ಶ್ರೀದೇವಿ ಮಗಳು ಜಾನ್ವಿ ಕಪೂರ್ ಅವರು ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಆಗಾಗ ಹೊಸ ಫೋಟೋಶೂಟ್ ಮಾಡಿಸುವ ಅವರು ಪಡ್ಡೆಗಳ ಕಣ್ಣು ಕುಕ್ಕುತ್ತಾರೆ. ಅವರ ಒಂದಷ್ಟು ಫೋಟೋಗಳು ವೈರಲ್ ಆಗಿವೆ.
1 / 5
ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ನಟಿ ಜಾನ್ವಿ ಕಪೂರ್ ಅವರು ಹಾಜರಿ ಹಾಕಿದ್ದಾರೆ. ಮಿರಿ ಮಿರಿ ಮಿಂಚುವ ಕಾಸ್ಟ್ಯೂಮ್ ಧರಿಸಿ ಅವರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಅವರ ಈ ಗೆಟಪ್ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
2 / 5
ಜಾನ್ವಿ ಕಪೂರ್ ಅವರು ಈಗ ಬಾಲಿವುಡ್ಗೆ ಮಾತ್ರ ಸೀಮಿತವಾಗಿಲ್ಲ. ‘ಎನ್ಟಿಆರ್ 30’ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗುವ ಮೂಲಕ ಅವರು ದಕ್ಷಿಣಕ್ಕೂ ಕಾಲಿಟ್ಟಿದ್ದಾರೆ. ಆ ಮೂಲಕ ಅವರ ಜನಪ್ರಿಯತೆ ಹೆಚ್ಚಾಗಿದೆ.
3 / 5
ಸೋಶಿಯಲ್ ಮೀಡಿಯಾದಲ್ಲಿ ಜಾನ್ವಿ ಕಪೂರ್ ಅವರು ಸಖತ್ ಸಕ್ರಿಯರಾಗಿದ್ದಾರೆ. ಆಗಾಗ ಅವರು ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 2 ಕೋಟಿಗೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ.
4 / 5
ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವಲ್ಲಿ ಜಾನ್ವಿ ಕಪೂರ್ ಅವರು ಎಂದಿಗೂ ಹಿಂದೇಟು ಹಾಕಿಲ್ಲ. ಪ್ರತಿ ಬಾರಿಯೂ ಅವರು ಆಕರ್ಷಕ ಉಡುಗೆ ಧರಿಸಿ ಫೋಟೋಶೂಟ್ ಮಾಡಿಸುತ್ತಾರೆ. ಆ ಮೂಲಕ ಲಕ್ಷಾಂತರ ಲೈಕ್ಸ್ ಪಡೆಯುತ್ತಾರೆ.