Expresswoe! ನೂತನ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಜಲಾವೃತ, ಮುಖವುಳಿಸಿಕೊಳ್ಳಲು ಸ್ಥಳಕ್ಕೆ ಧಾವಿಸಿದ ಎನ್ ಹೆಚ್ ಎ ಐ ಅಧಿಕಾರಿಗಳು!
ಅಧಿಕಾರಿಗಳು ಚರಂಡಿಯ ಮೂಲಕ ನೀರು ಹರಿದುಹೋಗುವುದಕ್ಕೆ ಅನುಕೂಲವಾಗುವ ಕೆಲಸ ಮಾಡುತ್ತಿದ್ದಾರೆ. ವಾಹನ ಸವಾರರು ಕೇಂದ್ರ, ರಾಜ್ಯ ಸರ್ಕಾರಗಳ ಜೊತೆಗೆ ಎನ್ ಹೆಚ್ ಎ ಐ ಆಧಿಕಾರಿಗಳ ವಿರುದ್ಧವೂ ರೋಷ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ (Bengaluru Mysuru Expressway) ದುರವಸ್ಥೆ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆಯೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು (NHAI officials) ಸ್ಥಳಕ್ಕೆ ಧಾವಿಸಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಕೇವಲ ಒಂದು ರಾತ್ರಿಯ ಮಳೆಗೆ ಜಿಲ್ಲೆಯ ಸಂಗಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತಗೊಂಡು ವಾಹನ ಸಂಚಾರಕ್ಕ ಭಾರೀ ಅಡಚನಣೆ ಉಂಟಾಗಿತ್ತು. ಅಧಿಕಾರಿಗಳು ಚರಂಡಿಯ ಮೂಲಕ ನೀರು ಹರಿದುಹೋಗುವುದಕ್ಕೆ ಅನುಕೂಲವಾಗುವ ಕೆಲಸ ಮಾಡುತ್ತಿದ್ದಾರೆ. ವಾಹನ ಸವಾರರು (motorists) ಮಾತ್ರ ಕೇಂದ್ರ, ರಾಜ್ಯ ಸರ್ಕಾರಗಳ ಜೊತೆಗೆ ಎನ್ ಹೆಚ್ ಎ ಐ ಆಧಿಕಾರಿಗಳ ವಿರುದ್ಧವೂ ರೋಷ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 18, 2023 11:44 AM
Latest Videos