ಮಟ್ಕಾ ಟೀ ಕುಡಿದಿರುತ್ತೀರಿ, ಆದ್ರೆ ಮಟ್ಕಾ ದೋಸೆ ತಿಂದಿದ್ದೀರಾ? ಇಲ್ಲಿದೆ ನೋಡಿ ವೈರಲ್​ ವಿಡಿಯೋ

ಚೀಸ್ ಮತ್ತು ಮೇಯನೇಸ್‌ ಬಳಸಿ ಮಟ್ಕಾ ದೋಸೆ (MatkaDosa) ತಯಾರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ.

ಮಟ್ಕಾ ಟೀ ಕುಡಿದಿರುತ್ತೀರಿ, ಆದ್ರೆ ಮಟ್ಕಾ ದೋಸೆ ತಿಂದಿದ್ದೀರಾ? ಇಲ್ಲಿದೆ ನೋಡಿ ವೈರಲ್​ ವಿಡಿಯೋ
ಮಟ್ಕಾ ದೋಸೆ Image Credit source: Twitter
Follow us
ಅಕ್ಷತಾ ವರ್ಕಾಡಿ
|

Updated on:Mar 17, 2023 | 12:04 PM

ಚೀಸ್ ಮತ್ತು ಮೇಯನೇಸ್‌ ಬಳಸಿ ಮಟ್ಕಾ ದೋಸೆ (MatkaDosa) ತಯಾರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಕೊರೊನಾ ನಂತರದ ದಿನಗಳಲ್ಲಿ ಸೋಶಿಯಲ್​​ ಮೀಡಿಯಾದಲ್ಲಿ ಹೆಚ್ಚಾಗಿ ಫುಡ್​​ ವ್ಲಾಗ್​​​ ಕಂಡುಬರುತ್ತದೆ. ಜೊತೆಗೆ ಆಹಾರಗಳಲ್ಲಿಯೇ ಹೊಸ ಹೊಸ ಆವಿಷ್ಕಾರಗಳನ್ನು ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ. ಇಂತಹ ವಿಡಿಯೋಗಳು ಮಿಲಿಯನ್​​ ವೀಕ್ಷಣೆಯನ್ನು ಪಡೆದುಕೊಳ್ಳುತ್ತದೆ. ಅಂತದ್ದೇ ಒಂದು ವಿಡಿಯೋ ಇದೀಗಾ ಭಾರೀ ವೈರಲ್​​ ಆಗಿದೆ. ನೀವು ಸಾಮಾನ್ಯವಾಗಿ ಮಟ್ಕಾ ಟೀ ಕುಡಿದಿರುತ್ತೀರಿ, ಆದರೆ ಇಲ್ಲೊಂದು ಮಟ್ಕಾ ದೋಸೆ ವೈರಲ್​​ ಆಗುತ್ತಿದೆ. ಇಲ್ಲಿದೆ ನೋಡಿ ಮಟ್ಕಾ ದೋಸೆ ವೈರಲ್​ ವಿಡಿಯೋ ಇಲ್ಲಿದೆ.

ಮಟ್ಕಾ ದೋಸೆಯ ವಿಡಿಯೋವನ್ನು ದೀಪಕ್ ಪ್ರಭು ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದು, #MatkaDosa ಎಂದು ಕ್ಯಾಪ್ಷನ್​​ ಹಾಕಿದ್ದಾರೆ. ವಿಡಿಯೋದಲ್ಲಿ ಚೀಸ್, ಮೇಯನೇಸ್ ಮತ್ತು ಸಾಸ್‌ ಹಾಕಿ ಮಟ್ಕಾ ದೋಸೆಯನ್ನು ತಯಾರಿಸಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಚೀಸ್, ಮೇಯನೇಸ್​ನ ಕಾಂಬಿನೇಷನ್​​​​ ಬಾಯಲ್ಲಿ ನಿರೂರಿಸಿದರೂ ಕೂಡ ಮಟ್ಕಾ ಏಕೆ? ಎಂದು ಸಾಕಷ್ಟು ಜನರು ಕಾಮೆಂಟ್​​ ಮಾಡಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ಮೂರು ಹೊತ್ತು ಊಟ ಸಿಗುತ್ತೇ ಎಂದು ಈತ ಮಾಡಿದ ಕೆಲಸ ಏನು ಗೊತ್ತಾ?

ಸಾಕಷ್ಟು ಟ್ವಿಟರ್ ಬಳಕೆದಾರರು ದೋಸೆ ಓಕೆ, ಮಟ್ಕಾ ಯಾಕೆ? ಎಂದು ಕಾಮೆಂಟ್​ ಮಾಡಿದ್ದಾರೆ. ಅತಿಯಾದ ಚೀಸ್​​ ಬಳಸಿ, ಸಂಪ್ರದಾಯಿಕ ತಿಂಡಿಯಾದ ದೋಸೆಯ ರುಚಿಯನ್ನು ಬದಲಾಯಿಸುತ್ತಿದ್ದಾರೆ? ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಸಿದ್ದಾರೆ. ಇನ್ನು ಕೆಲವರು ಬಾಯಲ್ಲಿ ನೀರೂರುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 12:04 pm, Fri, 17 March 23