Karnataka Elections: ಕಲಘಟಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಛಬ್ಬಿ ಬಿಜೆಪಿ ಸೇರ್ಪಡೆ
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಕಾಂಗ್ರೆಸ್ ಮಾಜಿ ಎಂಎಲ್ಸಿ ನಾಗರಾಜ್ ಛಬ್ಬಿ ಅವರು ಇಂದು ದೆಹಲಿಯಲ್ಲಿ ಬಿಜೆಪಿ ಸೇರಿದರು. ಅವರು ಕಲಘಟಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಛಬ್ಬಿ ಸ್ಪರ್ಧೆ ಸಾಧ್ಯತೆ ಇದೆ.
ನವದೆಹಲಿ: ಕಲಘಟಗಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaih) ಅವರ ಆಪ್ತ ಸಂತೋಷ್ ಲಾಡ್‌ಗೆ (Santhosh Lad) ಕಾಂಗ್ರೆಸ್ ಟಿಕೆಟ್ ನೀಡಿರುವುದರಿಂದ ಅಸಮಾಧಾನಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಬಣದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಎಂಎಲ್ಸಿ ನಾಗರಾಜ್ ಛಬ್ಬಿ (Nagaraj Chabbi) ಅವರು ಇಂದು ದೆಹಲಿಯಲ್ಲಿ ಬಿಜೆಪಿ ಸೇರಿದರು. ದಕ್ಷಿಣ ಕನ್ನಡ ಜಿಲ್ಲಾ ಸಂಸದರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ದೆಹಲಿಯಲ್ಲಿರುವ ನಿವಾಸದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi), ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮತ್ತು ಸಚಿವ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ರಾಜ್ಯ ವಿಧಾನ ಸಭಾ ಚುನಾವಣೆಗೆ ಕೇವಲ ಒಂದು ತಿಂಗಳಷ್ಟೇ ಬಾಕಿ ಇದೆ. ಆದರೆ ಆರು ತಿಂಗಳ ಹಿಂದೆಯೇ ಧಾರವಾಡ ಜಿಲ್ಲೆಯ ಕರಘಟಗಿ ತಾಲೂಕಿನ ಕಾಂಗ್ರೆಸ್ ಟಿಕೆಟ್ ಗಾಗಿ ಸಂತೋಷ್ ಲಾಡ್ ಮತ್ತು ನಾಗರಾಜ ಛಬ್ಬಿ ನಡುವೆ ಭಾರೀ ಟಿಕೆಟ್ ಫೈಟ್ ಆರಂಭಗೊಂಡಿತ್ತು. ಇಬ್ಬರು ನಾಯಕರ ನಡುವೆ ತ್ಯಾಗ ವಾದ ಪ್ರತಿವಾದ ನಡೆಯುತ್ತಿತ್ತು. ಸಿದ್ದು-ಡಿಕೆಶಿ ಬಣ ಪಡಿದಾಟ ಕಾಂಗ್ರೆಸ್ ಪಕ್ಷಕ್ಕೆ ತಲೆ ನೋವಾಗಿ ಪರಿಣಮಿಸಿತ್ತು.
ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕರಾದ ಶ್ರೀ ನಾಗರಾಜ್ ಛಬ್ಬಿಯವರು, ಇಂದು ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಪಕ್ಷ ಸೇರ್ಪಡೆಯಾದರು. ಅವರಿಗೆ ಭಾರತೀಯ ಜನತಾ ಪಕ್ಷದ ಬಾವುಟವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಕೊಳ್ಳಲಾಯಿತು. 1/2 pic.twitter.com/T6jc9K7Kwj
— Basavaraj S Bommai (@BSBommai) April 9, 2023
ಇಡೀ ಕ್ಷೇತ್ರ ಮನೆಗಳಿಗೆ ಕುಕ್ಕರ್ ಹಂಚುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದ್ದ ನಾಗರಾಜ್ ಛಬ್ಬಿ, ಬಳಿಕ ಕ್ಷೇತ್ರ ತ್ಯಾಗ ಟ್ರಂಪ್ ಕಾರ್ಡ್ ಬಳಸಿ ಎಮೋಷನಲ್ ಅನುಸರಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಸಂತೋಷ ಲಾಡ್ ಸಹ ತಾವು ಮಾಡಿದ ಸಹಾಯವನ್ನು ನೆನಪಿಸಿದ್ದರು. ಮೆಲ್ನೋಟಕ್ಕೆ ಇದು ಛಬ್ಬಿ ಲಾಡ್ ನಡುವಿನ ಸ್ಪರ್ಧೆ ಅಂತಾ ಕಂಡು ಬಂದರೂ ಇಲ್ಲಿ ಡಿಕೆಶಿ ಬಣ ಮತ್ತು ಸಿದ್ದು ಬಣಗಳ ಬಡಿದಾಟ ಆರಂಬವಾಗಿತ್ತು.
ಇದನ್ನೂ ಓದಿ: ಕೈಗೆ ಬಿಜೆಪಿ ರಿವರ್ಸ್ ಆಪರೇಷನ್, ಹಲವು ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ಸೇರ್ಪಡೆ: ಇಲ್ಲಿದೆ ಪಟ್ಟಿ
ರಾಜ್ಯಾಧ್ಯಕ್ಷರಾದ ಶ್ರೀ @nalinkateel & ಮುಖ್ಯಮಂತ್ರಿಗಳಾದ ಶ್ರೀ @BSBommai ಅವರ ಸಮ್ಮುಖದಲ್ಲಿ ನವದೆಹಲಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರು, ಕಾಂಗ್ರೆಸ್ನ ಹಿರಿಯ ನಾಯಕರಾದ ಶ್ರೀ ನಾಗರಾಜ್ ಛಬ್ಬಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು.
ಕೇಂದ್ರ ಸಚಿವರಾದ ಶ್ರೀ @JoshiPralhad, ಸಚಿವರಾದ ಶ್ರೀ @GovindKarjol ಉಪಸ್ಥಿತರಿದ್ದರು. pic.twitter.com/sJdIkt6jto
— BJP Karnataka (@BJP4Karnataka) April 9, 2023
ನಾನು ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೆ. 2008ರಲ್ಲಿ ಎಲ್ಲೋ ಬಳ್ಳಾರಿಯಿಂದ ಕಲಘಟಗಿಯಿಂದ ಬಂದ ಸಂತೋಷ ಲಾಡ್, ಕೇವಲ ಎರಡು ತಿಂಗಳಲ್ಲಿ ಪ್ರಚಾರ ಮಾಡಿ ಚುನಾವಣೆ ಗೆದ್ದಿದ್ದರು. ಆದರೆ ಚುನಾವಣೆಯನ್ನು ಹೇಗೆ ಗೆದ್ದರು ಎಂಬುದನ್ನು ಅವರು ಮರೆತ್ತಿದ್ದಾರೆ ಎಂದು ಛಬ್ಬಿ ಹೇಳಿದ್ದರು. ಇದಕ್ಕೆ ಟಕ್ಕರ್ ಕೊಟ್ಟ ಲಾಡ್, ನಾನು ಯಾರ ತ್ಯಾಗದಿಂದ ಕಲಘಟಗಿಯಲ್ಲಿ ಗೆದ್ದಿಲ್ಲ. ಜೆಡಿಎಸ್ ತೊರೆದ ಸಂದರ್ಭದಲ್ಲಿ ಕಾಂಗ್ರೆಸ್ನಲ್ಲಿ ಜಾಗ ಸಿಕ್ಕತು. ಬಳಿಕ ಕ್ಷೇತ್ರ ಪುನರ್ವಿಂಗಡನೆಯಾಗಿ ಕಲಘಟಗಿಗೆ ಬಂದೆ. ನಮ್ಮ ಪಕ್ಷ ನಾಯಕರ, ಕಾರ್ಯಕರ್ತರ ಶ್ರಮ ಮತ್ತು ಜನರ ಆರ್ಶಿವಾದದಿಂದ ನಾನು ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂದು ಹೇಳಿದ್ದರು.
ಇವರಿಬ್ಬರ ನಡುವಿನ ವಾಗ್ವಾದದ ನಡುವೆ ಇತ್ತೀಚೆಗೆ ಬಿಡುಗಡೆಯಾದ ಎರಡನೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಲಘಟಗಿ ಟಿಕೆಟ್ ಲಾಡ್‌ಗೆ ಘೋಷಣೆಯಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ಛಬ್ಬಿ, ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿತ್ತು. ಆದರೆ ಇಂದು ಅವರು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಿಜೆಪಿಯಿಂದ ಟಿಕೆಟ್ ಪಡೆದು ಕಲಘಟಗಿ ಕ್ಷೇತ್ರದಲ್ಲಿ ಲಾಡ್ ವಿರುದ್ಧ ಸ್ಪರ್ಧಿಸುವ ಸಾಧ್ಯತೆ ಇದೆ.
ವಿಧಾನಸಭೆ ಚುಣಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:44 pm, Sun, 9 April 23