Rally reaches Thane district: ಮಹಾರಾಷ್ಟ್ರದಲ್ಲಿ ತೀವ್ರಗೊಳ್ಳುತ್ತಿರುವ ರೈತ ಪ್ರತಿಭಟನೆ, ಬೇಡಿಕೆ ಈಡೇರಿಸದಿದ್ದರೆ ಮುಂಬೈಗೆ ಲಗ್ಗೆಯಿಡುವ ಎಚ್ಚರಿಕೆ!

Rally reaches Thane district: ಮಹಾರಾಷ್ಟ್ರದಲ್ಲಿ ತೀವ್ರಗೊಳ್ಳುತ್ತಿರುವ ರೈತ ಪ್ರತಿಭಟನೆ, ಬೇಡಿಕೆ ಈಡೇರಿಸದಿದ್ದರೆ ಮುಂಬೈಗೆ ಲಗ್ಗೆಯಿಡುವ ಎಚ್ಚರಿಕೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 18, 2023 | 1:55 PM

ಅಕಾಲಿಕ ಮಳೆಯಿಂದಾಗಿ ರೈತರು ಅನುಭವಿಸಿರುವ ಹಾನಿಯ ಪ್ರಮಾಣವನ್ನು ಅಳೆಯಲು ಒಂದು ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಸೋಮವಾರ ವಿಧಾನ ಸಭೆಯಲ್ಲಿ ಹೇಳಿದ್ದರು.

ಥಾಣೆ: ನಾಲ್ಕು ದಿನಗಳ ಹಿಂದೆ ನಾಸಿಕ್ ನಿಂದ ಆರಂಭವಾದ ಮಹಾರಾಷ್ಟ್ರ ರೈತರ ಬೃಹತ್ ಪ್ರತಿಭಟನಾ ರ‍್ಯಾಲಿ (protest march) ಶುಕ್ರವಾರದಂದು ಥಾಣೆ ಜಿಲ್ಲೆಯನ್ನು ಪ್ರವೇಶಿಸಿದೆ. ರೈತರು ಪ್ರಸ್ತಾಪಿಸುತ್ತಿರುವ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ರ‍್ಯಾಲಿ ಮುಂದಕ್ಕೆ ಸಾಗಲಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸಿಪಿಎಮ್ (CPM) ಧುರೀಣ ಜಿವಾ ಪಾಂಡು ಗವಿತ್ (Jiva Pandu Gavit) ಹೇಳಿದರು.

‘ಸರ್ಕಾರವು ಸೋಮವಾರ ಅಥವಾ ಮಂಗಳವಾರ ನಮ್ಮ ಬೇಡಿಕೆಗಳ ಬಗ್ಗೆ ಗಮನ ಹರಿಸುವ ನಿರೀಕ್ಷೆ ನಮಗಿದೆ. ಅದು ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಮಾನ್ಯ ಮಾಡಿದರೆ ಮುಷ್ಕರ ನಿಲ್ಲಿಸುತ್ತೇವೆ ಇಲ್ಲದಿದ್ದರೆ ಮುಂಬೈವರೆಗೆ ಇದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಇಷ್ಟು ಭಾರೀ ಸಂಖ್ಯೆಯ ರೈತರು ಮುಂಬೈ ಮಹಾನಗರವನ್ನು ತಲುಪಿದ್ದೇಯಾದರೆ ಅದು ನಿಸ್ಸಂದೇಹವಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ, ಈ ವಿಷಯದ ಅರಿವು ಸರ್ಕಾರಕ್ಕಿದೆ,’ ಎಂದು ಗವಿತ್ ಹೇಳಿದರು.

ಇದನ್ನೂ ಓದಿ:  3ಸಾವಿರ ಅಡಿ ಎತ್ತರದಲ್ಲಿ ಬೆಟ್ಟಗಳ ಮಧ್ಯೆ ನೆಲೆಗೊಂಡ ಗಣೇಶನ ವಿಗ್ರಹ, ಇಲ್ಲಿದೆ ನೋಡಿ ವಿಡಿಯೋ

ಅಕಾಲಿಕ ಮಳೆಯಿಂದಾಗಿ ರೈತರು ಅನುಭವಿಸಿರುವ ಹಾನಿಯ ಪ್ರಮಾಣವನ್ನು ಅಳೆಯಲು ಒಂದು ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಏಕನಾಥ ಶಿಂಧೆ ಸೋಮವಾರ ವಿಧಾನ ಸಭೆಯಲ್ಲಿ ಹೇಳಿದ್ದರು.

‘ನಾವು ಯಾವತ್ತಿಗೂ ರೈತರ ಪರವಾಗಿದ್ದೇವೆ ಮತ್ತು ಮುಂದೆಯೂ ಅವರೊಂದಿಗಿರುತ್ತೇವೆ. ಈ ಹಿಂದೆ ಅವರಿಗೆ ನೆರವಾಗಲು ಕಾನೂನು ಕಟ್ಟಳೆಗಳನ್ನು ಪಕ್ಕಕ್ಕಿಟ್ಟಿದ್ದೆವು ಮತ್ತು ಈಗಲೂ ಅದನ್ನು ಮಾಡಲು ಹಿಂಜರಿಯಲಾರೆವು. ನಾವು ರೈತರೊಂದಿಗಿದ್ದೇವೆ ಅಂತ ಮತ್ತೊಮ್ಮೆ ಭರವಸೆ ನೀಡುತ್ತೇನೆ, ಇದು ರೈತರ ಸರ್ಕಾರ,’ ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದ್ದರು.

ಇದನ್ನೂ ಓದಿ:  Video Viral: ಬಿಎಂಟಿಸಿಯ ಎಲೆಕ್ಟ್ರಿಕ್​ ಬಸ್​​ನ ವಿಶೇಷ ಸೌಲಭ್ಯ ಕಂಡು ಕಂಡಕ್ಟರ್​ಗೆ ಕೈಮುಗಿದ ವಿದೇಶಿ ಪ್ರಜೆ

ಪ್ರತಿಭಟನೆ ನಡೆಸುತ್ತಿರುವ ರೈತರು ಈರುಳ್ಳಿ ಬೆಳೆಗಾರರಿಗೆ ಪ್ರತಿ ಕ್ವಿಂಟಾಲ್ ಗೆ ರೂ. 600 ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಹಾಗೆಯೇ, ಪ್ರತಿದಿನ 12-ಗಂಟೆ ಕಾಲ ತಡೆರಹಿತ ವಿದ್ಯುತ್ ಪೂರೈಸಿಬೇಕೆಂದು ಬೇಡಿಕೆಯಿಟ್ಟಿರುವ ರೈತರು ತಮ್ಮ ಕೃಷಿ ಸಾಲಗಳನ್ನು ಸಹ ಮನ್ನಾ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ