ರಾಮನಗರ: ವಿಡಿಯೋನಲ್ಲಿ ನಿಮಗೆ ಕಾಣುತ್ತಿರೋದು ಬೆಂಗಳೂರಿನ ರಸ್ತೆ ಅಲ್ಲ ಮಾರಾಯ್ರೇ. ಮಾರ್ಚ್ 12ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದ, ಅದಕ್ಕೂ ಮೊದಲು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ವೈಮಾನಿಕ ಸಮೀಕ್ಷೆ ನಡೆಸಿ ರಸ್ತೆ ಕಾಮಗಾರಿಯನ್ನು ಭೇಷ್ ಎಂದು ಪ್ರಶಂಸಿದ, ಸಂಸದ ಪ್ರತಾಪ್ ಸಿಂಹ ಮತ್ತು ಇತರ ಬಿಜೆಪಿ ನಾಯಕರು ಅತ್ಯುತ್ತುಮ ಗುಣಮ್ಟದ, ವಿಶ್ವದರ್ಜೆಯ ಕಾಮಗಾರಿ ಅಂತ ಪ್ರತಿದಿನ ಸರ್ಟಿಫೀಕೇಟ್ ನೀಡಿದ ಮತ್ತು ಟೋಲ್ ಸಂಗ್ರಹಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿದಿನ ವಾಹನ ಸವಾರರು ಜಗಳ ಮಾಡುತ್ತಿರುವ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ (Bengaluru-Mysuru Expressway). ರಾಮನಗರ ತಾಲ್ಲೂಕಿನ ಸಂಗಬಸವನದೊಡ್ಡಿಯ ಬಳಿ ಹೆದ್ದಾರಿಯು ಜಲಾವೃತಗೊಂಡು ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವರ್ಷದ ಮೊದಲ (ಕಡು ಬೇಸಿಗೆಯ) ಮಳೆಗೆ ಈ ಪರಿಸ್ಥಿತಿಯಾದರೆ, ಮಳೆಗಾಲದಲ್ಲಿ ಹೆಂಗೆ ಸ್ವಾಮಿ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ