Karnataka Assembly Polls: ಎನ್ ವೈ ಬಾಲಕೃಷ್ಣ ರಾಜೀನಾಮೆ ಬಗ್ಗೆ ಕೇಳಿದಾಗ ನಳಿನ್ ಕುಮಾರ್ ಕಟೀಲ್ ಸ್ಪಷ್ಟ ಉತ್ತರ ನೀಡಲಿಲ್ಲ
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿವೈ ವಿಜಯೇಂದ್ರ ಸ್ಪರ್ಧಿಸುತ್ತಾರೆಯೇ ಎಂದು ಕೇಳಿದ್ದಕ್ಕೆ ಕಟೀಲ್ ಸ್ಪಷ್ಟ ಉತ್ತರ ನೀಡದೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ, ಇನ್ನೂ ಇತ್ಯರ್ಥಗೊಂಡಿರದ ವಿಷಯ ಅದು ಎನ್ನುತ್ತಾರೆ.
ಬಳ್ಳಾರಿ: ಬಿಜೆಪಿಯ ವಿಜಯಸಂಕಲ್ಪ ಯಾತ್ರೆ ಅದ್ಭುತವಾಗಿ ಸಾಗಿದೆ, ಜನರಿಂದ ಭಾರಿ ಪ್ರಮಾಣದಲ್ಲಿ ಬೆಂಬಲ ಸಿಗುತ್ತಿದೆ ಮತ್ತು ಮತದಾರರ ಒಲವು ಪಕ್ಷದೆಡೆ ಇರುವುದರಿಂದ ಸ್ಪಷ್ಟ ಬಹುಮತ ನಮಗೆ ಸಿಗಲಿದೆ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಹೇಳಿದರು. ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿ ಳೊಂದಿಗೆ ಮಾತಾಡಿದ ಕಟೀಲ್, ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ (Siddaramaiah) ವಿರುದ್ಧ ಬಿವೈ ವಿಜಯೇಂದ್ರ (BY Vijayendra) ಸ್ಪರ್ಧಿಸುತ್ತಾರೆಯೇ ಎಂದು ಕೇಳಿದ್ದಕ್ಕೆ ಸ್ಪಷ್ಟ ಉತ್ತರ ನೀಡಲ್ಲ. ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ, ಇನ್ನೂ ಇತ್ಯರ್ಥಗೊಂಡಿರದ ವಿಷಯ ಅದು ಎನ್ನುತ್ತಾರೆ. ಆದರೆ ಮಾಧ್ಯಮದವರು ಎನ್ ವೈ ಬಾಲಕೃಷ್ಣ (NY Balakrishna) ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಷಯ ಕೇಳಿದಾಗ ಮುಗುಮ್ಮಾಗಿ ಅಲ್ಲಿಂದ ಜಾರುತ್ತಾರೆ. ಅದಕ್ಕೂ ಮೊದಲು ಆಡಿದ ಮಾತಿನಲ್ಲಿ ಅವರು ರಾಜೀನಾಮೆ ನೀಡಲು ಕಾರಣವೇನು ಅಂತ ತಿಳಿಸಿಲ್ಲ ಎಂದು ಹೇಳಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ