ನಳಿನ್ ಕುಮಾರ್ ಕಟೀಲ್ ಆಡುವ ಭಾಷೆ ಖದ್ದು ಅವರಿಗಾದರೂ ಅರ್ಥವಾಗತ್ತೋ ಇಲ್ವೋ? ಹೆಚ್ ಡಿ ಕುಮಾರಸ್ವಾಮಿ

ನಳಿನ್ ಕುಮಾರ್ ಕಟೀಲ್ ಆಡುವ ಭಾಷೆ ಖದ್ದು ಅವರಿಗಾದರೂ ಅರ್ಥವಾಗತ್ತೋ ಇಲ್ವೋ? ಹೆಚ್ ಡಿ ಕುಮಾರಸ್ವಾಮಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 15, 2023 | 1:15 PM

ಅವರೇನು ಮಾತಾಡುತ್ತಾರೋ ತನಗಂತೂ ಇದುವರೆಗೆ ಅರ್ಥವಾಗಿಲ್ಲ, ಅಸಲಿಗೆ ನಳಿನ್ ಆಡುವ ಭಾಷೆ ಖುದ್ದು ಅವರಿಗೆ ಅರ್ಥವಾಗಲ್ಲ ಅನಿಸುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.

ಹುಬ್ಬಳ್ಳಿ: ಮಂಗಳವಾರದಂದು ಕೊಪ್ಪಳ ಜಿಲ್ಲೆಯಲ್ಲಿ ಸಿದ್ದರಾಮಯ್ಯನವರ (Siddaramaiah) ವಿರುದ್ಧ ಟೀಕೆಗಳನ್ನು ಮಾಡುತ್ತಾ ಲೇವಡಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರನ್ನು ಇಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಗೇಲಿ ಮಾಡಿದರು. ಸಿದ್ದರಾಮಯ್ಯನವರು ಹೆಚ್ ಡಿ ದೇವೇಗೌಡರಂಥವರಿಗೇ ಮೋಸ ಮಾಡಿ ಈಚೆ ಬಂದಿದ್ದಾರೆ ಅವರನ್ನು ನಂಬಬೇಡಿ ಅಂತ ನಳಿನ್ ಹೇಳಿದ್ದನ್ನು ಕುಮಾರಸ್ವಾಮಿಯವರ ಗಮನಕ್ಕೆ ತಂದಾಗ; ಅವರೇನು ಮಾತಾಡುತ್ತಾರೋ ತನಗಂತೂ ಇದುವರೆಗೆ ಅರ್ಥವಾಗಿಲ್ಲ, ಅಸಲಿಗೆ ನಳಿನ್ ಆಡುವ ಭಾಷೆ ಖುದ್ದು ಅವರಿಗೆ ಅರ್ಥವಾಗಲ್ಲ ಅನಿಸುತ್ತದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ