‘ಬೊಮ್ಮನ್-ಬೆಳ್ಳಿ ಮತ್ತು ರಾಘು ಜೊತೆ ಆಹಾ ಎಂಥ ಭೇಟಿ’; ಖುಷಿ ಹಂಚಿಕೊಂಡ ನರೇಂದ್ರ ಮೋದಿ
Bomman and Bellie: ಬೆಳ್ಳಿ ಮತ್ತು ಬೊಮ್ಮನ್ ದಂಪತಿ ಸಾಕಿದ ರಾಘು ಎಂಬ ಆನೆಯನ್ನು ನರೇಂದ್ರ ಮೋದಿ ಅವರು ಮುಟ್ಟಿ ಮುದ್ದಾಡಿದ್ದಾರೆ. ಆ ಕ್ಷಣದ ಫೋಟೋಗಳು ಇಲ್ಲಿವೆ..

ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಜೊತೆ ನರೇಂದ್ರ ಮೋದಿ
- ಪ್ರಧಾನಿ ನರೇಂದ್ರ ಮೋದಿ ಅವರು ತೆಪ್ಪಕಾಡು ಆನೆ ಶಿಬಿರಕ್ಕೆ ಇಂದು (ಏಪ್ರಿಲ್ 9) ಭೇಟಿ ನೀಡಿದ್ದಾರೆ. ಈ ವೇಳೆ ಮಾವುತರಾದ ಬೊಮ್ಮನ್ ಮತ್ತು ಬೆಳ್ಳಿ ದಂಪತಿಯ ಜೊತೆ ಕೆಲವು ಸಮಯ ಕಳೆದಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.
- ಅನಾಥ ಆನೆಗಳನ್ನು ಸಾಕುವ ಕಾರ್ಯದಲ್ಲಿ ತೊಡಗಿಕೊಂಡಿರುವ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಕ್ಕ ಬಳಿಕ ಅವರಿಗೆ ಇಷ್ಟೊಂದು ಖ್ಯಾತಿ ಬಂದಿದೆ.
- ಬೆಳ್ಳಿ ಮತ್ತು ಬೊಮ್ಮನ್ ಅವರು ಸಾಕಿದ ರಾಘು ಎಂಬ ಆನೆಯನ್ನು ಮೋದಿ ನೋಡಿದ್ದಾರೆ. ತೆಪ್ಪಕಾಡು ಆನೆ ಶಿಬಿರದಲ್ಲಿನ ಇತರ ಆನೆಗಳಿಗೂ ಅವರು ಆಹಾರ ತಿನಿಸಿದ್ದಾರೆ.
- ‘ಬೊಮ್ಮನ್-ಬೆಳ್ಳಿ ಮತ್ತು ರಾಘು ಜೊತೆ ಆಹಾ ಎಂಥ ಭೇಟಿ’ ಎಂದು ನರೇಂದ್ರ ಮೋದಿ ಸಂತಸ ಹಂಚಿಕೊಂಡಿದ್ದಾರೆ. ರಾಘು ಆನೆಯನ್ನು ಅವರು ಮುಟ್ಟಿ ಮುದ್ದಾಡಿದ್ದಾರೆ. ಈ ಸಂದರ್ಭದಲ್ಲಿ ಮಾವುತರ ಜೊತೆ ಅವರು ಮಾತುಕಥೆ ನಡೆಸಿದ್ದಾರೆ.
- ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿಯ ಬದುಕನ್ನು ತೋರಿಸಲಾಗಿದೆ. ಈ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಸಿಕ್ಕ ನಂತರ ಅನೇಕರು ಈ ದಂಪತಿಯನ್ನು ಭೇಟಿ ಮಾಡಿದ್ದಾರೆ. ಈ ಮೊದಲ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಭೇಟಿ ಆಗಿದ್ದರು.
Published On - 2:12 pm, Sun, 9 April 23