Gujarat: ಮಗಳನ್ನು ತಪ್ಪು ಪರೀಕ್ಷಾ ಕೇಂದ್ರದಲ್ಲಿ ಬಿಟ್ಟ ತಂದೆ; ಮುಂದೇನಾಯ್ತು ಗೊತ್ತಾ?

ತಪ್ಪು ಪರೀಕ್ಷಾ ಕೇಂದ್ರಕ್ಕೆ ಬಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿನಿಯ ನೆರವಿಗೆ ಗುಜರಾತ್ ಪೊಲೀಸ್ ಒಬ್ಬರು ಬಂದಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗಿದೆ.

Gujarat: ಮಗಳನ್ನು ತಪ್ಪು ಪರೀಕ್ಷಾ ಕೇಂದ್ರದಲ್ಲಿ ಬಿಟ್ಟ ತಂದೆ; ಮುಂದೇನಾಯ್ತು ಗೊತ್ತಾ?
Gujarat police helps girl who was in wrong exam centre
Follow us
ನಯನಾ ಎಸ್​ಪಿ
|

Updated on:Mar 17, 2023 | 10:33 AM

ಅಹಮದಾಬಾದ್​: ಇದೀಗ ದೇಶದೆಲ್ಲೆಡ ಪರೀಕ್ಷೆಗಳು (Exam Preparation) ನಡೆಯುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯಲ್ಲಿ ಬ್ಯುಸಿ ಆಗಿದ್ದರೆ. ಪರೀಕ್ಷೆ ಎಂದರೆ ಮಕ್ಕಳಿಗೆ ಮಾತ್ರವಲ್ಲ ಪೋಷಕರಿಗೂ ಬಹಳಷ್ಟು ಒತ್ತಡವಿರುತ್ತದೆ. ಇದೀಗ ಅಹಮದಾಬಾದ್​ನಲ್ಲಿ (Ahmedabad) ತಂದೆಯೊಬ್ಬ ಮಗಳನ್ನು ತಪ್ಪು ಪರೀಕ್ಷಾ ಕೇಂದ್ರಕ್ಕೆ (Exam centre) ಕರೆದುಕೊಂಡು ಬಂದಿದ್ದಾನೆ. ಒತ್ತಡದಲ್ಲಿದ್ದ ತಂದೆ ಆಕೆಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ತಪ್ಪು ಪರೀಕ್ಷಾ ಕೇಂದ್ರಕ್ಕೆ ಬಂದು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿನಿಯ ನೆರವಿಗೆ ಗುಜರಾತ್ ಪೊಲೀಸ್ ಒಬ್ಬರು ಬಂದಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಈಗ ಸಖತ್ ವೈರಲ್ ಆಗಿದೆ.

ಗುಜರಾತ್ ಅಹಮದಾಬಾದ್​ನಲ್ಲಿ ತಂದೆ ತನ್ನ ಮಗಳನ್ನು ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಿ ಹೊರಟು ಹೋಗಿದ್ದಾನೆ. ಮಗಳು 15 ನಿಮಿಷಗಳ ಕಾಲ ಅವಳ ರೋಲ್ ನಂಬರ್ ಹುಡುಕಲು ಪ್ರಯತ್ನಿಸಿದಳು, ನಂತರ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಬಹಳ ಸಮಯದಿಂದ ಈಕೆ ಅಸಮಾಧಾನಗೊಂಡಿದ್ದನ್ನು ನೋಡಿದ ನಂತರ ಆಕೆಯ ಹಾಲ್ ಟಿಕೆಟ್ ತೆಗೆದುಕೊಂಡು ನೋಡಿದ್ದರೆ .ಹುಡುಗಿಯ ತಂದೆ ಅವಳನ್ನು ತಪ್ಪು ಪರೀಕ್ಷಾ ಕೇಂದ್ರಕ್ಕೆ ಡ್ರಾಪ್ ಮಾಡಿದ್ದಾರೆ, ಹುಡುಗಿಯ ನಿಜವಾದ ಪರೀಕ್ಷಾ ಕೇಂದ್ರವು ಅಲ್ಲಿಂದ 20 ಕಿಮೀ ದೂರದಲ್ಲಿದೆ ಅನ್ನೋದು ಅವರಿಗೆ ಗೊತ್ತಾಗತ್ತೆ.

ಇದನ್ನೂ ಓದಿ: ಪರೀಕ್ಷೆ ಎದುರಿಸಬೇಕಾದ ಯುದ್ಧವಲ್ಲ, ಸಂಭ್ರಮಿಸಬೇಕಾದ ಹಬ್ಬ- ಪಿ.ಎನ್ ಭಟ್

ಇಷ್ಟರಲ್ಲಿ ಪರೀಕ್ಷೆಗೆ 20 ನಿಮಿಷ ಮಾತ್ರ ಉಳಿದಿತ್ತು. ಪೊಲೀಸ್ ಇನ್ಸ್‌ಪೆಕ್ಟರ್ ತನ್ನ ಅಧಿಕೃತ ಕಾರಿನಲ್ಲಿ ಲೈಟ್ ಆನ್ ಮಾಡಿ ಸೈರನ್ ಕೂಡಾ ಹಾಕಿ ಹುಡುಗಿಯನ್ನು ಸಮಯಕ್ಕಿಂತ ಮುಂಚಿತವಾಗಿ ಆಕೆಯ ಮೂಲ ಪರೀಕ್ಷಾ ಕೇಂದ್ರಕ್ಕೆ ಕರೆತರುವ ಮೂಲಕ ಆಕೆಯ ಒಂದು ವರ್ಷ ಹಾಳಾಗದಂತೆ ರಕ್ಷಿಸಿದರು.

ಈ ಘಟನೆಯನ್ನು ಆದರ್ಶ್ ಹೆಗ್ಡೆ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು, “ಇವರು ಪೂರ್ಣ ವೇಗದಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಶಾಲಾ ಪರೀಕ್ಷಾ ಕೇಂದ್ರವನ್ನು ತಲುಪಿದರು. ಆಕೆಗೆ ಸಹಾಯ ಮಾಡಿದ್ದಕ್ಕಾಗಿ ಪೊಲೀಸ್ ಅಧಿಕಾರಿಗೆ ಧನ್ಯವಾದಗಳು. ನಮ್ಮ ಸಮಾಜದಲ್ಲಿ ಅನೇಕ ಉತ್ತಮ ಪೊಲೀಸ್ ಅಧಿಕಾರಿಗಳು ಇದ್ದಾರೆ ,” ಎಂದು ಅಧಿಕಾರಿಯನ್ನು ಹೊಗಳಿ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ಸಖತ್ ವೈರಲ್ ಆಗಿದೆ.

Published On - 7:00 pm, Thu, 16 March 23