NHAI: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇ ಟೋಲ್ ದರವನ್ನು ಎರಡೇ ವಾರಗಳ ನಂತರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

NHAI: ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್​ವೇ ಟೋಲ್ ದರವನ್ನು ಎರಡೇ ವಾರಗಳ ನಂತರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Mar 31, 2023 | 12:27 PM

ಕಾರ್, ವ್ಯಾನ್ ಮತ್ತು ಜೀಪ್ ಗಳ ಮೇಲೆ ಮೊದಲ ಎರಡು ವಾರಗಳವರೆಗೆ ಸಂಗ್ರಹಿಲಾಗುತ್ತಿದ್ದ ಶುಲ್ಕವನ್ನು ರೂ. 30 ಹೆಚ್ಚಿಸಿ (ವನ್ ವೇ, ಏಕಮುಖ) ರೂ. 165 ಪೀಕಾಲಾಗುತ್ತಿದೆ.

ಬೆಂಗಳೂರು: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ  (National Highway Authority of India) ಅಕ್ಷರಶಃ ವಾಹನ ಸವಾರರ ಸುಲಿಗೆ ನಿಂತಿರುವುದು ಹೇವರಿಕೆ ಹುಟ್ಟಿಸುತ್ತದೆ ಅಂತ ಹೇಳಿದರೆ ಅಂಡರ್-ಸ್ಟೇಟ್ ಮೆಂಟ್ ಅನಿಸಿಕೊಳ್ಳುತ್ತದೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ (Bengaluru-Mysuru Expressway) ಲೋಕಾರ್ಪಣೆಗೊಂಡು ಕೇವಲ ಎರಡು ವಾರ ಕಳೆದಿದೆ. ಸರ್ವಿಸ್ ರಸ್ತೆಗಳ ಸೌಲಭ್ಯ ಕಲ್ಪಿಸದೆ ದುಬಾರಿ ಟೋಲ್ ದರ (toll fee) ಸಂಗ್ರಹಿಸುತ್ತಿದ್ದುದ್ದಕ್ಕೆ ಜನ ರೊಚ್ಚಿಗೆದ್ದು ಪ್ರತಿಭಟನೆಗಳನ್ನು ನಡೆಸಿದ್ದು ಕನ್ನಡಿಗರಿಗೆ ಗೊತ್ತಿರುವ ಸಂಗತಿಯೇ. ಗಾಯದ  ಮೇಲೆ ಬರೆ ಎಳೆದಂತೆ ಈಗ ಪ್ರಾಧಿಕಾರವು ಎಲ್ಲ ವಾಹನಗಳ ಟೋಲ್ ಶುಲ್ಕವನ್ನ ದಿಢೀರಾಗಿ ಹೆಚ್ಚಿಸಿದೆ. ಕಾರ್, ವ್ಯಾನ್ ಮತ್ತು ಜೀಪ್ ಗಳ ಮೇಲೆ ಮೊದಲ ಎರಡು ವಾರಗಳವರೆಗೆ ಸಂಗ್ರಹಿಲಾಗುತ್ತಿದ್ದ ಶುಲ್ಕವನ್ನು ರೂ. 30 ಹೆಚ್ಚಿಸಿ (ವನ್ ವೇ, ಏಕಮುಖ) ರೂ. 165 ಪೀಕಾಲಾಗುತ್ತಿದೆ. ಟೂ ವೇ ದರವನ್ನು ರೂ. 45 ಹೆಚ್ಚಿಸಿ ರೂ. 250 ಮಾಡಲಾಗಿದೆ. ಪ್ರಾಧಿಕಾರದ ದುರಾಸೆ ಮತ್ತು ಡೆವಿಲ್ ಮೇ ಕೇರ್ ಧೋರಣೆ ವಾಹನ ಸವಾರರನ್ನು ಕಂಗಾಲಾಗಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 31, 2023 12:24 PM