Video Viral: ಬಿಎಂಟಿಸಿಯ ಎಲೆಕ್ಟ್ರಿಕ್​ ಬಸ್​​ನ ವಿಶೇಷ ಸೌಲಭ್ಯ ಕಂಡು ಕಂಡಕ್ಟರ್​ಗೆ ಕೈಮುಗಿದ ವಿದೇಶಿ ಪ್ರಜೆ

ಬಿಎಂಟಿಸಿಯ ಎಲೆಕ್ಟ್ರಿಕ್​ ಬಸ್​ ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್​ಫಾರಂ​ ಸೌಲಭ್ಯ ಹೊಂದಿದ್ದು, ಇದರಿಂದ ವಿಕಲಚೇತನರು ಸಂಚರಿಸಲು ಅನುಕೂಲವಾಗಿದೆ.

Video Viral: ಬಿಎಂಟಿಸಿಯ ಎಲೆಕ್ಟ್ರಿಕ್​ ಬಸ್​​ನ ವಿಶೇಷ ಸೌಲಭ್ಯ ಕಂಡು ಕಂಡಕ್ಟರ್​ಗೆ ಕೈಮುಗಿದ ವಿದೇಶಿ ಪ್ರಜೆ
ಬಿಎಂಟಿಸಿ ಗಾಲಿಕುರ್ಚಿ-ಲಿಫ್ಟಿಂಗ್​
Follow us
|

Updated on:Mar 18, 2023 | 6:13 AM

ಬೆಂಗಳೂರು: ಸಿಲಿಕಾನ್​ ಸಿಟಿ ಜನರ ಜೀವನಾಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ಎಲ್ಲ ಮೂಲಗಳಿಗು ಜನರನ್ನು ತಲುಪಿಸುತ್ತದೆ. ಬಿಎಂಟಿಸಿಯಲ್ಲಿ ನಿತ್ಯ ಲಕ್ಷಾಂತರ ಜನರು ಸುರಕ್ಷಿತವಾಗಿ ಸಂಚರಿಸುತ್ತಾರೆ. ಆರಾಮದಾಯಕ ಪ್ರಯಾಣಕ್ಕೆ ಬಸ್​ಗಳು ಅನುಕೂಲವಾಗಿದೆ. ಬಿಎಂಟಿಸಿ ಹೊಸ ಹೊಸ ಬಸ್​ಗಳನ್ನು ಪರಿಚಯಿಸುತ್ತಿದೆ. ಪರಿಸರ ಸ್ನೇಹಿ ಎಲೆಕ್ಟ್ರಿಕ್​ ಬಸ್​, ಎಂಡಿ 15 ( ಶೇ 15 ರಷ್ಟು ಮಿಥೈಲ್​-ಡಿಸೇಲ್ ಮಿಶ್ರಿತ) ಬಸ್​ ಹೀಗೆ ಹೊಸ ಹೊಸ ಬಸ್​ಗಳನ್ನು ರಸ್ತೆಗೆ ಇಳಿಸುತ್ತದೆ.​ ಎಲೆಕ್ಟ್ರಿಕ್​ ಬಸ್​ನಲ್ಲಿ ವಿಕಲಚೇತನರು ವೀಲ್​​ಚೇರ್​ ಸಮೇತ ಬಸ್​ ಹತ್ತಲು ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್​ಫಾರಂ ಸೌಲಭ್ಯ ಇದೆ. ವಿಕಲಚೇತನ ವಿದೇಶಿ ಪ್ರಜೆಯೊಬ್ಬರು ವೀಲ್​ ಚೇರ್​ ಸಮೇತ ಬಸ್​ ಹತ್ತಿದ್ದು, ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್​ಫಾರಂ​ ಸೌಲಭ್ಯ ಕಂಡು ಆ ಪ್ರಜೆ ಕಂಡೆಕ್ಟ್​​ರಗೆ ಕೈ ಮುಗಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವಿಡಿಯೋದಲ್ಲಿ ಇಬ್ಬರು ವಿದೇಶಿ ಪ್ರಯಾಣಿಕರು ಬಸ್​ಗಾಗಿ ಕಾಯುತ್ತಿರುತ್ತಾರೆ. ಈ ವೇಳೆ 226N ಎಲೆಕ್ಟ್ರಿಕ್​ ಬಸ್​​ ಬರುತ್ತದೆ. ಇಬ್ಬರು ವಿದೇಶಿ ಪ್ರಯಾಣಿಕರಲ್ಲಿ ಓರ್ವ ವಿಕಲಚೇತನ ವ್ಯಕ್ತಿಯಾಗಿದ್ದು, ವೀಲ್​ಚೇರ್​​ನಲ್ಲಿ ಕುಳಿತಿರುತ್ತಾರೆ. ವಿಕಲಚೇತನ ವ್ಯಕ್ತಿ ವೀಲ್​ಚೇರ್​ ಸಮೇತ ಬಸ್​ ಹತ್ತಲು ಚಾಲಕ ರಿಮೋಟ್​ ಮೂಲಕ ಗಾಲಿಕುರ್ಚಿ-ಲಿಫ್ಟಿಂಗ್ ಪ್ಲಾಟ್​ಫಾರಂನ್ನು ಹೊರತೆಗೆಯುತ್ತಾರೆ. ಅದು ನೆಲದ ಸಮಾನಂತರವಾಗಿ ಹಾಸಿಕೊಳ್ಳುತ್ತದೆ. ನಂತರ ಅದರ ಮೇಲೆ ವೀಲ್​ಚೇರ್​ ಸಮೇತ ವ್ಯಕ್ತಿಯನ್ನು ಕೂರಿಸಲಾಗುತ್ತದೆ. ನಂತರ ನಿಧಾನವಾಗಿ ಲಿಫ್ಟರ್​ ಮೇಲೆ ಹೋಗಿ ಬಸ್​ನ​​ ಸಮಾನಾಂತರವಾಗಿ ನಿಲ್ಲುತ್ತದೆ. ಬಳಿಕ ವಿಕಲಚೇತನ ವ್ಯಕ್ತಿ ಒಳಗೆ ಹೋಗುತ್ತಾನೆ. ಇದನ್ನು ಕಂಡ ಮತ್ತೊಬ್ಬ ವಿದೇಶಿ ಪ್ರಯಾಣಿಕ ಕಂಡಕ್ಟರ್​ಗೆ ಕೈಮುಗಿಯುತ್ತಾರೆ.

ವಿಕಲಚೇತನರಿಗೆ ಪ್ರಯಾಣವನ್ನು ಸುಲಭಗೊಳಿಸಲು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೊದಲ ಬಾರಿಗೆ ಗಾಲಿಕುರ್ಚಿ-ಲಿಫ್ಟಿಂಗ್ ಸೌಲಭ್ಯವನ್ನು ಹೊಂದಿರುವ ಬಸ್‌ಗಳನ್ನು ಕಳೆದ ವರ್ಷ ಪರಿಚಯಿಸಿದೆ. ಇದನ್ನು ಬಸ್ ಸಿಬ್ಬಂದಿ ನಿರ್ವಹಿಸುತ್ತಾರೆ. ಬಿಎಂಟಿಸಿ ವಿಡಿಯೋ ಟ್ವೀಟ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:00 am, Sat, 18 March 23

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು