AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಬ್ಯಾಟರ್​ ಬದಲಿಗೆ ಬೌಲರ್: RCB ತಂಡದ ಮಾಸ್ಟರ್ ಪ್ಲ್ಯಾನ್

IPL 2023 RCB vs LSG: ಏಪ್ರಿಲ್ 10 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

TV9 Web
| Edited By: |

Updated on: Apr 09, 2023 | 7:23 PM

Share
IPL 2023: ಐಪಿಎಲ್​ನ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಬಗ್ಗು ಬಡಿದು ಶುಭಾರಂಭ ಮಾಡಿದ್ದ ಆರ್​ಸಿಬಿ (RCB) ತಂಡವು 2ನೇ ಪಂದ್ಯದಲ್ಲಿ ಕೆಕೆಆರ್ (KKR) ವಿರುದ್ಧ ಹೀನಾಯವಾಗಿ ಸೋಲನುಭವಿಸಿತ್ತು. ಈ ಸೋಲಿನ ಬೆನ್ನಲ್ಲೇ ಆರ್​ಸಿಬಿ ತಂಡದಲ್ಲೂ 2 ಮಹತ್ವದ ಬದಲಾವಣೆಗಳಾಗಿವೆ.

1 / 11
ತಂಡದಲ್ಲಿದ್ದ ಪ್ರಮುಖ ವೇಗಿ ರೀಸ್ ಟೋಪ್ಲಿ ಗಾಯಗೊಂಡು ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಆರ್​ಸಿಬಿ ಫ್ರಾಂಚೈಸಿ ಬದಲಿ ಆಟಗಾರನಾಗಿ ಸೌತ್ ಆಫ್ರಿಕಾ ವೇಗಿ ವೇಯ್ನ್ ಪಾರ್ನೆಲ್ ಅವರನ್ನು ಆಯ್ಕೆ ಮಾಡಿಕೊಂಡಿದೆ.

2 / 11
ಹಾಗೆಯೇ ಪಾದದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್​ ರಜತ್ ಪಾಟಿದಾರ್ ಕೂಡ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೆ ಇಲ್ಲಿ ಆರ್​ಸಿಬಿ ಮತ್ತೋರ್ವ ಬ್ಯಾಟರ್​ನನ್ನು ಆಯ್ಕೆ ಮಾಡುವ ಬದಲು ಬೌಲರ್​ನನ್ನು ಆಯ್ಕೆ ಮಾಡಿರುವುದು ವಿಶೇಷ.

3 / 11
ಅಂದರೆ ರಜತ್ ಪಾಟಿದಾರ್ ಬದಲಿಗೆ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿರುವುದು ಕರ್ನಾಟಕದ ವೇಗಿ ವೈಶಾಖ್ ವಿಜಯಕುಮಾರ್. ಆರ್​ಸಿಬಿ ಇಂತಹದೊಂದು ಮಹತ್ವದ ಬದಲಾವಣೆ ಮಾಡಿಕೊಳ್ಳಲು ಮುಖ್ಯ ಕಾರಣ ಪ್ರಸ್ತುತ ತಂಡದ ಬೌಲಿಂಗ್ ಲೈನಪ್.

4 / 11
ಆರ್​ಸಿಬಿ ತಂಡವು ಮೊದಲ ಪಂದ್ಯದಲ್ಲಿ ಜಯ ಸಾಧಿಸಿದರೂ ಬೌಲರ್​ಗಳಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಕ್ಕೆ ಸಾಕ್ಷಿಯೇ 48 ರನ್​ಗೆ 4 ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ಆ ಬಳಿಕ 7 ವಿಕೆಟ್ ನಷ್ಟಕ್ಕೆ 171 ರನ್​ ಪೇರಿಸಿರುವುದು.

5 / 11
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಇದೇ ಕಥೆ. 47 ರನ್​ಗೆ 3 ವಿಕೆಟ್​ ಕಬಳಿಸಿದ ಆರ್​ಸಿಬಿ ಬೌಲರ್​ಗಳು ಆ ಬಳಿಕ ದುಬಾರಿಯಾದರು. ಪರಿಣಾಮ ಕೆಕೆಆರ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್​ ಕಲೆಹಾಕಿತು. ಇದೀಗ ತಂಡದ ಬೌಲಿಂಗ್ ಲೈನಪ್​ ಆರ್​ಸಿಬಿಯ ಚಿಂತೆಯನ್ನು ಹೆಚ್ಚಿಸಿದೆ.

6 / 11
ಅದರಲ್ಲೂ ಆಕಾಶ್ ದೀಪ್ ಹಾಗೂ ಹರ್ಷಲ್ ಪಟೇಲ್ ಮೊನಚಿಲ್ಲದ ದಾಳಿ ಸಂಘಟಿಸುತ್ತಿದ್ದಾರೆ. ಇನ್ನು ಮೊದಲ ಪಂದ್ಯದಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್ 2ನೇ ಪಂದ್ಯದಲ್ಲಿ ದುಬಾರಿಯಾಗಿದ್ದರು. ಹೀಗಾಗಿಯೇ ಆರ್​ಸಿಬಿ ಫ್ರಾಂಚೈಸಿಯು ರಜತ್ ಪಾಟಿದಾರ್ ಬದಲಿಗೆ ಕರ್ನಾಟಕದ ವೇಗಿಯನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

7 / 11
ಇದಕ್ಕೆ ಮುಖ್ಯ ಕಾರಣ ಆರ್​ಸಿಬಿ ತಂಡವು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ನೂ 6 ಪಂದ್ಯಗಳನ್ನಾಡಬೇಕಿದೆ. ಇದೇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹರ್ಷಲ್ ಪಟೇಲ್ ಹಾಗೂ ಆಕಾಶ್ ದೀಪ್ ಹೆಚ್ಚಿನ ರನ್​ ಬಿಟ್ಟುಕೊಟ್ಟಿದ್ದರು. ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಕನ್ನಡಿಗನನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ.

8 / 11
ಅಂದರೆ ಇಲ್ಲಿ ವೈಶಾಖ್ ವಿಜಯಕುಮಾರ್​ ಅವರಿಗೆ ಚಿನ್ನಸ್ವಾಮಿ ಸ್ಟೇಡಿಯಂ ತವರು ಮೈದಾನ. ಇಲ್ಲೇ ಕ್ರಿಕೆಟ್ ಕೆರಿಯರ್ ಆರಂಭಿಸಿರುವ ಕನ್ನಡಿಗನಿಗೆ ಬೆಂಗಳೂರು ಪಿಚ್​ನ ಸ್ಥಿತಿಗತಿಗಳ ಬಗ್ಗೆ ಹೆಚ್ಚಿನ ಅರಿವಿದೆ. ಹೀಗಾಗಿ ರಜತ್ ಪಾಟಿದಾರ್ ಬದಲಿಗೆ ಬ್ಯಾಟರ್​ನನ್ನು ಆಯ್ಕೆ ಮಾಡುವ ಬದಲು ಆರ್​ಸಿಬಿ ಫ್ರಾಂಚೈಸಿ ಕರ್ನಾಟಕದ ಬೌಲರ್​ಗೆ ಮಣೆ ಹಾಕಿದೆ.

9 / 11
ಹೀಗಾಗಿ ಬೆಂಗಳೂರಿನಲ್ಲಿ ನಡೆಯಲಿರುವ ಮುಂಬರುವ ಪಂದ್ಯಗಳಲ್ಲಿ ಆಕಾಶ್​ ದೀಪ್ ಬದಲಿಗೆ ವೈಶಾಖ್ ವಿಜಯಕುಮಾರ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಮೂಲಕ ಚಿನ್ನಸ್ವಾಮಿ ಪಿಚ್​ನಲ್ಲಿ ಕನ್ನಡಿಗನ ವೇಗದ ಅಸ್ತ್ರವನ್ನು ಬಳಸಿ ಜಯ ಸಾಧಿಸಲು ಆರ್​ಸಿಬಿ ತಂಡ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಈ ಪ್ಲ್ಯಾನ್ ವರ್ಕ್ ಆಗಲಿದೆಯಾ ಎಂಬುದು ಮುಂದಿನ ಪಂದ್ಯಗಳಲ್ಲಿ ಗೊತ್ತಾಗಲಿದೆ.

10 / 11
RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವಿಜಯಕುಮಾರ್ ವೈಶಾಖ್.

11 / 11
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ

ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ

ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ

ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ

ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ

ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ

ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ

ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ

ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ