್ಲಲು ಎನ್​​ಡಿಎ ಮಾಸ್ಟರ್ ಪ್ಲಾನ್ ಏನು?

  • 2024 ರಲ್ಲಿಯೂ ನರೇಂದ್ರ ಮೋದಿಯವರ ನೇತೃತ್ವದಲ್ಲೇ ಚುನಾವಣೆ ಎದುರಿಸುವುದು
  • ಎನ್​ಡಿಎಗೆ ಶೇ 50 ಓಟ್ ಶೇರ್ ಬರುವಂತೆ ಪ್ರಯತ್ನ ಪಡುವುದು
  • ಪ್ರಧಾನಿ ಮೋದಿ‌ಯನ್ನು ಸೋಲಿಸುವುದಕ್ಕೆ ವಿರೋಧ ಪಕ್ಷಗಳು ಒಗ್ಗಟಾಗಿವೆ ಎಂದು ಬಿಂಬಿಸುವುದು
  • ರಾಷ್ಟ್ರೀಯವಾದಿ ರಾಜಕಾರಣವನ್ನು ಮುನ್ನೆಲೆಗೆ ತರುವುದು
  • ವಿರೋಧ ಪಕ್ಷಗಳ ಒಕ್ಕೂಟವನ್ನು ‘ಕುಟುಂಬದ ಪರವಾಗಿ ಒಕ್ಕೂಟ’ ಎಂದು ಬಿಂಬಿಸುವುದು
  • ಪಕ್ಷ ದುರ್ಬಲ‌ ಇರುವ ಕಡೆ ಸಣ್ಣ ಸಣ್ಣ ಪಕ್ಷಗಳಿಗೂ ಮಹತ್ವ ನೀಡಿ, ಟಿಕೆಟ್ ನೀಡುವುದು
  • ಹೀಗಾಗಿ ಸಣ್ಣ, ಸಣ್ಣ ಪಕ್ಷಗಳು ಸೇರಿ‌ಸಿಕೊಂಡು 38 ಪಕ್ಷಗಳ ಒಕ್ಕೂಟ
  • ನಿರ್ದಿಷ್ಟ ಜಾತಿಯ ಮೇಲೆ‌ ಪ್ರಭಾವ ಇರುವ ಪಕ್ಷಗಳನ್ನು ಎನ್​​ಡಿಎ ಫೋಕಸ್ ಮಾಡಿದೆ
  • ಉತ್ತರಪ್ರದೇಶ, ಬಿಹಾರದಲ್ಲಿ ನಿರ್ದಿಷ್ಟ ಜಾತಿಗಳ ನಾಯಕರನ್ನು ಸೇರಿಸಿಕೊಂಡಿದೆ
  • ಸಣ್ಣ ಜಾತಿಗಳ ಪಕ್ಷವಾಗಿದ್ದರೂ ಮನ್ನಣೆ ನೀಡಿದೆ

NDA ಅಥವಾ INDIA ಮೈತ್ರಿಕೂಟಕ್ಕೆ‌ ಸೇರದ ಪಕ್ಷಗಳು ಯಾವುವು?

  • ಒಡಿಶಾದ ಬಿಜು ಜನತಾ ದಳ
  • ಆಂಧ್ರದ ವೈಎಸ್‌ಆರ್ ಕಾಂಗ್ರೆಸ್
  • ಕರ್ನಾಟಕದ ಜೆಡಿಎಸ್
  • ಉತ್ತರಪ್ರದೇಶದಲ್ಲಿ ಬಿಎಸ್‌ಪಿ
  • ಪಂಜಾಬ್‌ನ ಅಕಾಲಿದಳ
  • ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷ
  • ತೆಲಂಗಾಣದ ಬಿಆರ್​​​ಎಸ್

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:15 pm, Wed, 19 July 23