ಅಶೋಕ ಪುನಃ ಮಂಡ್ಯ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಬಂದರೆ ಅವರನ್ನು ಸ್ವಾಗತಿಸುತ್ತೇವೆ: ಕೆಸಿ ನಾರಾಯಣಗೌಡ, ಸಚಿವರು

ಅಶೋಕ ಪುನಃ ಮಂಡ್ಯ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಬಂದರೆ ಅವರನ್ನು ಸ್ವಾಗತಿಸುತ್ತೇವೆ: ಕೆಸಿ ನಾರಾಯಣಗೌಡ, ಸಚಿವರು

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 15, 2023 | 11:45 AM

ಪಕ್ಷದಲ್ಲಿ ತಾನಿನ್ನೂ ಚಿಕ್ಕವ, ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರಲ್ಲದೆ, ಪುನಃ ಅಶೋಕ ಅವರನ್ನೇ ಹೈಕಮಾಂಡ್ ನೇಮಕ ಮಾಡಿದರೂ ನಿರ್ಧಾರವನ್ನು ಸ್ವಾಗತಿಸುವುದಾಗಿ ನಾರಾಯಣಗೌಡ ಹೇಳಿದರು.

ಮಂಡ್ಯ: ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಆರ್ ಅಶೋಕ (R Ashoka) ಅವರು ಆ ಜವಾಬ್ದಾರಿಯನ್ನು ತ್ಯಜಿಸಿರುವ ಕತೆ ನಿಮಗೆ ಗೊತ್ತಿದೆ. ಅದಕ್ಕೂ ಮೊದಲು, ಜಿಲ್ಲೆಯ ಹಲವಾರು ಭಾಗಗಳಲ್ಲಿ ಅಶೋಕ ಗೋ ಬ್ಯಾಕ್ (Ashoka Go Back) ಅಂತ ಹಲವು ಅಭಿಯಾನಗಳು ನಡೆದಿದ್ದವು. ಇದೇ ಹಿನ್ನೆಲೆಯಲ್ಲಿ ಕೆಆರ್ ಪೇಟೆ ಶಾಸಕ ಮತ್ತು ಸಚಿವ ಕೆಸಿ ನಾರಾಯಣಗೌಡ (KC Narayanagowda) ಅವರು ಕ್ಷೇತ್ರದ ಸಂತೆಬಾಚಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ ತಮಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವುದು ಬೇಕಿಲ್ಲ ಎಂದರು. ಹಾಗಾದರೆ ಅವರು ಯಾವುದಾದರೂ ಅಭ್ಯರ್ಥಿಯನ್ನು ಸೂಚಿಸುತ್ತಾರಾ ಅಂತ ಕೇಳಿದ್ದಕ್ಕೆ, ಪಕ್ಷದಲ್ಲಿ ತಾನಿನ್ನೂ ಚಿಕ್ಕವ, ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರಲ್ಲದೆ, ಪುನಃ ಅಶೋಕ ಅವರನ್ನೇ ಹೈಕಮಾಂಡ್ ನೇಮಕ ಮಾಡಿದರೂ ನಿರ್ಧಾರವನ್ನು ಸ್ವಾಗತಿಸುವುದಾಗಿ ನಾರಾಯಣಗೌಡ ಹೇಳಿದರು. ಅವರ ಮಾತುಗಳಲ್ಲಿ ಅಶೋಕ್ ಕುರಿತ ಅಸಮಾಧಾನ ಸ್ಪಷ್ಟವಾಗಿ ಗೊತ್ತಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ