ಬಲವಂತವಾಗಿ ಮಹಿಳೆಗೆ ಮುತ್ತು ಕೊಟ್ಟು ಓಡಿ ಹೋದ ಯುವಕ
ಕಳೆದ ಶುಕ್ರವಾರ ಸದರ್ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಕಾರ್ಯಕರ್ತೆಯೊಬ್ಬರು ಫೋನ್ನಲ್ಲಿ ಮಾತನಾಡುತ್ತಿರುವ ವೇಳೆ ಹಿಂದಿನಿಂದ ಬಂದ ಯುವಕನೊಬ್ಬ ಆಕೆಯನ್ನು ಗಟ್ಟಿಯಾಗಿ ಹಿಡಿದಿಟ್ಟು ಬಲವಂತವಾಗಿ ಚುಂಬಿಸಿ ಪಕ್ಕದಲ್ಲಿರುವ ಕಾಪೌಂಡ್ ಹಾರಿ ಓಡಿ ಹೋಗಿದ್ದಾನೆ.
ಪಾಟ್ನಾ: ಇತ್ತೀಚೆಗಷ್ಟೇ ಜಮುಯಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಮಹಿಳಾ ಆರೋಗ್ಯ ಕಾರ್ಯಕರ್ತೆಗೆ ಬಲವಂತವಾಗಿ ಚುಂಬಿಸಿ ಓಡಿ ಹೋಗುತ್ತಿರುವುದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಶೋಧ ನಡೆಸಿದ್ದಾರೆ. ಕಳೆದ ಶುಕ್ರವಾರ ಸದರ್ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಕಾರ್ಯಕರ್ತೆಯೊಬ್ಬರು ಫೋನ್ನಲ್ಲಿ ಮಾತನಾಡುತ್ತಿರುವ ವೇಳೆ ಹಿಂದಿನಿಂದ ಬಂದ ಯುವಕನೊಬ್ಬ ಆಕೆಯನ್ನು ಗಟ್ಟಿಯಾಗಿ ಹಿಡಿದಿಟ್ಟು ಬಲವಂತವಾಗಿ ಚುಂಬಿಸಿ ಪಕ್ಕದಲ್ಲಿರುವ ಕಾಪೌಂಡ್ ಹಾರಿ ಓಡಿ ಹೋಗಿದ್ದಾನೆ.
#WATCH बिहार: जमुई में महिला स्वास्थ्यकर्मी को जबरन किस करने का वीडियो वायरल हुआ।
DSP अभिषेक कुमार सिंह ने बताया, “पुलिस आरोपी की तलाश कर रही है। विभिन्न धाराओं में मामला दर्ज़ कर लिया गया है। प्रथम दृष्टि में सामने आया है कि उन दोनों में पहले से संबंध थे।” pic.twitter.com/a0wx7nO1N6
— ANI_HindiNews (@AHindinews) March 13, 2023
ಸಿಸಿಟಿವಿಯಲ್ಲಿ ಸರೆಯಾಗಿದ್ದ ವಿಡಿಯೋ ಇದೀಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ. ಮಹಿಳೆ ಈಗಾಗಲೇ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪ್ರಯತ್ನ ಮುಂದುವರಿದಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಗುವುದು ಎಂದು ಜಮುಯಿ ಉಪ ಎಸ್ಪಿ ರಾಕೇಶ್ ಕುಮಾರ್ ಮಂಗಳವಾರ ಟಿಒಐ ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ರೀಲ್ಸ್ಗಾಗಿ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಕಾರು ಓಡಿಸಿದ ವ್ಯಕ್ತಿ, ವಿಡಿಯೋ ವೈರಲ್
ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಮತ್ತು ಲೈಂಗಿಕ ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸಲು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸಾಕಷ್ಟು ಬಳಕೆದಾರರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: