ಮೋದಿಗೆ ಭಯಪಟ್ಟು ಗುಹೆ ಸೇರಿದ ಹುಲಿಗಳು: ಸಿದ್ದರಾಮಯ್ಯ ಏಟಿಗೆ ಪ್ರಲ್ಹಾದ್ ಜೋಶಿ ತಿರುಗೇಟು

|

Updated on: Apr 09, 2023 | 10:21 PM

ಸುಮಾರು 2 ಗಂಟೆ ಕಾಲ 20 ಕಿ.ಮೀ. ಸಫಾರಿ ಮಾಡಿದ ಪ್ರಧಾನಿ ನರೇಂದ್ರ ಮೋದಿಗೆ ಒಂದು ಹುಲಿಯೂ ಕಾಣಸಿಗಲಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನು ಟೀಕಿಸಿದ್ದ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ.

ಮೋದಿಗೆ ಭಯಪಟ್ಟು ಗುಹೆ ಸೇರಿದ ಹುಲಿಗಳು: ಸಿದ್ದರಾಮಯ್ಯ ಏಟಿಗೆ ಪ್ರಲ್ಹಾದ್ ಜೋಶಿ ತಿರುಗೇಟು
ಪ್ರಲ್ಹಾದ್ ಜೋಶಿ ಮತ್ತು ಸಿದ್ದರಾಮಯ್ಯ
Follow us on

ಬೆಂಗಳೂರು: ಬಂಡೀಪುರದಲ್ಲಿ ಸುಮಾರು 2 ಗಂಟೆ ಕಾಲ 20 ಕಿ.ಮೀ. ಸಫಾರಿ (Bandipur Safari) ಮಾಡಿದ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಒಂದು ಹುಲಿಯೂ ಕಾಣಸಿಗಲಿಲ್ಲ ಎಂದು ಹೇಳಲಾಗುತ್ತಿದೆ. ಇದನ್ನು ಟೀಕಿಸಿದ್ದ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. “ಇದು ಭ್ರಷ್ಟಾಚಾರಿಗಳು, ರಾಷ್ಟ್ರ ವಿರೋಧಿಗಳು ಗುಹೆಯೊಳಗೆ ಅಡಗಿ ಕುಳಿತು ಕೊಳ್ಳುವ ಸಮಯ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾಡು – ನಾಡಿನ ಜನ, ಕಾಡು-ಕಾಡಿನ ವನ್ಯಜೀವಿ ಎಲ್ಲರೂ ಸುರಕ್ಷಿತವಾಗಿದ್ದಾರೆ” ಎಂದು ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ರಾಷ್ಟ್ರೀಯ ಅಭಯಾರಣ್ಯಕ್ಕೆ ಭೇಟಿ ನೀಡಿ ಕಾಡಿನೊಳಗೆ ಸಫಾರಿ ಕೈಗೊಂಡು ಗಮನ ಸೆಳೆದಿದ್ದಾರೆ. ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್ಸ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿ ಬಂಡೀಪುರ ಅರಣ್ಯಕ್ಕೆ ಎಂಟ್ರಿ ಕೊಟ್ಟ ಮೋದಿ, ಸುಮಾರು 2 ಗಂಟೆ ಕಾಲ 20 ಕಿ.ಮೀ. ಸಫಾರಿ ಮಾಡಿದರು. ಈ ವೇಳೆ ಕೆಲ ಪ್ರಾಣಿ, ಪಕ್ಷಗಳನ್ನು ನೋಡುವುದರ ಜೊತೆಗೆ ಪ್ರಕೃತಿ ಸೌದರ್ಯವನ್ನು ಸವಿದರು.

ಇದನ್ನೂ ಓದಿ: ದುರ್ಬಿನ್​ನಿಂದ ಹುಲಿ ಹುಡುಕಿದ ಮೋದಿ, ಸಫಾರಿ ವೇಳೆ ಪ್ರಧಾನಿಗೆ ಕಂಡ ಪ್ರಾಣಿಗಳಾವುವು? ಇಲ್ಲಿವೆ ಫೋಟೋಸ್

ಇವುಗಳನ್ನು ನೋಡಿ ಖುಷಿಪಟ್ಟ ಪ್ರಧಾನಿ ಮೋದಿಗೆ ಹುಲಿ ಪ್ರತ್ಯಕ್ಷವಾಗಲಿಲೇ ಇಲ್ಲ. ದುರ್ಬಿನ್ ಹಾಗೂ ಕ್ಯಾಮೆರಾ ಹಿಡಿದು ಸುತ್ತಾಡಿದರೂ ಮೋದಿ ಕಣ್ಣಿಗೆ ಒಂದೂ ಹುಲಿ ಕಾಣಿಸಿಲ್ಲ ಎನ್ನಲಾಗುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಅವರು, “ಹಿಡಿದು ಮಾರಿಬಿಡುತ್ತಾರೆ ಅನ್ನುವ ಭಯಕ್ಕೆ ಯಾವ ಗುಹೆಯೊಳಗೆ ಅಡಗಿ ಕೂತಿದೆಯೋ.. ಅಯ್ಯೋ ಪಾಪ….!! ಇನ್ನು ಕೆಲವೇ ದಿನಗಳಲ್ಲಿ ಬಂಡಿಪುರ ಉಳಿಸಿ (#SaveBandipur) ಎಂಬ ಅಭಿಯಾನವನ್ನು ಕನ್ನಡಿಗರು ಶುರು ಮಾಡುವಂತೆ ಆಗದಿರಲಿ.. ಅದೇ ನೀವು ಕರುನಾಡಿಗೆ ಮಾಡುವ ದೊಡ್ಡ ಉಪಕಾರ ನರೇಂದ್ರ ಮೋದಿಜೀ” ಎಂದು ಹೇಳಿದ್ದರು.

ನಮ್ಮ ವಿಜಯಾ ಬ್ಯಾಂಕನ್ನು ನುಂಗಿದ ಬರೋಡಾ ಬ್ಯಾಂಕ್ ಗುಜರಾತ್‌ನದ್ದು, ಬಂದರು, ಏರ್‌ಪೋರ್ಟ್ ನುಂಗಿದ ಅದಾನಿ ಗುಜರಾತ್‌ನವರು, ಈಗ ಕೆಎಂಎಫ್ ನುಂಗಲು ಹೊರಟಿರುವ ಅಮುಲ್ ಕೂಡ ಗುಜರಾತ್‌ನದ್ದು. ಗುಜರಾತಿಗಳಿಗೆ ಕನ್ನಡಿಗರು ಶತ್ರುಗಳಾ..? ಎಂದು ಸಿದ್ದರಾಮಯ್ಯ ಅವರು ಟ್ವೀಟ್‌ ಮೂಲಕ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:21 pm, Sun, 9 April 23